ಮಚಿಲಿಪಟ್ಟಣಂ: 10 ವರ್ಷದ ಬಾಲಕಿ ಮೇಲೆ 67 ವರ್ಷದ ಕಾಮುಕನೊಬ್ಬ ಲೈಂಗಿಕ ದೌರ್ಜನ್ಯವೆಸಗಿದ್ದು, ಆತನನ್ನು ಬಂಧಿಸುವಲ್ಲಿ ಆಂಧ್ರಪ್ರದೇಶದ ಕೃಷ್ಣ ಜಿಲ್ಲೆಯ ಪೊಲೀಸರು ಯಶಸ್ವಿಯಾಗಿದ್ದಾರೆ.
ಬುಧವಾರ ಸಂಜೆ ಈ ದುರ್ಘಟನೆ ನಡೆದಿದ್ದು, ಗುರುವಾರ ವರದಿಯಾಗಿದೆ. ದೌರ್ಜನ್ಯ ಎಸೆಗಿದ ಆರೋಪಿ ಪಿ. ಬ್ರಹ್ಮಯ್ಯ ಎಂಬಾತ ಬಾಲಕಿಯ ನೆರೆಹೊರೆಯವನಾಗಿದ್ದು, ಆಕೆಯನ್ನು ಮನೆಗೆ ಕರೆಸಿಕೊಂಡು ಅವಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಕಾಳಿಗಿಂದಿ ಸಬ್ ಇನ್ಸ್‌ಪೆಕ್ಟರ್ ಎ.ಜನಾರ್ದನ್ ಮಾಹಿತಿ ನೀಡಿದ್ದಾರೆ.
ದೌರ್ಜನ್ಯಕ್ಕೊಳಗಾದ ಅಪ್ರಾಪ್ತೆಯನ್ನು ವಿಜಯವಾಡ ಸರ್ಕಾರಿ ಆಸ್ಪತ್ರೆಗೆ ಕಳುಹಿಸಲಾಗಿದ್ದು, ಆಕೆಯ ಸ್ಥಿತಿ ಸುಧಾರಿಸಿದೆ. ಬಾಲಕಿ ಪೋಷಕರ ದೂರಿನ ಮೇಲೆ ಆರೋಪಿ ವಿರುದ್ಧ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.