ಮುಂಬೈ: ವಿಶ್ವಕ್ಕೆ ಕೊರೊನಾ ವೈರಸ್ ಯಾರು ಹರಡಿದ್ದಾರೆ ಅಥವಾ ಅದು ಹೇಗೆ ಹರಡಿತು ಎಂಬುದು ಇನ್ನೂ ಖಚಿತಪಟ್ಟಿಲ್ಲ. ಆದರೆ ಖ್ಯಾತ ಬಾಲಿವುಡ್ ನಟ ಇಮ್ರಾನ್ ಹಶ್ಮಿ ಮಾತ್ರ ಬಾವಲಿ ತಿಂದವರ್ಯಾರೋ ಸೋಂಕು ಹರಡಿದ್ದಾರೆ ಎಂದು ತೀವ್ರ ಆಕ್ರೋಶ ವ್ಯಕ್ತಪಡಿದ್ದಾರೆ.
'ಸಾವಿರಾರು ಮೈಲು ದೂರದಲ್ಲಿ ಕುಳಿತವನ್ಯಾವನಿಗೋ ರುಚಿಯಾದ ಬಾವಲಿಯ ಆಹಾರವೇ ಬೇಕಿತ್ತು.' ಎಂದು ಟ್ವೀಟ್ ಮಾಡಿರುವ ಹಶ್ಮಿ, ಚೀನಾದ ವುಹಾನ್ನಲ್ಲಿ ಯಾರೋ ಬಾವಲಿ ತಿಂದಿದ್ದಕ್ಕೆ ಅವರಿಗೆ ಈ ರೋಗ ಬಂದಿದ್ದು, ಅವರೇ ಇತರರಿಗೆ ಇದನ್ನು ಹರಡಿದ್ದಾರೆ ಎಂದು ಬರೆದುಕೊಂಡಿದ್ದಾರೆ.
ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಲಾಕ್ಡೌನ್ ರೀತಿಯ ಅತ್ಯಂತ ಸಂದಿಗ್ಧ ಪರಿಸ್ಥಿತಿಗಳನ್ನು ಎದುರಿಸಬೇಕಾಗಿ ಬಂದಿರುವುದರಿಂದ ಹಾಗೂ ಕೋಟ್ಯಂತರ ಜನರ ಜೀವಕ್ಕೆ ಅಪಾಯ ಉಂಟಾಗಿರುವ ಹಿನ್ನೆಲೆಯಲ್ಲಿ ಸಹಜವಾಗಿಯೇ ಜನತೆ ಚೀನಾ ವಿರುದ್ಧ ಆಕ್ರೋಶ ವ್ಯಕ್ತಪಡಿಸತೊಡಗಿದ್ದಾರೆ. ಈಗ ಈ ಸಾಲಿಗೆ ಇಮ್ರಾನ್ ಹಶ್ಮಿ ಅವರೂ ಸೇರಿದ್ದು ಚೀನಾ ವಿರುದ್ಧ ಕಿಡಿ ಕಾರಿದ್ದಾರೆ.