ETV Bharat / bharat

ಕ್ರಿಶ್ಚಿಯನ್‌ ಧರ್ಮದ ಇತಿಹಾಸದಲ್ಲೇ ಮೊದಲು: ಚರ್ಚ್​ಗಳಲ್ಲಿ ಏಸುವಿನ ಭಕ್ತರಿಲ್ಲದೆ ಈಸ್ಟರ್,​ ಗುಡ್​ ಫ್ರೈಡೆ - ಏಸುವಿನ ಭಕ್ತರಿಲ್ಲದೆ ನಡೆಯಲಿದೆ ಈಸ್ಟರ್

"ಕ್ರಿಶ್ಚಿಯನ್ ಧರ್ಮದ ಇತಿಹಾಸದಲ್ಲೇ ಮೊದಲ ಬಾರಿಗೆ ಈ ವರ್ಷ ಚರ್ಚ್​ನಲ್ಲಿ ಏಸುವಿನ ಭಕ್ತರು ಭೌತಿಕವಾಗಿ ಹಾಜರಾಗದೆ, ಗುಡ್ ಫ್ರೈಡೆ ಮತ್ತು ಈಸ್ಟರ್ ಆಚರಣೆಯನ್ನು ನಡೆಸಲಾಗುತ್ತಿದೆ. ಚರ್ಚ್​ ಪಾದ್ರಿಗಳು ತಮ್ಮ ಚರ್ಚ್​ಗಳಲ್ಲಿ ನಡೆಯುವ ಪ್ರಾರ್ಥನೆಗಳನ್ನು ಸಾಮಾಜಿಕ ಮಾಧ್ಯಮಗಳ ಮೂಲಕ ನೇರ ಪ್ರಸಾರ ಮಾಡುತ್ತಾರೆ. ಭಕ್ತರ ಸಂಖ್ಯೆ ಹೆಚ್ಚು ಇಲ್ಲದಿರುವುದು ಆಚರಣೆಯ ಉತ್ಸಾಹಕ್ಕೆ ಧಕ್ಕೆ ತರುವುದಿಲ್ಲ" - ಫಾದರ್ ಮಾವೆರಿಕ್ ಫರ್ನಾಂಡಿಸ್, ಗೋವಾ ಚರ್ಚ್‌ನ ಸಾಮಾಜಿಕ ವಿಭಾಗದ ನಿರ್ದೇಶಕ

Easter
ಗುಡ್​ ಫ್ರೈಡೆ
author img

By

Published : Apr 2, 2020, 4:11 PM IST

ಪಣಜಿ(ಗೋವಾ): ಕೊರೊನಾ ವೈರಸ್ ಹರಡುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತೆಯ ದೃಷ್ಟಿಯಿಂದ ಚರ್ಚ್​ನ ಪ್ರಾರ್ಥನೆಯಲ್ಲಿ ಏಸುವಿನ ಆರಾಧಕರ ಭಾಗವಹಿಸುವಿಕೆ ಇಲ್ಲದೆ ಮೊದಲ ಬಾರಿಗೆ ಗುಡ್ ಫ್ರೈಡೆ ಮತ್ತು ಈಸ್ಟರ್ ಆಚರಣೆ ನಡೆಯಲಿವೆ.

ಮಾರಣಾಂತಿಕ ವೈರಸ್​ ಹರಡಿ ದೇಶಾದ್ಯಂತ ಲಾಕ್​ಡೌನ್​ ಘೋಷಿಸಿರುವ ಹಿನ್ನೆಲೆಯಲ್ಲಿ ಗೋವಾದಲ್ಲಿನ ಚರ್ಚ್​ಗಳಿಗೆ ಭಕ್ತರು ಬರುವುದನ್ನು ತಡೆ ಹಿಡಿಯಲಾಗಿದೆ. ಅಲ್ಲದೆ ಚರ್ಚ್​ಗಳಲ್ಲಿ ನಡೆಯುವ ಪ್ರಾರ್ಥನೆಯನ್ನು ಫೇಸ್‌ಬುಕ್‌ ಸೇರಿದಂತೆ ಇತರ ಸಾಮಾಜಿಕ ಮಾಧ್ಯಮಗಳ ಮೂಲಕ ಭಕ್ತರಿಗೆ ನೇರಪ್ರಸಾರ ಮಾಡಲಾಗುತ್ತಿದೆ.

ಕ್ರಿಶ್ಚಿಯನ್ ಧರ್ಮದ ಇತಿಹಾಸದಲ್ಲೇ ಮೊದಲ ಬಾರಿಗೆ ಈ ವರ್ಷ ಚರ್ಚ್​ನಲ್ಲಿ ಏಸುವಿನ ಭಕ್ತರು ಭೌತಿಕವಾಗಿ ಹಾಜರಾಗದೆ, ಗುಡ್ ಫ್ರೈಡೆ ಮತ್ತು ಈಸ್ಟರ್ ಆಚರಣೆಯನ್ನು ನಡೆಸಲಾಗುತ್ತಿದೆ ಎಂದು ಗೋವಾ ಚರ್ಚ್‌ನ ಸಾಮಾಜಿಕ ವಿಭಾಗದ ನಿರ್ದೇಶಕ ಫಾದರ್ ಮಾವೆರಿಕ್ ಫರ್ನಾಂಡಿಸ್ ತಿಳಿಸಿದ್ದಾರೆ.

ಚರ್ಚ್​ನಲ್ಲಿ ನಡೆಯಬೇಕಾಗಿರುವ ಕಾರ್ಯಕ್ರಮಗಳು ವೇಳಾಪಟ್ಟಿಯಂತೆ ನಡೆಯುತ್ತವೆ. ಆದರೆ ಜನರ ಭಾಗವಹಿಸುವಿಕೆ ಇರುವುದಿಲ್ಲ. ಚರ್ಚ್​ ಪಾದ್ರಿಗಳು ತಮ್ಮ ಚರ್ಚ್​ಗಳಲ್ಲಿ ನಡೆಯುವ ಪ್ರಾರ್ಥನೆಗಳನ್ನು ಸಾಮಾಜಿಕ ಮಾಧ್ಯಮಗಳ ಮೂಲಕ ನೇರ ಪ್ರಸಾರ ಮಾಡುತ್ತಾರೆ. ಭಕ್ತರ ಸಂಖ್ಯೆ ಹೆಚ್ಚು ಇಲ್ಲದಿರುವುದು ಆಚರಣೆಯ ಉತ್ಸಾಹಕ್ಕೆ ಧಕ್ಕೆ ತರುವುದಿಲ್ಲ ಎಂದು ಅವರು ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.