ಅಹ್ಮದಾಬಾದ್: ಇಂದು ಬೆಳಿಗ್ಗೆ ಅಹ್ಮದಾಬಾದ್ನಿಂದ ಬೆಂಗಳೂರಿಗೆ ಹೊರಟಿದ್ದ ಗೋಏರ್ ವಿಮಾನದಲ್ಲಿ ಟೇಕ್-ಆಫ್ ರೋಲ್ ವೇಳೆ ಎಂಜಿನ್ನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು.
ಬೆಂಕಿಯನ್ನು ನಂದಿಸಲಾಗಿದ್ದು, ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ. ಗೋಏರ್ ವಿಮಾನದ ಬಲ ಎಂಜಿನ್ ಹಾನಿಗೊಳಗಾಗಿದ್ದು ಇದರಿಂದಾಗಿ ಸಣ್ಣ ಬೆಂಕಿ ಕಾಣಿಸಿಕೊಂಡಿದೆ ಎಂದು ಗೋಏರ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಈ ಕುರಿತು ಪ್ರತಿಕಿಯಿಸಿರುವ ಗೋಏರ್ ವಕ್ತಾರರು ಪಕ್ಷಿಯೊಂದು ಡಿಕ್ಕಿ ಹೊಡೆದ ಪರಿಣಾಮ ಇಂಜಿನ್ ಗೆ ಹಾನಿಯಾಗಿ ಈ ದುರ್ಘಟನೆ ಸಂಭವಿಸಿದೆ ಎಂದು ತಿಳಿಸಿದ್ದಾರೆ. ಇಂಜಿನಿಯರ್ಸ್ ತಂಡ ಹಾನಿಗೊಳಗಾದ ವಿಮಾನದ ಪರಿಶೀಲನೆ ನಡೆಸುತ್ತಿದೆ.