ETV Bharat / bharat

ಮುಂಬೈ ರನ್​ವೇನಲ್ಲಿ ಓವರ್‌ಶಾಟ್ ಆದ ಬೆಂಗಳೂರಿನಿಂದ ಬಂದ ಸರಕು ವಿಮಾನ.. - ನಿಸರ್ಗ ಚಂಡಮಾರುತ

ನಿಸರ್ಗ ಚಂಡಮಾರುತದಿಂದ ಉಂಟಾದ ಹವಾಮಾನ ವೈಪರೀತ್ಯದಿಂದಾಗಿ ವಿಮಾನವು ರನ್​ವೇಯಿಂದ ಸ್ವಲ್ಪ ಮುಂದಕ್ಕೆ ಹೋಯಿತು. ತೀವ್ರವಾದ ಅಡ್ಡಗಾಳಿ ಇರುವುದರಿಂದ, ಸದ್ಯಕ್ಕೆ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

ಮುಂಬೈ ರನ್​ವೇನಲ್ಲಿ ಓವರ್‌ಶಾಟ್
ಮುಂಬೈ ರನ್​ವೇನಲ್ಲಿ ಓವರ್‌ಶಾಟ್
author img

By

Published : Jun 3, 2020, 4:38 PM IST

ಮುಂಬೈ(ಮಹಾರಾಷ್ಟ್ರ) : ಬೆಂಗಳೂರಿನಿಂದ ಬಂದ ಫೆಡ್ಎಕ್ಸ್‌ಗೆ ಸೇರಿದ ಸರಕು ವಿಮಾನವು ಛತ್ರಪತಿ ಶಿವಾಜಿ ಮಹಾರಾಜ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ರನ್ ವೇನಲ್ಲಿ ಓವರ್‌ಶಾಟ್ ಆಗಿದೆ ಎಂದು ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್ (ಮಿಯಾಲ್) ಪ್ರಕಟಣೆಯಲ್ಲಿ ತಿಳಿಸಿದೆ.

ಘಟನೆಯಲ್ಲಿ ಯಾವುದೇ ಹಾನಿ ಸಂಭವಿಸಿಲ್ಲ. ನಿಸರ್ಗ ಚಂಡಮಾರುತದಿಂದ ಉಂಟಾದ ಹವಾಮಾನ ವೈಪರೀತ್ಯದಿಂದಾಗಿ ವಿಮಾನವು ರನ್​ವೇಯಿಂದ ಸ್ವಲ್ಪ ಮುಂದಕ್ಕೆ ಹೋಯಿತು. ತೀವ್ರವಾದ ಅಡ್ಡಗಾಳಿ ಇರುವುದರಿಂದ, ಸದ್ಯಕ್ಕೆ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಪ್ರತಿಕೂಲ ಹವಾಮಾನದಿಂದಾಗಿ ನಿಲ್ದಾಣದಲ್ಲಿ ವಿಮಾನ ಕಾರ್ಯಾಚರಣೆಯನ್ನು ಮಧ್ಯಾಹ್ನ 2.30 ರಿಂದ ಸಂಜೆ 7ರವರೆಗೆ ಸ್ಥಗಿತಗೊಳಿಸಲಾಗಿದೆ ಎಂದು MIAL ತಿಳಿಸಿದೆ.

ಬಲವಾದ ಕ್ರಾಸ್‌ವಿಂಡ್‌ಗಳನ್ನು ಪರಿಗಣಿಸಿ, ಇಂದು ಮಧ್ಯಾಹ್ನ 2.30ರಿಂದ ಸಂಜೆ 7ರ ನಡುವೆ ಯಾವುದೇ ಆಗಮನ ಮತ್ತು ನಿರ್ಗಮನ ನಡೆಯುವುದಿಲ್ಲ ಎಂದು ನಿರ್ಧರಿಸಲಾಗಿದೆ. ಭಾರತದ ವಿಮಾನ ನಿಲ್ದಾಣ ಪ್ರಾಧಿಕಾರದೊಂದಿಗೆ ಸಮಾಲೋಚಿಸಿದ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಮೇಲ್ ತಿಳಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.