ETV Bharat / bharat

ಉದ್ಯೋಗಸ್ಥರಿಗೆ ಪೂರ್ಣ ವೇತನ ಪಾವತಿ ವಿಚಾರ: ತೀರ್ಪು ಕಾಯ್ದಿರಿಸಿದ ಸುಪ್ರೀಂ - ಉದ್ಯೋಗಸ್ಥರಿಗೆ ಪೂರ್ಣ ವೇತನ ಸುದ್ದಿ,

ಉದ್ಯೋಗಸ್ಥರಿಗೆ ಪೂರ್ಣ ವೇತನ ನೀಡಬೇಕೆಂಬ ಕೇಂದ್ರದ ಆದೇಶದ ವಿರುದ್ಧ ಸಲ್ಲಿಸಿದ್ದ ಅರ್ಜಿಗಳ​ ಕುರಿತಾದ ತೀರ್ಪನ್ನು ಸುಪ್ರೀಂ ಕೋರ್ಟ್​ ಕಾಯ್ದಿರಿಸಿದೆ.

Supreme Court news, Supreme Court latest news, ಉದ್ಯೋಗಸ್ಥರಿಗೆ ಪೂರ್ಣ ವೇತನ, ಉದ್ಯೋಗಸ್ಥರಿಗೆ ಪೂರ್ಣ ವೇತನ   ಸುದ್ದಿ, ಸುಪ್ರೀಂ ಕೋರ್ಟ್​ ಸುದ್ದಿ,
ಸಂಗ್ರಹ ಚಿತ್ರ
author img

By

Published : Jun 4, 2020, 6:20 PM IST

ನವದೆಹಲಿ: ಲಾಕ್​ಡೌನ್​ ಸಮಯದಲ್ಲಿ ಪೂರ್ತಿ ವೇತನ ನೀಡದ ಸಂಸ್ಥೆಗಳ ಮೇಲೆ ಕೇಂದ್ರ ಸರ್ಕಾರ ಕಠಿಣ ನಿರ್ಣಯ ತೆಗೆದುಕೊಳ್ಳಬಾರದೆಂದು ನ್ಯಾಯಲಯವೂ ಈ ಹಿಂದೆ ಆದೇಶಸಿತ್ತು. ಈ ಕುರಿತ ತೀರ್ಪನ್ನು ಈ ತಿಂಗಳ 12ರವರೆಗೆ ಸುಪ್ರೀಂ ಕಾಯ್ದಿರಿಸಿದೆ.

ಕೊರೊನಾ ಲಾಕ್​ಡೌನ್ ಸಮಯದಲ್ಲಿ ಖಾಸಗಿ ಸಂಸ್ಥೆಗಳು ಕಾರ್ಮಿಕರಿಗೆ ಪೂರ್ಣ ವೇತನ ನೀಡಬೇಕು ಎಂಬ ಸುಪ್ರೀಂ ಕೋರ್ಟ್ ತೀರ್ಪನ್ನು ಕೇಂದ್ರ ಸಮರ್ಥಿಸಿಕೊಂಡಿದೆ. ಸಂಬಳ ಪಾವತಿಸಲು ಅವರು ಸಮರ್ಥರಲ್ಲ ಎಂದು ಹೇಳಿಕೊಳ್ಳುವ ಉದ್ಯೋಗದಾತರು ತಮ್ಮ ಲೆಕ್ಕಪರಿಶೋಧಿತ ಬ್ಯಾಲೆನ್ಸ್ ಶೀಟ್ ಮತ್ತು ಖಾತೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ಕೇಂದ್ರ ಸ್ಪಷ್ಟಪಡಿಸಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಕೇಂದ್ರವು ಸುಪ್ರೀಂ ಕೋರ್ಟ್‌ನಲ್ಲಿ ಅಫಿಡವಿಟ್ ಸಲ್ಲಿಸಿದೆ.

ಲಾಕ್ ಡೌನ್ ಸಮಯದಲ್ಲಿ ನೌಕರರು ಮತ್ತು ಕಾರ್ಮಿಕರ ಆರ್ಥಿಕ ತೊಂದರೆಗಳನ್ನು ಕಡಿಮೆ ಮಾಡಲು ಪೂರ್ಣ ವೇತನ ನೀಡಲು ಕೇಂದ್ರವು ಮಾರ್ಚ್ 29 ರಂದು ತಾತ್ಕಾಲಿಕ ಆದೇಶ ಹೊರಡಿಸಿತ್ತು. ಇದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಕಂಪನಿಗಳು ಮತ್ತು ಮಾಲೀಕರು ಅರ್ಜಿ ಸಲ್ಲಿಸಿದ್ದರು.

ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಎರಡೂ ಕಡೆಯವರ ವಾದ-ಪ್ರತಿವಾದ ಆಲಿಸಿತು. ಕೇಂದ್ರವು ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡಿದೆ. ನೌಕರರು ಮತ್ತು ಕಾರ್ಮಿಕರ ಆರ್ಥಿಕ ತೊಂದರೆಗಳನ್ನು ನಿವಾರಿಸಲು ನಾವು ತಾತ್ಕಾಲಿಕ ಕ್ರಮಗಳನ್ನು ತೆಗೆದುಕೊಂಡಿದ್ದೇವೆ ಎಂದು ಕೇಂದ್ರ ಹೇಳಿದೆ.

ಈ ಪ್ರಕರಣ ವಿಚಾರಣೆ ನಡೆಸಿದ ಕೋರ್ಟ್​ ತನ್ನ ತೀರ್ಪನ್ನು ಕಾಯ್ದಿರಿಸಿದೆ. ಜೂನ್​ 12ರವರೆಗೆ ಲಾಕ್​ಡೌನ್ ಸಮಯದಲ್ಲಿ ಪೂರ್ಣ ವೇತನ ಪಾವತಿಸದ ಕಂಪನಿಗಳ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಂತೆ ನ್ಯಾಯಾಲಯ ಕೇಂದ್ರಕ್ಕೆ ಸೂಚಿಸಿದೆ.

ಪ್ರಕರಣದ ವಿಚಾರಣೆ ನಡೆಸುತ್ತಿರುವ ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್, ನ್ಯಾಯಮೂರ್ತಿ ಎಸ್.ಕೆ. ಕೌಲ್ ಮತ್ತು ನ್ಯಾಯಮೂರ್ತಿ ಎಂ.ಆರ್. ಶಾ ಪೀಠವೂ ಲಾಕ್​ಡೌನ್ ಸಮಯದಲ್ಲಿ ಸಂಪೂರ್ಣ ವೇತನವನ್ನು ನೀಡದ ಕಾರಣ ಕಂಪನಿ ಮತ್ತು ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳದಂತೆ ಕೇಂದ್ರಕ್ಕೆ ಈ ಹಿಂದೆ ಆದೇಶಿಸಿತ್ತು. ಈ ಆದೇಶವನ್ನು ಜೂನ್​ 12ರವರೆಗೆ ವಿಸ್ತರಿಸಿದೆ.

ನ್ಯಾಯಾಲಯವು ನೌಕರರನ್ನು ಮತ್ತು ಕಾರ್ಮಿಕರನ್ನು ಸಂಬಳ ನೀಡದೆ ಬಿಡಲು ಬಯಸುವುದಿಲ್ಲ. ಅದೇ ಸಮಯದಲ್ಲಿ, ಸಾಕಷ್ಟು ಹಣವಿಲ್ಲದ ನೂರಾರು ನಿಗಮಗಳು ಮತ್ತು ಕೈಗಾರಿಕೆಗಳಿವೆ. ಈ ಸನ್ನಿವೇಶದಲ್ಲಿಯೇ ಇವೆರೆಡರ ನಡುವೆ ಸಮತೋಲನ ಸಾಧಿಸುವ ಅವಶ್ಯಕತೆಯಿದೆ ಎಂದು ನ್ಯಾಯಾಲಯವು ಅಭಿಪ್ರಾಯಪಟ್ಟಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.