ETV Bharat / bharat

ಬಿಹಾರ ವಿಧಾನಸಭೆ ಚುನಾವಣೆಗೆ ಹೊಸ ಮಾರ್ಗಸೂಚಿ ಬಿಡುಗಡೆ - ಚುನಾವಣಾ ಆಯೋಗ

ಕೇಂದ್ರ ಚುನಾವಣಾ ಆಯೋಗ ಬಿಹಾರ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆ ಮಾಡಿದ್ದು, ಇದೀಗ ಚುನಾವಣೆಯಲ್ಲಿ ಅನುಸರಿಸಬೇಕಾದ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಾಗಿದೆ.

ec-issues-guidelines-to-hold-free-fair-and-safe-polls-in-bihar
ಬಿಹಾರ ವಿಧಾನಸಭೆ ಚುನಾವಣೆ: ಇಸಿಯಿಂದ ಹೊಸ ಮಾರ್ಗಸೂಚಿ ಬಿಡುಗಡೆ
author img

By

Published : Sep 26, 2020, 12:30 PM IST

ನವದೆಹಲಿ: ಬಿಹಾರ ವಿಧಾನಸಭೆ ಚುನಾವಣೆಗೆ ಮುಹೂರ್ತ ನಿಗದಿಯಾಗುತ್ತಿದ್ದಂತೆ ರಾಜಕೀಯ ಪಕ್ಷಗಳ ಚಟುವಟಿಕೆಗಳು ಬಿರುಸುಗೊಂಡಿವೆ. ಶತಾಯಗತಾಯ ಮತ್ತೆ ಅಧಿಕಾರದ ಗದ್ದುಗೆ ಏರಲು ಪಣ ತೊಟ್ಟಿರುವ ಸಿಎಂ ನಿತೀಶ್‌ ಕುಮಾರ್‌ ಹಲವು ಯೋಜನೆಗಳನ್ನು ಘೋಷಣೆ ಮಾಡಿದ್ದಾರೆ.

ಮತ್ತೊಂದೆಡೆ ಚುನಾವಣೆ ಘೋಷಣೆ ಮಾಡಿರುವ ಚುನಾವಣಾ ಆಯೋಗ ಕೋವಿಡ್‌-19 ಹಿನ್ನೆಲೆಯಲ್ಲಿ ನ್ಯಾಯ, ನಿರ್ಭೀತ ಹಾಗೂ ಸುರಕ್ಷಿತ ಚುನಾವಣೆಗಾಗಿ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.

ಯಾವುದೇ ಅಡ್ಡಿ-ಆತಂಕಗಳಿಲ್ಲದೆ ಪರಿಣಾಮಕಾರಿಯಾಗಿ ಹಾಗೂ ಎಲ್ಲವನ್ನು ಒಳಗೊಂಡ ನಿಗದಿತ ಅವಧಿಯಲ್ಲೇ ಚುನಾವಣೆ ಮುಗಿಸುವುದು ಉದ್ದೇಶ ಹೊಂದಲಾಗಿದೆ. ಜೊತೆಗೆ ಈಗಾಗಲೇ 18 ವರ್ಷ ತುಂಬಿರುವವರನ್ನು ಗರಿಷ್ಠ ಮಟ್ಟದಲ್ಲಿ ಮತ ಪಟ್ಟಿಗೆ ಸೇರಿಸುವ ಗುರಿ ಹಾಕಿಕೊಳ್ಳಲಾಗಿದೆ.

ಸ್ವೀಪ್‌ ಕಾರ್ಯಕರ್ತರ ಮೂಲಕ ಹೊಸದಾಗಿ ಮತ ಪಟ್ಟಿಗೆ ಸೇರುವ ಮತದಾರರನ್ನು ಗುರಿತಿಸುವ ವಿಶೇಷ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿದೆ.

ಚುನಾವಣಾ ಆಯೋಗದ ಮಾರ್ಗಸೂಚಿಗಳು

ಥರ್ಮಲ್‌ ಸ್ಕ್ಯಾನಿಂಗ್‌, ಸ್ಯಾನಿಟೈಸರ್‌: ಮತಗಟ್ಟೆಗೆ ಮತದಾರರು ಬರುವ ಮುನ್ನ ಕಡ್ಡಾಯವಾಗಿ ಥರ್ಮಲ್‌ ಸ್ಕ್ಯಾನಿಂಗ್‌ ಮತ್ತು ಸ್ಯಾನಿಟೈಸರ್‌ ಮಾಡಬೇಕು.

ಸಾಮಾಜಿಕ ಅಂತರ ಕಾಪಾಡುವುದು: ಸಾಮಾಜಿಕ ಅಂತರ ಕಾಪಾಡುವ ಸಲುವಾಗಿ ದೊಡ್ಡ ಕೊಠಡಿಗಳನ್ನು ಮತದಾನಕ್ಕಾಗಿ ಆಯ್ಕೆ ಮಾಡಿಕೊಂಡು ಅದರಲ್ಲಿ ಯಾವುದೇ ಅಡ್ಡಿ ಇಲ್ಲದೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು.

ಕೇವಲ ಇಬ್ಬರಿಗೆ ಅವಕಾಶ: ಈ ಮೊದಲು ನಾಮಪತ್ರ ಸಲ್ಲಿಸುವ ಅಭ್ಯರ್ಥಿಯೊಂದಿಗೆ ಸೂಚಕರು ಸೇರಿ 5 ಮಂದಿಗೆ ಅವಕಾಶ ಇತ್ತು. ಇದೀಗ ಇಬ್ಬರಿಗೆ ಮಾತ್ರ ಅವಕಾಶ ನೀಡಲಾಗಿದೆ.

2 ಕಾರುಗಳಿಗೆ ಅವಕಾಶ: ನಾಮಪತ್ರ ಸಲ್ಲಿಸಲು ಚುನಾವಣಾ ಕಚೇರಿಗೆ ಬರುತ್ತಿದ್ದ ಅಭ್ಯರ್ಥಿಗಳ ಮೂರು ಕಾರುಗಳಿಗೆ ಅವಕಾಶ ನೀಡಲಾಗಿತ್ತು. ಇದೀಗ ಆ ಸಂಖ್ಯೆಯನ್ನು 2ಕ್ಕೆ ಇಳಿಸಲಾಗಿದೆ.

ಆನ್‌ಲೈನ್‌ ನಾಮಪತ್ರ ಸಲ್ಲಿಕೆ: ಇದೇ ಮೊದಲ ಬಾರಿಗೆ ಎಂಬಂತೆ ಚುನಾವಣೆಗೆ ಸ್ಪರ್ಧಿಸಲು ಬಯಸುವ ಅಭ್ಯರ್ಥಿಗಳು ಆನ್‌ಲೈನ್‌ ಮೂಲಕವೂ ನಾಮಪತ್ರ ಸಲ್ಲಿಸಬಹುದಾಗಿದೆ. ಜೊತೆಗೆ ಆನ್‌ಲೈನ್‌ನಲ್ಲೇ ಠೇವಣಿಯನ್ನು ಕಟ್ಟಬಹುದಾಗಿದೆ.

ಮನೆ ಮನೆ ಪ್ರಚಾರಕ್ಕೆ ಕತ್ತರಿ: ಕೊರೊನಾ ಸೋಂಕು ಇರುವುದರಿಂದ ಪಕ್ಷಗಳ ಮುಖಂಡರು, ಅಭ್ಯರ್ಥಿಗಳು ಹಾಗೂ ಕಾರ್ಯಕರ್ತರು ಮನೆ ಮನೆಗೆ ತೆರಳಿ ಮತಯಾಚಿಸುವವರ ಸಂಖ್ಯೆಯನ್ನು ಕಡಿಮೆ ಮಾಡಲಾಗಿದೆ. ಕೇವಲ ಐದು ಮಂದಿಗೆ ಮಾತ್ರ ಮನೆ ಮನೆ ಪ್ರಚಾರಕ್ಕೆ ಅವಕಾಶ ನೀಡಲಾಗಿದೆ.

ಇನ್ನು ರೋಡ್‌ ಶೋಗಳಿಗೆ ಈ ಮೊದಲು 10 ವಾಹನಗಳಿಗೆ ಅನುಮತಿ ನೀಡಲಾಗಿತ್ತು. ಆದ್ರೀಗ ಕೇವಲ 5 ವಾಹನಗಳಿಗಷ್ಟೇ ಅನುಮತಿ ನೀಡಲಾಗಿದೆ. ಇದರ ಜೊತೆಗೆ ಪ್ರಮುಖ ವಾಹನದ ಹಿಂದೆ ಬರುವ 100 ಮೀಟರ್‌ ಅಂತರವನ್ನು ಕಾಪಾಡಿಕೊಳ್ಳಬೇಕೆಂದು ಚುನಾವಣಾ ಆಯೋಗ ಸೂಚಿಸಿದೆ.

ಸಾರ್ವಜನಿಕ ಸಭೆಗಳು ಮತ್ತು ರೋಡ್‌ ಶೋಗಳಿಗೆ ಅನುಮತಿ ಕಡ್ಡಾಯವಾಗಿದೆ. ಕಂಟೈನ್ಮೆಂಟ್‌ ವಲಯಗಳಲ್ಲಿ ಕೇಂದ್ರ ಗೃಹ ಇಲಾಖೆಯ ಸೂಚನೆಗಳನ್ನು ಪಾಲಿಸುವುದು ಕಡ್ಡಾಯವಾಗಿದೆ.

ಮತದಾನದ ಪ್ರಕ್ರಿಯೆ ವೇಳೆ ಮಾಸ್ಕ್‌, ಕೈಗೆ ಸ್ಯಾನಿಟೈಸರ್‌, ಥರ್ಮಲ್‌ ಸ್ಕ್ಯಾನರ್‌, ಗ್ಲೌಸ್‌, ಫೇಸ್‌ ಶೀಲ್ಡ್‌ ಮತ್ತು ಪಿಪಿಇ ಕಿಟ್‌, ಸಾಮಾಜಿಕ ಅಂತರ ಕಡ್ಡಾಯವಾಗಿದೆ.

ಚುನಾವಣೆಗೆ 1 ದಿನ ಬಾಕಿ ಇರುವಂತೆ ಮತಗಟ್ಟೆಗಳಲ್ಲಿ ಸ್ಯಾನಿಟೈಸರ್‌ ಬಳಸಬೇಕು. ಸಾಮಾಜಿಕ ಅಂತರಕ್ಕಾಗಿ ಗುರುತು ಹಾಕಬೇಕು. ಕೋವಿಡ್‌-19 ಜಾಗೃತಿಯ ಪೋಸ್ಟರ್‌ಗಳನ್ನು ಹಾಕುವ ಜೊತೆ ಹ್ಯಾಂಡ್‌ ಗ್ಲೌಸ್‌ಗಳ ಲಭ್ಯತೆಯನ್ನು ನೋಡಿಕೊಳ್ಳಬೇಕಿದೆ.

ಆಗಸ್ಟ್‌ 23ರವರೆಗೆ ಬಿಹಾರದಲ್ಲಿ 7,29,27,396 ಮತದಾರರಿದ್ದಾರೆ. ಆಕ್ಟೋಬರ್‌ 28, ನವೆಂಬರ್‌ 3 ಹಾಗೂ 7ರಂದು ಮೂರು ಹಂತಗಳಲ್ಲಿ ಮತದಾನ ನಡೆಯಲಿದ್ದು, ನವೆಂಬರ್‌ 10ಕ್ಕೆ ಫಲಿತಾಂಶ ಪ್ರಕಟವಾಗಲಿದೆ. ಬಿಹಾರ ವಿಧಾನಸಭೆಯಲ್ಲಿ 243 ಸ್ಥಾನಗಳಿದ್ದು, ನವೆಂಬರ್‌ 29ಕ್ಕೆ ಈಗಿರುವ ನಿತೀಶ್‌ ಕುಮಾರ್ ಸರ್ಕಾರದ ಅವಧಿ ಮುಕ್ತಾಯವಾಗಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.