ಹೈದರಾಬಾದ್: ಆಘಾತಕಾರಿ ಘಟನೆವೊಂದರಲ್ಲಿ ಕಾಮುಕ ತಂದೆ ಅಪ್ರಾಪ್ತ ವಯಸ್ಸಿನ ಹೆಣ್ಣು ಮಕ್ಕಳ ಮೇಲೆ ನಿರಂತರವಾಗಿ ಅತ್ಯಾಚಾರ ಎಸೆಗಿರುವ ಅಮಾನವೀಯ ಘಟನೆ ಇಲ್ಲಿನ ಮೆಡ್ಚಲ್ನ ದಿಂಡಿಗಲ್ನಲ್ಲಿ ನಡೆದಿದೆ.
ಕಳೆದ ಒಂದು ವರ್ಷದಿಂದ ದೊಡ್ಡ ಮಗಳ (14 ವರ್ಷ) ಮೇಲೆ ಅತ್ಯಾಚಾರ ಎಸಗಿರುವ ಕಾಮುಕ ತಂದೆ, ಕಳೆದ ಎರಡು ತಿಂಗಳಿಂದ 11 ವರ್ಷದ ಮಗಳ ಮೇಲೆ ಕೃತ್ಯ ಎಸಗುತ್ತಿದ್ದನು. ಘಟನೆ ಬಗ್ಗೆ ದೊಡ್ಡ ಮಗಳು ತಾಯಿ ಎದುರು ಹೇಳಿದ್ದಾಳೆ. ಆದರೆ, ಇದಕ್ಕೆ ತಲೆಕೆಡಿಸಿಕೊಳ್ಳದ ತಾಯಿ ಸುಮ್ಮನಾಗಿದ್ದಾಳೆ.
ಇದಾದ ಬಳಿಕ ನಿನ್ನೆ ರಾತ್ರಿ 11 ವರ್ಷದ ಮಗಳ ಮೇಲೆ ಗಂಡ ಕೃತ್ಯ ಎಸಗುತ್ತಿರುವುದನ್ನ ನೋಡಿರುವ ಪತ್ನಿ ಬಿಡಿಸಲು ಹೋಗಿದ್ದಾಳೆ. ಈ ವೇಳೆ, ಆಕೆಯ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದಾನೆ. ಇದೇ ವೇಳೆ, ಮಗಳು ಕಿರುಚಾಡಿರುವ ಕಾರಣ ನೆರೆಹೊರೆಯವರು ಸೇರಿಕೊಂಡಿದ್ದಾರೆ. ಈ ವೇಳೆ, ಘಟನೆ ಬಗ್ಗೆ ಗೊತ್ತಾಗಿದ್ದು, ಆರೋಪಿಯನ್ನ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ದೂರು ದಾಖಲು ಮಾಡಿಕೊಂಡು, ಕಾಮುಕನನ್ನು ಕಂಬಿ ಹಿಂದೆ ತಳ್ಳಿದ್ದಾರೆ. ಮೂಲತಃ ಬಿಹಾರದವರಾಗಿರುವ ಇವರು ಕಳೆದ ಎರಡು ವರ್ಷಗಳ ಹಿಂದೆ ದಿಂಡಿಗಲ್ನಲ್ಲಿ ಬಂದು ವಾಸವಾಗಿದ್ದರು.