ಪಾಟ್ನಾ: ಪೆಟ್ರೋಲ್ ಬಂಕ್ಗೆ ಏಕಾಏಕಿ ಬೆಂಕಿ ಹತ್ತಿಕೊಂಡ ಪರಿಣಾಮ ದಗದಗನೇ ಹೊತ್ತಿ ಉರಿದಿರುವ ಘಟನೆ ಬಿಹಾರದ ಪಾಟ್ನಾದಲ್ಲಿ ನಡೆದಿದ್ದು, ಸಾವಿರಾರು ಲೀಟರ್ ಪೆಟ್ರೋಲ್-ಡಿಸೇಲ್ ಬೆಂಕಿಗೆ ಆಹುತಿಯಾಗಿದೆ.
ಕಳೆದ ಕೆಲ ದಿನಗಳಿಂದ ಬಿಹಾರದಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿರುವ ಕಾರಣ ಇಲ್ಲಿನ ನಾಲಾ ರೋಡ್ನಲ್ಲಿರುವ ಪೆಟ್ರೋಲ್ ಬಂಕ್ ಬಂದ್ ಆಗಿತ್ತು. ಆದರೆ ಇಂದು ಸಂಜೆ ಏಕಾಏಕಿಯಾಗಿ ಬೆಂಕಿ ಹತ್ತಿಕೊಂಡಿದೆ.
ಬೆಂಕಿ ಹತ್ತಿಕೊಳ್ಳುತ್ತಿದ್ದಂತೆ ಬಂಕ್ನಲ್ಲಿ ಬ್ಲಾಸ್ಟ್ ಸಹ ಆಗಿದ್ದು, ಸಾವಿರಾರು ಲೀಟರ್ ಪೆಟ್ರೋಲ್-ಡಿಸೇಲ್ ಬೆಂಕಿಗೆ ಆಹುತಿಯಾಗಿದೆ. ಘಟನೆ ನಡೆಯುತ್ತಿದ್ದಂತೆ ಅಕ್ಕಪಕ್ಕದ ಜನರು ಆಘಾತಕ್ಕೊಳಗಾದರು. ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ ಆಗಮಿಸಿ, ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ತಿಳಿದು ಬಂದಿದೆ. ಅಗ್ನಿ ಅವಘಡಕ್ಕೆ ಕಾರಣ ಏನು ಎಂಬುದು ಇಲ್ಲಿಯವರೆಗೂ ತಿಳಿದು ಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.