ETV Bharat / bharat

ಬಿಎಸ್​ಎನ್​ಎಲ್​ ವಿಆರ್​ಎಸ್​ ನೌಕರರ ಎಕ್ಸ್​ಗ್ರೇಶಿಯಾ ಪಾವತಿಗೆ 5,278 ಕೋಟಿ ರೂ. ಬಿಡುಗಡೆ

author img

By

Published : Jul 12, 2020, 7:58 PM IST

ಸ್ವಯಂಪ್ರೇರಿತ ನಿವೃತ್ತಿ ಯೋಜನೆಯನ್ನು ಆಯ್ಕೆ ಮಾಡಿಕೊಂಡಿದ್ದ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ ಉದ್ಯೋಗಿಗಳಿಗೆ ದೂರಸಂಪರ್ಕ ಇಲಾಖೆಯಿಂದ 5,278 ಕೋಟಿ ರೂ. ಈ ಹಣವನ್ನು ಬಿಡುಗಡೆಗೊಳಿಸಲಾಗಿದೆ. ಈ ಹಣವನ್ನು ಜುಲೈ 31 ರಂದು ಅಥವಾ ಅದಕ್ಕೂ ಮೊದಲು ಎಕ್ಸ್ ಗ್ರೇಶಿಯಾ ಪಾವತಿಗೆ ಮಾತ್ರ ಬಳಸಬೇಕು ಎಂದು ಇಲಾಖೆಯ ನಿರ್ದೇಶನದಲ್ಲಿ ತಿಳಿಸಲಾಗಿದೆ.

ಬಿಎಸ್‌ಎನ್‌ಎಲ್​
ಬಿಎಸ್‌ಎನ್‌ಎಲ್​

ನವದೆಹಲಿ: ಸ್ವಯಂಪ್ರೇರಿತ ನಿವೃತ್ತಿ ಯೋಜನೆ (ವಿಆರ್‌ಎಸ್) ಆಯ್ಕೆ ಮಾಡಿಕೊಂಡಿರುವ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (ಬಿಎಸ್‌ಎನ್‌ಎಲ್) ಉದ್ಯೋಗಿಗಳಿಗೆ ಎಕ್ಸ್​ಗ್ರೇಶಿಯಾ ಪಾವತಿಸಲು ದೂರಸಂಪರ್ಕ ಇಲಾಖೆ (ಡಿಒಟಿ) 5,278 ಕೋಟಿ ರೂ. ಬಿಡುಗಡೆಗೊಳಿಸಿದೆ.

ಬಿಎಸ್​ಎನ್​ಎಲ್​ ನೌಕರರು ದೂರಸಂಪರ್ಕ ಇಲಾಖೆ ಕಾರ್ಯದರ್ಶಿ ಹಾಗೂ ಖರ್ಚು-ವೆಚ್ಚ ಇಲಾಖೆಗೆ ಈ ಕುರಿತು ಕಾನೂನಾತ್ಮಕ ನೋಟಿಸ್ ನೀಡಿದ್ದರು. ಎಕ್ಸ್​ಗ್ರೇಶಿಯಾವನ್ನು ಮಾರ್ಚ್ 31 ಹಾಗೂ ಜೂನ್ 30 ರಂದು ಎರಡು ಸಮಾನ ಕಂತುಗಳಲ್ಲಿ ಪಾವತಿಸುವುದಾಗಿ ಇಲಾಖೆ ಭರವಸೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.

ವಿಆರ್​ಎಸ್​ ಆಯ್ಕೆ ಮಾಡಿಕೊಂಡ ಉದ್ಯೋಗಿಗಳಿಗೆ ಎಕ್ಸ್​ಗ್ರೇಶಿಯಾ ಪಾವತಿಗಾಗಿ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (ಬಿಎಸ್ಎನ್ಎಲ್)ಗೆ 5,278 ಕೋಟಿ ರೂ. ಪಾವತಿಸಲಾಗಿದೆ ಎಂದು ದೂರಸಂಪರ್ಕ ಇಲಾಖೆ ಸುತ್ತೋಲೆಯಲ್ಲಿ ತಿಳಿಸಿದೆ.

ಈ ಹಣವನ್ನು ಜುಲೈ 31 ರಂದು ಅಥವಾ ಅದಕ್ಕೂ ಮೊದಲು ಎಕ್ಸ್​ಗ್ರೇಶಿಯಾ ಪಾವತಿಗೆ ಮಾತ್ರ ಬಳಸಬೇಕು ಎಂದು ಇಲಾಖೆಯ ನಿರ್ದೇಶನದಲ್ಲಿ ತಿಳಿಸಲಾಗಿದೆ. 70,000 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಬಿಎಸ್​ಎನ್​ಎಲ್​ ಮತ್ತು ಎಂಟಿಎನ್​ಎಲ್​ಗಳನ್ನು ಪುನಶ್ಚೇತನಗೊಳಿಸುವ ಯೋಜನೆಯಡಿ 53 ವರ್ಷಕ್ಕೂ ಮೇಲ್ಪಟ್ಟ ಉದ್ಯೋಗಿಗಳಿಗೆ ಸ್ವಯಂಪ್ರೇರಿತ ನಿವೃತ್ತಿ ಯೋಜನೆಯನ್ನು ಜಾರಿಗೆ ತರಲಾಗಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.