ಮುಂಬೈ: ಡಾ. ಬಾಬಾಸಾಹೇಬ್ ಅಂಬೇಡ್ಕರ್ ಜಯಂತಿಯಿಂದಾಗಿ ಬಾಂಬೆ ಷೇರು ಮಾರುಕಟ್ಟೆ (BSE) ಮತ್ತು ಭಾರತದ ರಾಷ್ಟ್ರೀಯ ಷೇರು ಮಾರುಕಟ್ಟೆ (NSE) ಮಂಗಳವಾರ ಮುಚ್ಚಲ್ಪಟ್ಟವು.
ಲೋಹ ಮತ್ತು ಬುಲಿಯನ್(ಚಿನ್ನ ಅಥವಾ ಬೆಳ್ಳಿ ಗಟ್ಟಿ) ಸೇರಿದಂತೆ ಸಗಟು ಸರಕು ಮಾರುಕಟ್ಟೆಗಳನ್ನು ಸಹ ಮುಚ್ಚಲಾಗಿದೆ. ವಿದೇಶಿ ವಿನಿಮಯ ಮತ್ತು ಸರಕು ಮಾರುಕಟ್ಟೆಗಳಲ್ಲೂ ಇಂದು ಯಾವುದೇ ವ್ಯಾಪಾರ ಚಟುವಟಿಕೆ ನಡೆಯುತ್ತಿಲ್ಲ.
ಒಂದು ದಿನದ ಹಿಂದೆ BSE ಸೆನ್ಸೆಕ್ಸ್ 470 ಅಂಕಗಳ ಇಳಿಕೆ ಕಂಡು 30,690 ಕ್ಕೆ ತಲುಪಿದ್ದರೆ, ನಿಫ್ಟಿ 50, 118 ಅಂಕಗಳನ್ನು ಕಳೆದುಕೊಂಡು 8,994 ಕ್ಕೆ ತಲುಪಿತ್ತು.