ಶ್ರೀನಗರ : ಜಮ್ಮು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯಲ್ಲಿ ಉಗ್ರರು ಹೂತಿಟ್ಟಿದ್ದ ಸ್ಫೋಟಕವನ್ನು ಭದ್ರತಾ ಪಡೆಗಳು ಸೋಮವಾರ ಪತ್ತೆ ಹಚ್ಚಿ ನಿಷ್ಕ್ರಿಯಗೊಳಿಸಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪಟ್ಟನ್ ಪ್ರದೇಶದ ಶ್ರೀನಗರ-ಬಾರಾಮುಲ್ಲಾ ಹೆದ್ದಾರಿಯಲ್ಲಿ ಸೇನೆಯ ರೋಡ್ ಓಪನಿಂಗ್ ಪಾರ್ಟಿ (ಆರ್‌ಒಪಿ) ಸ್ಫೋಟಕ ಪತ್ತೆ ಹಚ್ಚಿದೆ. ಬಾಂಬ್ ಪತ್ತೆ ದಳದಿಂದ ಅದನ್ನು ನಿಷ್ಕ್ರಿಯಗೊಳಿಸಿ, ಆಗಬಹುದಾದ ದೊಡ್ಡ ಅನಾಹುತ ತಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಭದ್ರತಾ ಪಡೆಗಳ ಬೆಂಗಾವಲು ಮತ್ತು ವಿಐಪಿಗಳ ಅಶ್ವದಳಗಳನ್ನು ಗುರಿಯಾಗಿಸಿ ಹೆದ್ದಾರಿಗಳಲ್ಲಿ ಉಗ್ರರು ಸ್ಫೋಟಕಗಳನ್ನು ಹೂತಿಟ್ಟಿದ್ದರು. ಸೈನಿಕರು ಮತ್ತು ಅರೆ ಸೈನಿಕರನ್ನೊಳಗೊಂಡ ಆರ್‌ಒಪಿ ಕಾಶ್ಮೀರ ವಿವಿಧ ಭಾಗಗಳು ಮತ್ತು ವಿಐಪಿಗಳಿಗೆ ಭದ್ರತೆ ನೀಡಲು ಪ್ರತಿ ದಿನ ಮೊದಲು ತೆರಳುತ್ತದೆ.
ಆರ್‌ಒಪಿ ಎಲೆಕ್ಟ್ರಾನಿಕ್ ಉಪಕರಣ ಮತ್ತು ಸ್ನಿಫರ್ ಶ್ವಾನಗಳನ್ನು ಹೊಂದಿದ್ದು, ಯಾವುದೇ ಸ್ಫೋಟಕಗಳನ್ನು ತಕ್ಷಣ ಗುರುತಿಸುತ್ತದೆ.