ಹೈದರಾಬಾದ್: ದೇಶದಲ್ಲಿ ಕೃಷಿ ಕಾರ್ಮಿಕರಿಗೆ ತಮ್ಮ ಹಳ್ಳಿಗಳಲ್ಲೇ ವರ್ಷಕ್ಕೆ ನೂರು ದಿನಗಳ ಕಾಲ ಜೀವನೋಪಾಯಕ್ಕಾಗಿ ಉದ್ಯೋಗ ಒದಗಿಸುವ ಉದ್ದೇಶದಿಂದ 14 ವರ್ಷಗಳ ಹಿಂದೆ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಪ್ರಾರಂಭಿಸಲಾಯಿತು. ಮಹಾಮಾರಿ ಕೊರೋನಾ ವೈರಸ್ ಭೀಕರ ದಾಳಿ ಮತ್ತು ಇದರಿಂದಾದ ಲಾಕ್‌ಡೌನ್ ಹೊಡೆತದಿಂದ ಉದ್ಯೋಗ ಕಳೆದುಕೊಂಡು ಹಳ್ಳಿ ಸೇರಿರುವ ವಲಸೆ ಕಾರ್ಮಿಕರಿಗೆ ಜೀವನೋಪಾಯಕ್ಕೆ ಉಳಿದಿರುವ ಏಕೈಕ ಭರವಸೆ ಮತ್ತು ಮಾರ್ಗ ಉದ್ಯೋಗ ಖಾತ್ರಿ ಯೋಜನೆಯಾಗಿದೆ.
ಈ ರೀತಿ ಹೀನಾಯವಾಗಿ ಉದ್ಯೋಗ ವಂಚಿತರಾಗಿ ಗ್ರಾಮಗಳಿಗೆ ಹಿಂದಿರುಗಿರುವ ಕಾರ್ಮಿಕರ ಪೈಕಿ ಕೈಯಲ್ಲಿ ನೂರು ರೂಪಾಯಿಗಳು ಇಲ್ಲದೆ ಗ್ರಾಮಗಳಿಗೆ ಹಿಂದಿರುಗಿದ ದುರದೃಷ್ಟವಂತ ಒಟ್ಟು ವಲಸೆ ಕಾರ್ಮಿಕರ ಸಂಖ್ಯೆ 64% ರಷ್ಟಿದೆ. ಲಾಕ್‌ಡೌನ್ ಹೇರಿದ ನಂತರ 90 ಪ್ರತಿಶತದಷ್ಟು ಕಾರ್ಮಿಕರಿಗೆ ತಮ್ಮ ಕೆಲಸದ ಅವಧಿಗೆ ಯಾವುದೇ ರೀತಿಯ ವೇತನವನ್ನು ನೀಡಲಾಗಿಲ್ಲ. ಹೀಗಾಗಿ, ಅವರ ಜೀವನ ಪರಿಸ್ಥಿತಿ ನಿಜವಾಗಿಯೂ ಅತ್ಯಂತ ಸಂಕಷ್ಟಕ್ಕೆ ಸಿಲುಕಿದೆ. ಹೀಗಾಗಿಯೇ, ಮನೆಗೆ ಮರಳುತ್ತಿರುವ ವಲಸೆ ಕಾರ್ಮಿಕರ ಪೈಕಿ ಉದ್ಯೋಗ ಖಾತರಿ ಯೋಜನೆಯ ಸಹಾಯ ಪಡೆದು ಹೊಸ ಜೀವನದ ಆರಂಭ ಮಾಡಲು ಪ್ರಯತ್ನಿಸುವವರ ಸಂಖ್ಯೆ ದಿನದಿಂದ ದಿನಕ್ಕೆ ಬೆಳೆಯುತ್ತಿದೆ.
ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಒಂಬತ್ತು ಕೋಟಿ ವಲಸೆ ಕಾರ್ಮಿಕರು ಕೆಲಸವನ್ನು ನಿರೀಕ್ಷಿಸಿದರೆ, ಕೇವಲ 7.5 ಕೋಟಿ ಜನರಿಗೆ ಮಾತ್ರ ಕೆಲಸವನ್ನು ಒದಗಿಸಲು ಸಾಧ್ಯವಾಯಿತು ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಅದೂ ವರ್ಷಕ್ಕೆ ಸರಾಸರಿ 46 ದಿನಗಳು ಉದ್ಯೋಗ ಮಾತ್ರ! ಇನ್ನೂ ಇತ್ತೀಚಿನ ಅಂಕಿ ಅಂಶಗಳ ಪ್ರಕಾರ ಈ ತಿಂಗಳಲ್ಲಿ ಉದ್ಯೋಗ ಅರಸಿದ 4.33 ಕೋಟಿ ಜನರಲ್ಲಿ ಕೇವಲ 50 ಪ್ರತಿಶತದಷ್ಟು ಜನರಿಗೆ ಮಾತ್ರ ಕೆಲಸ ಸಿಗುತ್ತದೆ ಎಂಬುದು ಸ್ಪಷ್ಟವಾಗಿದೆ. ಉದ್ಯೋಗ ಖಾತರಿ ಯೋಜನೆಯಡಿ ಉದ್ಯೋಗಾಕಾಂಕ್ಷಿಗಳ ಸಂಖ್ಯೆ ಮುಂದಿನ ಕೆಲವು ಸಮಯದವರೆಗೆ ಭಾರೀ ಪ್ರಮಾಣದಲ್ಲಿ ಹೆಚ್ಚಾಗುತ್ತದೆ.
2019-20ರ ಪರಿಷ್ಕೃತ ಅಂದಾಜಿನ ಪ್ರಕಾರ, ಉದ್ಯೋಗ ಖಾತರಿ ಯೋಜನೆಗೆ ಸುಮಾರು 71,000 ಕೋಟಿ ರೂ. ವೆಚ್ಚವಾಗಲಿದೆ. ಆದರೆ, ಇತ್ತೀಚಿನ ಬಜೆಟ್‌ನಲ್ಲಿ ಇಅದನ್ನು 10,000 ಕೋಟಿಗಳಷ್ಟು ಮೊಟಕುಗೊಳಿಸಿದ್ದ ಕೇಂದ್ರವು 'ಆತ್ಮ ನಿರ್ಭರ್ ಭಾರತ್ ಅಭಿಯಾನ್' ಯೋಜನೆಯಡಿ 40,000 ಕೋಟಿಗೆ ಏರಿಸಿದೆ. ಇದೀಗ, ಒಂದು ಲಕ್ಷ ಕೋಟಿ ರೂಪಾಯಿಗಳನ್ನು ಮೀರಿದ ಕೇಂದ್ರದ ಉದ್ಯೋಗ ಖಾತರಿ ಖಾತೆಯಲ್ಲಿ 300 ಕೋಟಿ ಕೆಲಸದ ದಿನಗಳವರೆಗೆ ಉದ್ಯೋಗವನ್ನು ಸೃಷ್ಟಿಸಬಹುದು ಎಂದು ಕೇಂದ್ರವು ಲೆಕ್ಕ ಹಾಕಿದೆ. ಹೆಚ್ಚುತ್ತಿರುವ ಉದ್ಯೋಗ ಬೇಡಿಕೆಯನ್ನು ಪೂರೈಸಲು ಕೇಂದ್ರ ಸರ್ಕಾರವು ಉದ್ಯೋಗ ಖಾತರಿ ಯೋಜನೆಯನ್ನು ವಿಸ್ತರಿಸಬೇಕು. ಈ ಸಂಕಷ್ಟದ ಅಸಾಮಾನ್ಯ ಸಂದರ್ಭಗಳಲ್ಲಿ, ಸರ್ಕಾರವು ಬಜೆಟ್ ಮಿತಿಗಳನ್ನು ಬದಿಗಿಟ್ಟು ಉದ್ಯೋಗ ನಷ್ಟದಿಂದ ಬಳಲುತ್ತಿರುವ ಈ ನಿರ್ಗತಿಕ ವಲಸೆ ಕಾರ್ಮಿಕರಿಗೆ ಸಹಾಯ ಮಾಡಬೇಕು ಮತ್ತು ಕರೋನಾದಿಂದ ಸಂಕಷ್ಟಕ್ಕೆ ತುತ್ತಾಗಿರುವ ಕಾರ್ಮಿಕರ ಬದುಕು ಕಟ್ಟಬೇಕು.
ವಿಶ್ವದ ಅತಿದೊಡ್ಡ ಲೋಕೋಪಯೋಗಿ ಕಾರ್ಯಕ್ರಮವೆಂದು ವಿಶ್ವ ಬ್ಯಾಕ್ ಹೊಗಳಿರುವ ನಮ್ಮ ದೇಶದ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ ಅದರ ಅಸಮರ್ಥ ಅನುಷ್ಠಾನದಿಂದಾಗಿ ಎಲ್ಲೆಡೆ ಭಾರೀ ತೀವ್ರ ಟೀಕೆ ಟಿಪ್ಪಣಿಗೆ ಗುರಿಯಾಗಿದೆ. ಈ ಯೋಜನೆಯು ಸುಳ್ಳು ಲೆಕ್ಕಪತ್ರ ನಿರ್ವಹಣೆ, ನಕಲಿ ಬಿಲ್, ಸುಳ್ಳು ಬ್ಯಾಂಕ್ ಖಾತೆಗಳು ಮತ್ತು ವಂಚಕರ ಕೈಯಲ್ಲಿ ಅವರ ಉತ್ತಮ ಗಳಿಕೆಯ ಸಾಧನವಾಗಿ ಮಾರ್ಪಟ್ಟಿದೆ ಎಂದು ಸಂಸದೀಯ ಸ್ಥಾಯಿ ಸಮಿತಿ ಟೀಕಿಸಿದೆ. ಜೊತೆಗೆ ಈ ಯೋಜನೆಯಡಿ ಕೆಲಸ ಮಾಡಿದ ಕಾರ್ಮಿಕರಿಗೆ ನೀಡಬೇಕಾದ ವೇತನ ಹಲವು ತಿಂಗಳುಗಟ್ಟಲೆ ವಿಳಂಬವಾಗುವುದನ್ನು ತಪ್ಪಿಸಲು ವಿಶೇಷ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಭರವಸೆ ನೀಡಲಾಗಿದ್ದರೂ, ಕೇಂದ್ರ ಕಾರ್ಮಿಕರಿಗೆ ನೀಡಬೇಕಾದ ವೇತನ ಬಾಕಿ ಇನ್ನೂ ರೂ. 8,500 ಕೋಟಿ ರೂ.ನಷ್ಟಿದೆ.
ಉದ್ಯೋಗ ಖಾತರಿ ಯೋಜನೆ ವಲಸೆ ಕಾರ್ಮಿಕರಿಗೆ ಅನುಕೂಲಕರ ಅಂಶವಾಗಿದೆ ಎಂದು ಖಚಿತಪಡಿಸಿಕೊಳ್ಳಲು, ಖಾತೆಗಳನ್ನು ತ್ವರಿತವಾಗಿ ಪರಿಶೀಲಿಸುವುದು, ಅಂತಿಮಗೊಳಿಸುವುದು ಮತ್ತು ನಗದು ಪಾವತಿಗಳಿಗೆ ಆದ್ಯತೆ ನೀಡುವುದು ಬಹು ಮುಖ್ಯ. ಇ-ಮಸ್ಟರ್‌ನಲ್ಲಿ ನೋಂದಾವಣೆ ಮಾಡಿಕೊಂಡವರಿಗೆ ಸಮಯಕ್ಕೆ ಸರಿಯಾಗಿ ಕೆಲಸವನ್ನು ಒದಗಿಸುವ ಅಭ್ಯಾಸ ಮುಂದುವರಿದಿದ್ದರೂ, ತಮ್ಮ ಪ್ರಾಣವನ್ನು ಪಣಕ್ಕಿಟ್ಟು ತಮ್ಮ ಊರು ತಲುಪಲು ಸಾವಿರಾರು ಕಿಲೋಮೀಟರ್ ಪ್ರಯಾಣ ಮಾಡಿದ ನಿರ್ಗತಿಕ ಕಾರ್ಮಿಕರಿಗೆ ಉದ್ಯೋಗ ನೀಡಿಕೆಯಲ್ಲಿ ಆದ್ಯತೆ ನೀಡಬೇಕು.
ಜೊತೆಗೆ ಕೂಲಿ ಕಾರ್ಮಿಕರಿಗೆ ಅನುಕೂಲವಾಗುವ ರೀತಿ ಸಂಜೆಯ ಹೊತ್ತಿಗೆ ಕೂಲಿಯ ಹಣ ಪಾವತಿಗಳನ್ನು ಆಗುವ ರೀತಿ ಕಾರ್ಯವಿಧಾನಗಳನ್ನು ವ್ಯವಸ್ಥೆ ಮಾಡಬೇಕು. ಉದ್ಯೋಗ ಖಾತರಿ ಯೋಜನೆಯಡಿಗೆ ಇದೀಗ ಮುಂಗಾರಿನಲ್ಲಿ ತೋಟಗಾರಿಕೆ ಮತ್ತು ತೋಟಗಾರಿಕೆ ಸಸಿಗಳನ್ನು ನೆಡುವ ಕೆಲಸವನ್ನು ತರಲಾಗಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ. ತೆಲಂಗಾಣದಂತಹ ರಾಜ್ಯಗಳು ಉದ್ಯೋಗ ಖಾತರಿಯನ್ನು ಅರಣ್ಯದಲ್ಲಿ ಸಸಿ ನೆಡುವ ಕೆಲಸಕ್ಕೆ ಬಾಲಸುವುದಾಗಿಯೂ ಹೇಳಿದೆ. ಇದರ ಜೊತೆಗೆ ರಾಜ್ಯದಿಂದ ರಾಜ್ಯಕ್ಕೆ ಕೂಲಿ ಕಾರ್ಮಿಕರಿಗೆ ನೀಡುವ ವೇತನದಲ್ಲಿ ಭಾರೀ ವ್ಯತ್ಯಾಸಗಳಿವೆ.
ಬಿಹಾರ ಮತ್ತು ಜಾರ್ಖಂಡ್ ರಾಜ್ಯಗಳಲ್ಲಿ ದಿನಕ್ಕೆ 171 ರೂ., ಕೂಲಿ ನೀಡಿದರೆ, ಪಂಜಾಬ್ ಮತ್ತು ಕರ್ನಾಟಕ ರಾಜ್ಯಗಳು ರೂ. 240 ಕ್ಕಿಂತ ಹೆಚ್ಚು ಪ್ರಮಾಣದ ಕೂಲಿ ಪಾವತಿಸುತ್ತಿವೆ. ಹೀಗಾಗಿ, ಕೇಂದ್ರ ಸರ್ಕಾರವು ಉದ್ಯೋಗ ಖಾತ್ರಿ ಯೋಜನಎಯಡಿ ಕೂಲಿ ಕಾರ್ಮಿಕರಿಗೆ ನೀಡಲಾಗುತ್ತಿರುವ ವೇತನವನ್ನು ಸಮಂಜಸವಾಗಿ ಪರಿಷ್ಕರಿಸಬೇಕು ಮತ್ತು ಕೊರೊನಾ ಲಾಕ್‌ಡೌನ್ ವಿಷಮ ಪರಿಸ್ಥಿತಿ ಸುಧಾರಿಸುವವರೆಗೆ ಕಾರ್ಮಿಕರಿಗೆ ನೂರು ದಿನಗಳ ಕೆಲಸ ನೀಡುವ ಮೂಲಕ ಸರ್ಕಾರ ಯೋಜನೆಯನ್ನು ಭ್ರಷ್ಟಾಚಾರ ಮುಕ್ತ ಮಾಡಿ ಕಾರ್ಮಿಕರಿಗೆ ಅನುಕೂಲ ಮಾಡಿಕೊಡಬೇಕು. ರಾಷ್ಟ್ರ ನಿರ್ಮಾಣ ಚಟುವಟಿಕೆಯಲ್ಲಿ ಕಾರ್ಮಿಕರ ಅರ್ಥಪೂರ್ಣ ಭಾಗವಹಿಸುವಿಕೆಯನ್ನು ಖಚಿತಪಡಿಸಿಕೊಳ್ಳಲು ನಿಯಮಗಳು ಮತ್ತು ನಿಯಮಗಳನ್ನು ಸರ್ಕಾರ ಬಲಪಡಿಸಬೇಕು.