ನವದೆಹಲಿ: 8ನೇ ಸುತ್ತಿನ ಸಂಧಾನ ಮಾತುಕತೆಗಳು ನಡೆಯುವ ಮುನ್ನಾದಿನದವರೆಗೂ ಸರ್ಕಾರ ಹಾಗೂ ನೂತನ ಕೃಷಿ ಕಾಯ್ದೆಗಳನ್ನು ಹಿಂಪಡೆಯಬೇಕೆಂದು ಆಗ್ರಹಿಸಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತ ಸಂಘಟನೆಗಳು ತಮ್ಮ ತಮ್ಮ ನಿಲುವಿಗೆ ಅಚಲವಾಗಿ ಅಂಟಿಕೊಂಡಿವೆ. ಉಭಯ ಪಕ್ಷಗಳ ನಿಲುವಿನಲ್ಲಿ ಯಾವುದೇ ಬದಲಾವಣೆಯಾಗಿಲ್ಲ.
ಸರ್ಕಾರ ಮತ್ತು ರೈತರ ನಡುವಿನ ಎಂಟನೇ ಸುತ್ತಿನ ಮಾತುಕತೆ ಇಂದು ಮಧ್ಯಾಹ್ನ 2 ಗಂಟೆಗೆ ವಿಜ್ಞಾನ ಭವನದಲ್ಲಿ ನಡೆಯಲಿದೆ. ಇದಕ್ಕೂ ಮೊದಲು, ಜನವರಿ 4 ರಂದು ಏಳನೇ ಸುತ್ತಿನ ಸಭೆ ನಡೆದಿದ್ದು, ಇದೀಗ ಈ ಸಭೆ ಮಹತ್ವದ್ದಾಗಿದೆ. ಡಿಸೆಂಬರ್ 30 ರಂದು ನಡೆದ ಆರನೇ ಸುತ್ತಿನ ಮಾತುಕತೆಯಲ್ಲಿ, ಕೆಲ ಬೇಡಿಕೆಗಳನ್ನು ಸರ್ಕಾರ ಒಪ್ಪಿಕೊಂಡಿತ್ತು. ಅದಕ್ಕೂ ಮೊದಲಿನ ಮಾತುಕತೆಗಳಲ್ಲಿ ಯಾವುದೇ ಯಶಸ್ಸು ಕಂಡುಬಂದಿಲ್ಲ.
ಈ ಸುದ್ದಿಯನ್ನೂ ಓದಿ: ಅಪಘಾತದಿಂದಾಗಿ ಟ್ರ್ಯಾಕ್ಟರ್ನಲ್ಲಿ ಶಾರ್ಟ್ ಸರ್ಕ್ಯೂಟ್: ಚಾಲಕ ಸಜೀವ ದಹನ!
ಪ್ರತಿಭಟನಾ ನಿರತ ರೈತರು ಮೂರು ಹೊಸ ಕೃಷಿ ಕಾನೂನುಗಳನ್ನು ಹಿಂತೆಗೆದುಕೊಳ್ಳಬೇಕೆಂಬ ಬೇಡಿಕೆಗಾಗಿ ಟ್ರಾಕ್ಟರ್ ರ್ಯಾಲಿಗಳನ್ನು ನಡೆಸಿದ್ದಾರೆ. ಆದರೆ ಕೇಂದ್ರ ಸರ್ಕಾರ ಈ ಕಾನೂನುಗಳನ್ನು ಹಿಂತೆಗೆದುಕೊಳ್ಳುವುದರ ಹೊರತಾಗಿ ಪ್ರತಿಯೊಂದು ಪ್ರಸ್ತಾಪವನ್ನೂ ಪರಿಗಣಿಸಲು ಸಿದ್ಧವಾಗಿದೆ ಎಂದು ತಿಳಿಸಿದೆ.
ಇನ್ನೂ ಹರಿಯಾಣದ ಪುಟ್ಟ ಬಾಲಕಿ ರೈತರ ಪ್ರತಿಭಟನೆ ಕುರಿತು ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಾಳೆ. ರೈತರ ಹೋರಾಟಕ್ಕೆ ಸ್ಪಂದಿಸುವಂತೆ ಪ್ರಧಾನಿಯಲ್ಲಿ ಮನವಿ ಮಾಡಿದ್ದಾಳೆ.