ETV Bharat / bharat

ಪಾಕ್​​​ ಗಡಿಯಲ್ಲಿ ತೇಜಸ್​ ಹಾರಾಟ... ಶತ್ರು ರಾಷ್ಟ್ರಕ್ಕೆ ಸ್ವದೇಶಿ ಉತ್ತರ..! - ಪಾಕ್​​​​-ಚೀನಾ ಗಡಿಯಲ್ಲಿ ತೇಜಸ್​ ಹಾರಾಟ

ಪಾಕ್​​​​ ಗಡಿಯಲ್ಲಿ ನೆರೆಯ ರಾಷ್ಟ್ರಗಳ ಉದ್ಧಟತನ ಹೆಚ್ಚಾದ ಹಿನ್ನೆಲೆ ಭಾರತೀಯ ಸೇನೆ ಲಡಾಖ್ ಗಡಿ ಭಾಗದಲ್ಲಿ ಸ್ವದೇಶಿ ನಿರ್ಮಿತ ತೇಜಸ್​ ಯುದ್ಧ ವಿಮಾನವನ್ನು ನಿಯೋಜನೆ ಮಾಡಿದೆ. ಈ ಮೂಲಕ ಪಾಕಿಸ್ತಾನ ಮೇಲೆ ಕಣ್ಣಿಡಲು ಮುಂದಾಗಿದೆ.

Amid border tensions with China, indigenous fighter LCA Tejas deployed on western front
ಪಾಕ್​​​​-ಚೀನಾ ಗಡಿಯಲ್ಲಿ ತೇಜಸ್​ ಹಾರಾಟ...ಶತ್ರುಗಳಿಗೆ ಸ್ವದೇಶಿ ಉತ್ತರ..!
author img

By

Published : Aug 18, 2020, 5:00 PM IST

Updated : Aug 18, 2020, 5:37 PM IST

ನವದೆಹಲಿ: ಲಡಾಖ್​ನಲ್ಲಿ ಗಡಿ ಸಮಸ್ಯೆ ಉದ್ಭವವಾದಾಗಿನಿಂದ ಚೀನಾ ಹಾಗೂ ಪಾಕಿಸ್ತಾನ ಸೇನೆಗಳು ಭಾರತದ ಗಡಿಯಲ್ಲಿ ಉದ್ಧಟತನ ಮೆರೆಯುತ್ತಿವೆ. ಈ ಹಿನ್ನೆಲೆ ನಮ್ಮ ದೇಶದ ಸೇನೆ ಸಹ ತನ್ನ ಯುದ್ಧ ವಿಮಾನಗಳನ್ನು ಹಾರಾಟ ನಡೆಸಿ ತಕ್ಕ ಪ್ರತ್ಯುತ್ತರ ನೀಡುತ್ತಾ ಬಂದಿದೆ.

ಇತ್ತೀಚೆಗಷ್ಟೇ ಸೇನೆಯ ಅಪಾಚೆ ಹೆಲಿಕಾಪ್ಟರ್​​​ ಸಹ ಗಡಿ ಭಾಗದಲ್ಲಿ ಹಾರಾಟ ನಡೆಸಿ ಗಮನ ಸೆಳೆದಿತ್ತು. ಇದೀಗ ಪಶ್ಚಿಮ ಲಡಾಖ್​ ಭಾಗದ ಪಾಕಿಸ್ತಾನ ಗಡಿಯಲ್ಲಿ ಸ್ವದೇಶಿ ಯುದ್ಧ ವಿಮಾನ ಕಾರ್ಯಕ್ರಮದಡಿ ಸ್ಥಳೀಯವಾಗಿ ನಿರ್ಮಿಸಲಾದ ತೇಜಸ್​​​​ ಯುದ್ಧ ವಿಮಾನವನ್ನು ನಿಯೋಜನೆ ಮಾಡಿದೆ.

ದೇಶದ ಪೂರ್ವಭಾಗದಲ್ಲಿ ಚೀನಾ ಕ್ಯಾತೆ ತೆಗೆದಾಗಿನಿಂದ ಯಾವುದೇ ಅಪಾಯ ಒದಗಿ ಬರಬಾರದು ಎಂಬ ಮುನ್ನೆಚ್ಚರಿಕಾ ಕ್ರಮವಾಗಿ ಅಲ್ಲಿ ಹೆಚ್ಚಿನ ಸೈನಿಕರನ್ನು ನಿಯೋಜಿಸಲಾಗಿದೆ. ಮತ್ತೊಂದೆಡೆ ದೇಶದ ಪಶ್ಚಿಮ ಭಾಗದಲ್ಲಿ ಪಾಕಿಸ್ತಾನದ ಕುತಂತ್ರದ ಮೇಲೆ ಹದ್ದಿನ ಕಣ್ಣಿಡಲು ತೇಜಸ್​​ ಯುದ್ಧ ವಿಮಾನವನ್ನು ಗಡಿಯಲ್ಲಿ ನಿಯೋಜಿಸಲಾಗಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ. ಇದೇ ಮೊದಲ ಬಾರಿಗೆ ಸ್ವದೇಶಿ ನಿರ್ಮಿತ ತೇಜಸ್​​ ವಿಮಾನವನ್ನು ಇಲ್ಲಿ ನಿಯೋಜಿಸಲಾಗಿದೆ.

ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ತೇಜಸ್ ಯುದ್ಧ ವಿಮಾನದ ಕುರಿತು ಹೊಗಳಿಕೆಯ ಮಾತುಗಳನ್ನಾಡಿದ್ದರು. ಅಲ್ಲದೆ ತೇಜಸ್ ಖರೀದಿ ಸಂಬಂಧ ಮಾಡಿಕೊಳ್ಳಲಾದ ಮಾರ್ಕ್​1ಎ ಒಪ್ಪಂದದ ಮಾತುಕತೆ ಸದ್ಯದಲ್ಲೇ ಮುಕ್ತಾಯವಾಗಲಿದೆ ಎಂದಿದ್ದರು.

ಇನ್ನು, ಮೊದಲ ಸ್ಕ್ವಾಡ್ರನ್ ವಿಮಾನಗಳು ಆರಂಭಿಕ ಕಾರ್ಯಾಚರಣೆಯ​ ಕ್ಲಿಯರೆನ್ಸ್​ನ ಆವೃತ್ತಿಯದ್ದಾಗಿದ್ದರೆ, 2ನೇಯ 18 ಸ್ಕ್ವಾಡ್ರನ್​ ಫ್ಲೈಯಿಂಗ್ ಬುಲೆಟ್ ವಿಮಾನಗಳು ಕೊನೆಯ ಆಪರೇಶನಲ್ ಕ್ಲಿಯರೆನ್ಸ್ ಆವೃತ್ತಿಯದ್ದಾಗಿವೆ. ಇವುಗಳನ್ನು ಮೇ 27ರಂದು ವಾಯುಸೇನೆ ಮುಖ್ಯಸ್ಥ ಆರ್​ ಕೆ ಎಸ್ ಭದೌರಿಯಾ ವಿಮಾನಗಳ ಹಾರಾಟ ಕಾರ್ಯಾಚರಣೆಗೆ ಚಾಲನೆ ನೀಡಿದ್ದರು.

ಇದಲ್ಲದೆ ಈ ವರ್ಷದ ಅಂತ್ಯದ ವೇಳೆಗೆ 83 ಮಾರ್ಕ್​​​​1ಎ ಯುದ್ಧ ವಿಮಾನ ಕೊಳ್ಳಲು ವಾಯುಸೇನೆ ಹಾಗೂ ರಕ್ಷಣಾ ಸಚಿವಾಲಯ ಅಂತಿಮ ಒಪ್ಪಂದಕ್ಕೆ ಸಹಿ ಹಾಕುವ ಸಾಧ್ಯತೆಯಿದೆ.

Last Updated : Aug 18, 2020, 5:37 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.