ಶ್ರೀನಗರ: ಪೂಂಚ್ ಮತ್ತು ನೌಶೇರಾ ವಲಯದಲ್ಲಿ ಮತ್ತೊಮ್ಮೆ ಗಡಿನಿಯಮ ಉಲ್ಲಂಘನೆಯಾಗಿದೆ. ಪಾಕಿಸ್ತಾನದವರಿಂದ ಎಲ್‌ಒಸಿ ಮೇಲೆ ಫೈರಿಂಗ್ ಆಗಿದ್ದು ಭಾರತೀಯ ಸೇನೆಯೂ ಇದಕ್ಕೆ ತಕ್ಕ ಪ್ರತ್ಯುತ್ತರ ನೀಡಿದೆ.
ಪೂಂಚ್ ಜಿಲ್ಲೆಯ ಮಾಂಕೋಟಿ ಮತ್ತು ಕೃಷ್ಣ ಕಣಿವೆ ವಲಯದ ಗಡಿಭಾಗದುದ್ದಕ್ಕೂ ಪಾಕಿಸ್ತಾನ ಗುಂಡು ಹಾರಿಸಿದ್ದು, ಪೂಂಚ್ ಹೊರತುಪಡಿಸಿ, ರಾಜೌರಿ ಜಿಲ್ಲೆಯ ನೌಶೇರಾ ಸೆಕ್ಟರ್‌ನಲ್ಲಿಯೂ ಸಹ ನಿಯಮ ಉಲ್ಲಂಘನೆ ಮಾಡಿರುವುದು ಕಂಡು ಬಂದಿದೆ.
ಗಡಿ ನಿಯಮಗಳನ್ನು ಪಾಕಿಸ್ತಾನ ನಿತ್ಯ ಉಲ್ಲಂಘಿಸುತ್ತಿದ್ದು, ಪಾಕ್ ಗುಂಡಿನ ದಾಳಿಗೆ ಭಾರತೀಯ ಸೇನೆ ಪ್ರತೀಕಾರ ತೀರಿಸಿಕೊಂಡಿದೆ. ಸದ್ಯ ಸಾವು ನೋವುಗಳ ಬಗ್ಗೆ ಯಾವುದೇ ಮಾಹಿತಿ ಇಲ್ಲ.