ಹೈದರಾಬಾದ್ : ಕೋವಿಡ್-19 ಚಿಕಿತ್ಸೆಗಾಗಿ ಹೆಟೆರೊ ಕಂಪನಿಯು ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ) ಯಿಂದ ರೆಮ್‌ಡೆಸಿವಿರ್ ಉತ್ಪಾದನೆ ಮತ್ತು ಮಾರುಕಟ್ಟೆ ಅನುಮೋದನೆಯನ್ನು ಪಡೆದಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಕಂಪನಿಯ ಜೆನರಿಕ್ ಆವೃತ್ತಿಯ ರೆಮ್‌ಡೆಸಿವಿರ್ ಅನ್ನು ಭಾರತದಲ್ಲಿ 'ಕೋವಿಫೋರ್' ಬ್ರಾಂಡ್ ಹೆಸರಿನಲ್ಲಿ ಮಾರಾಟ ಮಾಡಲಾಗುವುದು. ವಯಸ್ಕರು ಮತ್ತು ಮಕ್ಕಳಲ್ಲಿ, ಕೊರೊನಾ ಶಂಕಿತ ಅಥವಾ ಪ್ರಯೋಗಾಲಯ ದೃಢಪಡಿಸಿದ ಪ್ರಕರಣಗಳ ಚಿಕಿತ್ಸೆಗಾಗಿ ಔಷಧಿಯನ್ನು ಬಳಸಲು ಡಿಸಿಜಿಐ ಅನುಮೋದನೆ ನೀಡಿದೆ.
ಭಾರತದಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ, 'ಕೋವಿಫೋರ್' (ರೆಮ್‌ಡೆಸಿವಿರ್) ನ ಅನುಮೋದನೆಯು ಅದರ ಸಕಾರಾತ್ಮಕ ಕ್ಲಿನಿಕಲ್ ಫಲಿತಾಂಶಗಳನ್ನು ಗಮನದಲ್ಲಿಟ್ಟುಕೊಂಡು ಚಿಕಿತ್ಸೆಗಾಗಿ ಔಷಧಿಯನ್ನು ಬಳಸಲು ಒಪ್ಪುಗೆ ನೀಡಲಾಗಿದೆ.
ಈ ಔಷಧವು 100 ಮಿಗ್ರಾಂ ಬಾಟಲಿಯಲ್ಲಿ (ಚುಚ್ಚುಮದ್ದಿನ) ಲಭ್ಯವಿರುತ್ತದೆ. ಇದನ್ನು ವೈದ್ಯರ ಮೇಲ್ವಿಚಾರಣೆಯಲ್ಲಿ ಆಸ್ಪತ್ರೆಯ ವ್ಯವಸ್ಥೆಯಲ್ಲಿ ಅಭಿದಮನಿ ಮೂಲಕ ನೀಡಬೇಕಾಗುತ್ತದೆ ಎಂದು ಹೆಟೆರೊ ಹೇಳಿದೆ.