ರಾಂಚಿ(ಜಾರ್ಖಂಡ್): ರಾಮ ಮಂದಿರ ನಿರ್ಮಾಣಕ್ಕೆ ಜಾರ್ಖಂಡ್ನ ಪ್ರತಿ ಕುಟುಂಬವೂ ಒಂದೊಂದು ಇಟ್ಟಿಗೆ ಕೊಡಬೇಕು ಎಂದು ಯುಪಿ ಸಿಎಂ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
ಜಾರ್ಖಂಡ್ನ ಗಿರಿದಿಹ್ನಲ್ಲಿ ಚುನಾವಣಾ ರ್ಯಾಲಿಯಲ್ಲಿ ಪಾಲ್ಗೊಂಡು ಮಾತನಾಡಿದ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಜಾರ್ಖಂಡ್ನ ಪ್ರತಿ ಕುಟುಂಬವೂ ಒಂದೊಂದು ಇಟ್ಟಿಗೆ ಹಾಗೂ 11 ರೂಪಾಯಿಗಳನ್ನು ಕೊಡಬೇಕು. ರಾಮರಾಜ್ಯವು ಸಮಾಜದ ಕೊಡುಗೆಯಿಂದ ಮುನ್ನಡೆಯುತ್ತದೆ ಎಂದು ಹೇಳಿದರು.
ಇದೇ ಡಿಸೆಂಬರ್ 12ರಂದು ನವೆಂಬರ್ 9ರ ಅಯೋಧ್ಯೆ ಐತಿಹಾಸಿಕ ತೀರ್ಪಿನ ವಿರುದ್ಧ ಸಲ್ಲಿಸಲಾಗಿದ್ದ ಎಲ್ಲಾ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿತ್ತು.