ETV Bharat / bharat

ಮನೆಗಳಲ್ಲಿ ಗಾಂಜಾ ಬೆಳೆಸುವವರ ವಿರುದ್ಧ ಕಠಿಣ ಕ್ರಮ; ಗೋವಾ ಐಜಿಪಿ - ಮನೆಗಳಲ್ಲಿ ಡ್ರಗ್ಸ್ ಬೆಳೆಯಲಾಗುತ್ತಿದೆ

ಕಳೆದ ಎರಡು ವರ್ಷಗಳಿಂದ 12 ಕ್ಕೂ ಹೆಚ್ಚು ದಾಳಿಗಳು ನಡೆದಿವೆ. ವಿಶೇಷವಾಗಿ ಕರಾವಳಿ ಪ್ರದೇಶದ ಹಳ್ಳಿಗಳಲ್ಲಿನ ಬಾಡಿಗೆ ಮನೆಗಳಲ್ಲಿ ಗಾಂಜಾ ಸಸ್ಯಗಳನ್ನು ರಹಸ್ಯವಾಗಿ ಬೆಳೆಸಲಾಗುತ್ತಿದೆ ಎಂದು ಗೋವಾ ಐಜಿಪಿ ಜಸ್ಪಾಲ್ ಸಿಂಗ್ ಹೇಳಿದರು.

ಡ್ರಗ್ಸ್ ಬೆಳೆ
ಡ್ರಗ್ಸ್ ಬೆಳೆ
author img

By

Published : Jun 26, 2020, 7:20 PM IST

ಪಣಜಿ: ರಾಜ್ಯದಲ್ಲಿ ಮಾದಕ ದ್ರವ್ಯಗಳ ಕಳ್ಳಸಾಗಣೆಗೆ ಪೊಲೀಸರು ಕಡಿವಾಣ ಹಾಕಿದ ಪರಿಣಾಮ ಈಗ ಮನೆಗಳಲ್ಲಿ ರಹಸ್ಯವಾಗಿ ಮಾದಕ ವಸ್ತುಗಳನ್ನು ಬೆಳೆಯಲಾಗುತ್ತಿದೆ ಎಂದು ಐಜಿಪಿ ಜಸ್ಪಾಲ್ ಸಿಂಗ್ ತಿಳಿಸಿದರು.

ಮಾದಕ ದ್ರವ್ಯ ಸೇವನೆ ವಿರುದ್ಧ ಅಂತಾರಾಷ್ಟ್ರೀಯ ದಿನಾಚರಣೆಯ ಸಂದರ್ಭದಲ್ಲಿ ಗೋವಾ ಪೊಲೀಸರು ಆಯೋಜಿಸಿದ್ದ ಸಮಾರಂಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಐಜಿಪಿ ಜಸ್ಪಾಲ್ ಸಿಂಗ್, ಗೋವಾ ಒಮ್ಮೆ ಮಾದಕವಸ್ತು ಭೀತಿಯಿಂದ ಮುಕ್ತವಾದರೆ ಪ್ರವಾಸಿಗರನ್ನು ರಾಜ್ಯಕ್ಕೆ ಆಕರ್ಷಿಸಲು ಸಾಧ್ಯವಾಗುತ್ತದೆ. ಗುಣಮಟ್ಟದ ಪ್ರವಾಸಿಗರು ರಾಜ್ಯದ ಅಸಂಖ್ಯಾತ ಪ್ರವಾಸೋದ್ಯಮ ಕೊಡುಗೆಗಳನ್ನು ಮುಕ್ತವಾಗಿ ಆನಂದಿಸಬಹುದು ಎಂದು ಹೇಳಿದರು.

ಮನೆಗಳಲ್ಲಿ ನಿಯಂತ್ರಿತ ವಾತಾವರಣದಲ್ಲಿ ಮರಿಜುವಾನಾ ಬೆಳೆಯುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿರುವ ಬಗೆಗಿನ ಪ್ರಶ್ನೆಗೆ ಉತ್ತರಿಸಿದ ಅವರು, ಡ್ರಗ್ಸ್​ಗಳು ಆಮದಾಗದಂತೆ ನಾವು ಕಟ್ಟೆಚ್ಚರ ವಹಿಸಿರುವುದನ್ನು ಇದು ಸೂಚಿಸುತ್ತದೆ. ಹೊರಗಿನಿಂದ ಯಾವುದೇ ಡ್ರಗ್ಸ್​ ಒಳಗೆ ಬರುತ್ತಿಲ್ಲವಾದ್ದರಿಂದ ಈಗ ಅವರು ಅದನ್ನು ಮನೆಯಲ್ಲೇ ಬೆಳೆಸುತ್ತಿದ್ದಾರೆ. ಆದರೆ ಅದೆಲ್ಲ ಬಹುಶಃ ಗಾಂಜಾ ಬೆಳೆ ಅಥವಾ ಅದರ ರೀತಿಯದೇ ಯಾವುದೋ ಬೆಳೆಯಾಗಿದೆ ಎಂದರು.

ಸದ್ಯಕ್ಕೆ ಎಲ್ಲಿಯೂ ಸಿಂಥೆಟಿಕ್​ ಡ್ರಗ್ಸ್​ಗಳನ್ನು ತಯಾರಿಸಲಾಗುತ್ತಿಲ್ಲ. ಅಂಥವರ ಮೇಲೂ ನಾವು ವ್ಯಾಪಕ ಪ್ರಮಾಣದ ದಾಳಿ ನಡೆಸಿ ಹಲವಾರು ಪ್ರಕರಣಗಳನ್ನು ದಾಖಲಿಸಿದ್ದೇವೆ. ಇಂಥ ಕಾನೂನುಬಾಹಿರ ಚಟುವಟಿಕೆಗಳನ್ನು ತಡೆಗಟ್ಟಲು ಸಾರ್ವಜನಿಕರ ಸಹಕಾರವೂ ಬೇಕು. ಯಾರಿಗೇ ಆದರೂ ಈ ರೀತಿಯ ಪ್ರಕರಣಗಳ ಬಗ್ಗೆ ಮಾಹಿತಿ ಇದ್ದಲ್ಲಿ ಅವರು ಪೊಲೀಸ್ ಇಲಾಖೆಗೆ ತಿಳಿಸಬೇಕು ಎಂದು ಐಜಿಪಿ ಜಸ್ಪಾಲ್ ಸಿಂಗ್ ಮನವಿ ಮಾಡಿದರು.

ಕಳೆದ ಎರಡು ವರ್ಷಗಳಿಂದ 12 ಕ್ಕೂ ಹೆಚ್ಚು ದಾಳಿಗಳು ನಡೆದಿವೆ. ವಿಶೇಷವಾಗಿ ಕರಾವಳಿ ಪ್ರದೇಶದ ಹಳ್ಳಿಗಳಲ್ಲಿನ ಬಾಡಿಗೆ ಮನೆಗಳಲ್ಲಿ ಗಾಂಜಾ ಸಸ್ಯಗಳನ್ನು ರಹಸ್ಯವಾಗಿ ಬೆಳೆಸಲಾಗುತ್ತಿದೆ. ಹಲವಾರು ಭಾರತೀಯ ಪ್ರಜೆಗಳನ್ನು ಹೊರತುಪಡಿಸಿ, ನಾಲ್ಕು ಪ್ರಕರಣಗಳಲ್ಲಿ ರಷ್ಯಾದ ಪ್ರಜೆಗಳು ಸೇರಿದಂತೆ ವಿದೇಶಿಯರನ್ನು ಸಹ ದಾಳಿಗಳಲ್ಲಿ ಬಂಧಿಸಲಾಗಿದೆ ಎಂದು ತಿಳಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.