ETV Bharat / bharat

Editorial: ಸ್ಥಳೀಯರಿಗೆ ಉದ್ಯೋಗ ಮೀಸಲು ನೀಡುವುದರಿಂದ ನಿರುದ್ಯೋಗ ಕಡಿಮೆಯಾಗುತ್ತಾ? - unemployment problem

ಸ್ಥಳೀಯತೆಯ ಕೂಗಿನಿಂದ ಹೊರಹೊಬರಲು ಉತ್ತಮ ಮಾರ್ಗವೆಂದರೆ ಆರ್ಥಿಕ ಚೇತರಿಕೆ- ಪರಿತಾಳ ಪುರುಷೋತ್ತಮ್‌

unemployment problem, ನಿರುದ್ಯೋಗ ಸಮಸ್ಯೆಗೆ ಪರಿಹಾರ
ನಿರುದ್ಯೋಗ ಸಮಸ್ಯೆ
author img

By

Published : Dec 17, 2019, 7:07 PM IST

Updated : Dec 17, 2019, 7:17 PM IST

ಸ್ಥಳೀಯರಿಗೆ ಉದ್ಯೋಗ ನೀಡಿ ನಿರುದ್ಯೋಗ ಸಮಸ್ಯೆಯಿಂದ ಅವರನ್ನು ರಕ್ಷಿಸಬೇಕೆಂಬ ಸ್ಥಳೀಯತೆಯ ಕೂಗು ಭಾರತದಲ್ಲಿ ಮತ್ತೆ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳುತ್ತಿದೆ. ಆರ್ಥಿಕ ಹಿಂಜರಿತದ ಹೊತ್ತಿನಲ್ಲಿ ಇಂಥ ಕೂಗು ಹೊಸತೇನಲ್ಲ. ಆದಾಗ್ಯೂ, ದೇಶದ ಪ್ರತಿ ನಗರದಲ್ಲಿಯೂ ಈ ಕೂಗು ಕಾನೂನಾಗಿ ಮಾರ್ಪಾಡಾಗುತ್ತಿದೆ. ಮಹಾರಾಷ್ಟ್ರದ ಹೊಸ ಸರ್ಕಾರವು ತನ್ನ ಶೇ.80ರಷ್ಟು ಉದ್ಯೋಗಗಳನ್ನು ಸ್ಥಳೀಯ ಕಾರ್ಮಿಕರಿಗಾಗಿ ಕಾಯ್ದಿರಿಸಿದೆ. ಪ್ರಸ್ತುತ ಆಂಧ್ರಪ್ರದೇಶ ಸರ್ಕಾರವು ಕೆಲವು ತಿಂಗಳ ಹಿಂದೆ "ಕೈಗಾರಿಕೆಗಳು / ಕಾರ್ಖಾನೆಗಳ ಮಸೂದೆ, 2019 ರಲ್ಲಿ ಸ್ಥಳೀಯ ಅಭ್ಯರ್ಥಿಗಳಿಗೆ ಆಂಧ್ರಪ್ರದೇಶದಲ್ಲಿ ಉದ್ಯೋಗ" ಎಂಬ ಕಾಯ್ದೆಯನ್ನು ಅಂಗೀಕರಿಸಿದೆ. ಈ ಕಾನೂನಿನ ಪ್ರಕಾರ, ಕೈಗಾರಿಕೆಗಳಲ್ಲಿ ಶೇ.75ರಷ್ಟು ಉದ್ಯೋಗಗಳು ಸ್ಥಳೀಯರಿಗೆ ಮೀಸಲಾಗಿವೆ. ಇದೇ ನೀತಿಯಂತೆ ರಾಜ್ಯದಲ್ಲಿನ ಎಲ್ಲ ಉದ್ಯಮವು ಮೂರು ವರ್ಷ ಸ್ಥಳೀಯರಿಗೆ ಆದ್ಯತೆ ನೀಡಬೇಕು ಮತ್ತು ಈ ಅವಧಿಯಲ್ಲಿ ಉದ್ಯೋಗ ಕ್ಷೇತ್ರಕ್ಕೆ ಅಗತ್ಯ ಸಮರ್ಪಕ ಕೌಶಲ್ಯ ಹೊಂದಿರುವ ಸಿಬ್ಬಂದಿ ಸಿಗದಿದ್ದರೆ, ಕಂಪನಿಗಳು ಸ್ಥಳೀಯರಿಗೆ ಅಗತ್ಯ ಕೌಶಲ್ಯಗಳೊಂದಿಗೆ ತರಬೇತಿ ನೀಡಬೇಕು.

ಒಂದೆಡೆ ಸರ್ಕಾರಗಳ ಈ ಹೆಜ್ಜೆ ಸ್ಥಳೀಯರಿಗೆ ಉದ್ಯೋಗದ ಭರವಸೆ ನೀಡುತ್ತವೆ. ಆದರೆ ಇನ್ನೊಂದೆಡೆ ಈ ಕ್ರಮವು ಸ್ಥಳೀಯ ಪ್ರದೇಶಗಳಲ್ಲಿ ಹೊಸ ಹೂಡಿಕೆಗೆ ಅಡ್ಡಗಾಲಾಗಬಹುದು. ಹೂಡಿಕೆ ಕೊರತೆಯಿಂದ ಕೈಗಾರಿಕೆಗಳ ಸಂಖ್ಯೆ ಕ್ಷೀಣಿಸಿ, ಮತ್ತೆ ಅದು ದೇಶದಲ್ಲಿನ ಉದ್ಯೋಗ ನಷ್ಟಕ್ಕೆ ಕಾರಣವಾಗಬಹುದು. ಇದರಿಂದಾಗಿ ರಾಷ್ಟ್ರದ ಒಟ್ಟಾರೆ ಆರ್ಥಿಕ ಬೆಳವಣಿಗೆ ಕುಂಠಿತಗೊಳ್ಳುತ್ತದೆ. ಬ್ರೆಕ್ಸಿಟ್ ಕಾರಣದಿಂದಾಗಿ ಇಂಗ್ಲೆಂಡ್‌ನಲ್ಲಿ ಈಗ ಆಗಿರುವ ಪರಿಸ್ಥಿತಿಯೇ ನಮಗೂ ಎದುರಾಗಬಹುದು ಎಂಬುದನ್ನು ನೆನಪಿನಲ್ಲಿಡಬೇಕು. ಆದಾಗ್ಯೂ, ಸ್ಥಳೀಯರಿಗೆ ಉದ್ಯೋಗ ಕಡ್ಡಾಯ ಎಂಬಂಥ ಈ ನಿಯಮಗಳು ಅಭಿವೃದ್ಧಿ ಹೊಂದಿದ ರಾಜ್ಯಗಳಲ್ಲಿ ಸಕಾರಾತ್ಮಕವಾಗಿ ಕೆಲಸ ಮಾಡಬಹುದು. ಆದರೆ ದೀರ್ಘಾವಧಿಯಲ್ಲಿ ಇದು ಧನಾತ್ಮಕ ಸಂಗತಿಯಾಗುಬುದು ತುಸು ಕಷ್ಟದಾಯಕ. ಬಡ ರಾಜ್ಯಗಳಲ್ಲಿ, ವಿಶೇಷವಾಗಿ ಹಿಂದಿಯನ್ನು ಹೃದಯವಾಗಿಸಿಕೊಂಡಿರುವ ಬಿಹಾರ, ಮಧ್ಯಪ್ರದೇಶ, ರಾಜಸ್ಥಾನ, ಉತ್ತರ ಪ್ರದೇಶದಂತಹ ರಾಜ್ಯಗಳಲ್ಲಿ ಆದಾಯ ಮತ್ತು ಅವಕಾಶಗಳಲ್ಲಿನ ಅಸಮಾನತೆಗೆ ಕಾರಣವಾಗಬಹುದು. ಭಾರತದ ಕಾರ್ಮಿಕ ಮಾರುಕಟ್ಟೆಯನ್ನು ಪರಿಗಣಿಸಿದರೆ ಸುಮಾರು ಶೇ.20ರಷ್ಟು ಅಥವಾ ದೇಶದಲ್ಲಿ 100 ದಶಲಕ್ಷ ಉದ್ಯೋಗಿಗಳು ವಲಸೆ ಬಂದವರು; ಹೀಗಾಗಿ ಸ್ಥಳೀಯರಲ್ಲಿ ಕೌಶಲ್ಯದ ಕೊರತೆಯು ಉದ್ಯಮದ ಲಾಭದಾಯಕತೆಯ ಮೇಲೆ ಮತ್ತಷ್ಟು ಪರಿಣಾಮ ಬೀರುತ್ತದೆ. ಲಾಭದ ಇಳಿಕೆ ಇನ್ನಷ್ಟು ಉದ್ಯೋಗ ಕಡಿತಕ್ಕೇ ಕಾರಣವಾಗಬಹುದು!
ವಾಸ್ತವವಾಗಿ, ಮಹಾರಾಷ್ಟ್ರ ಸರ್ಕಾರವು 2008ರಲ್ಲಿ ರಾಜ್ಯ ರಿಯಾಯಿತಿಗಳೊಂದಿಗೆ ಶೇ.80ರಷ್ಟು ಸ್ಥಳೀಯ ಮೀಸಲಾತಿ ನಿಯಮ ಜಾರಿಯ ಪ್ರಸ್ತಾಪ ಮುಂದಿಟ್ಟಿತ್ತು. ಆದರೆ ಕೌಶಲ್ಯ ಭರಿತ ಕಾರ್ಮಿಕರ ಕೊರತೆಯಿಂದಾಗಿ, ಈ ಪ್ರಸ್ತಾಪವನ್ನು ಅನುಷ್ಠಾನಕ್ಕೆ ತರಲು ಸಾಧ್ಯವಾಗಲಿಲ್ಲ. ಅಂತೆಯೇ, ಕರ್ನಾಟಕವು 2016ರಲ್ಲಿ ಶೇ.100ರಷ್ಟು ಸ್ಥಳೀಯ ಮೀಸಲಾತಿ ಪ್ರಸ್ತಾಪವನ್ನು ತಂದಿತು. ಆದರೆ ಇದನ್ನು ಅಸಂವಿಧಾನಿಕ ಎಂದ ಕಾನೂನು ಇಲಾಖೆ, ಪ್ರಸ್ತಾಪವನ್ನು ಜಾರಿಗೆ ತರದಂತೆ ನಿಷೇಧ ಹೇರಿತು.

ಮಧ್ಯಪ್ರದೇಶವು ಕೂಡ ಇದೇ ರೀತಿಯ ಕಾನೂನಿಗೆ ಸಜ್ಜಾಗುತ್ತಿದೆ. ಸ್ಥಳೀಯ ಉದ್ಯೋಗಿಗಳನ್ನು ಕಾಪಾಡಲು ಮುಂಚೂಣಿಯಲ್ಲಿರುವ ನಂತರದ ರಾಜ್ಯಗಳಲ್ಲಿ ಗೋವಾ ಮತ್ತು ಒಡಿಶಾ ಸ್ಥಾನ ಪಡೆದಿರಬಹುದು. ಮಹಾರಾಷ್ಟ್ರ ಮತ್ತು ಅಸ್ಸಾಂ ವಿಭಿನ್ನ ಕಾರಣಗಳಿಗಾಗಿ ಒಂದೇ ರೀತಿಯ ಸ್ಥಳೀಯತೆಯ ಆಂದೋಲನಗಳನ್ನು ಹೊಂದಿವೆ. ಅಲ್ಲಿನ ರಾಜಕಾರಣ ನಿಂತಿರುವುದೇ ಸ್ಥಳೀಯತೆ ಮೇಲೆ. ಆದಾಗ್ಯೂ ಭಾರತದ ಆರ್ಥಿಕ ವಲಸೆ ಹಾದಿಯು ಪ್ರಮುಖವಾಗಿ ದಿಕ್ಕು ಬದಲಿಸಿದ ಪರಿಣಾಮವಾಗಿ, ಉತ್ತರ ಭಾರತೀಯ ವಲಸೆ ವಿರೋಧಿ ಕೂಗುಗಳು ಈ ಭಾಗಗಳಲ್ಲಿ ನಿಧಾನವಾಗಿ ಕ್ಷೀಣಿಸಲು ಪ್ರಾರಂಭವಾಗಿವೆ.

ಇದೇ ರೀತಿ ಆಲೋಚನೆಗೆ ದೇಶದಲ್ಲಿ ಇತ್ತೀಚಿನ ಸೇರ್ಪಡೆ ಕರ್ನಾಟಕ ಸರ್ಕಾರ. ಬೆಂಗಳೂರಿನಂತ ಅಂತಾರಾಷ್ಟ್ರೀಯ ಐಟಿ ತಾಣವನ್ನು ಹೊಂದಿರುವ ರಾಜ್ಯ, ಐಟಿ ಕ್ಷೇತ್ರದಲ್ಲಿನ ಉದ್ಯೋಗಾವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಲು ಸ್ಥಳೀಯ ಪ್ರತಿಭಾವಂತರ ಸಂಖ್ಯೆಯನ್ನು ಹೆಚ್ಚಿಸಲು ಪ್ರಯತ್ನಿಸುತ್ತಿದೆ. ಸ್ವತಃ ಕರ್ನಾಟಕದ ಮುಖ್ಯಮಂತ್ರಿಗಳೇ ತಮ್ಮ ಸ್ವಾತಂತ್ರ್ಯ ದಿನಾಚರಣೆ ಭಾಷಣದಲ್ಲಿ ಈ ವಿಷಯವನ್ನು ಪ್ರಕಟಿಸಿದ್ದಾರೆ.

ಅತಿರೇಕಗೊಂಡಿರುವ ರಾಷ್ಟ್ರಪ್ರೇಮದ ರಾಜಕೀಯದಲ್ಲಿ ದೇಶದ ಇತರ ಅಂಕಿ-ಅಂಶಗಳು ನಗಣ್ಯಗೊಂಡಿರುವುದು ದುರಂತದ ಸಂಗತಿ. ಆದರೆ ಈ ವಾಸ್ತವದಲ್ಲಿ, ಭಾರತದ ವಲಸೆಯ ಬದಲಾಗುತ್ತಿರುವ ಸ್ವಭಾವದ ಬಗ್ಗೆ ಹೋರಾಡಲು ಪುರಾವೆಗಳನ್ನು ಎದುರು ನೋಡುತ್ತಿರುವವರಿಗೂ ಕಳೆದ ತಿಂಗಳ ಅಂತ್ಯದವರೆಗೆ ಇದಕ್ಕೆ ಸಂಬಂಧಪಟ್ಟ ಯಾವುದೇ ಪುರಾವೆ ಸಿಕಿಲ್ಲ. ಅತ್ಯಂತ ತಡವಾಗಿ ಪ್ರಕಟಗೊಂಡ 2011ರ ಜನಗಣತಿ ಅಂಕಿ-ಅಂಶವು 2000ರ ದಶಕದಲ್ಲಿ ಭಾರತದ ಆರ್ಥಿಕ ಬೆಳವಣಿಗೆ ಗಣನೀಯವಾಗಿ ಹೆಚ್ಚಾದಾಗಲೂ, ಕೆಲಸ ಮತ್ತು ಸಂಬಂಧಿತ ವಲಸೆ ರಾಜ್ಯಗಳ ಗಡಿಯೊಳಗೆ ಉಳಿದಿದೆ ಎಂಬುದನ್ನು ಸಾಬೀತುಪಡಿಸಿದೆ. 2001 ಮತ್ತು 2011 ರ ನಡುವೆ ಅಂತರ್‌ರಾಜ್ಯ ವಲಸೆ ಗಣನೀಯವಾಗಿ ಏರಿಕೆಯಾಗಲಿಲ್ಲ ಎಂಬುದನ್ನು ಜನಗಣತಿ ಮತ್ತೊಮ್ಮೆ ತೋರಿಸಿದೆ ಮತ್ತು ಭಾರತದ ಸಂವಿಧಾನದಲ್ಲಿ ಪ್ರತಿಪಾದಿಸಲ್ಪಟ್ಟ ಸ್ಥಳೀಯತೆಯ ವಿರುದ್ಧದ ಪ್ರಕರಣಗಳು ಕೂಡ ಏರಿಕೆ ಕಂಡಿಲ್ಲ ಎಂಬುದು ದತ್ತಾಂಶದಿಂದ ಸ್ಪಷ್ಟವಾಗಿದೆ.

ಭಾರತದ ವಲಸೆ ಕಥೆಯಲ್ಲಿ ನಿರ್ಣಾಯಕವಾಗಿ ದಿಕ್ಕಿನ ಬದಲಾವಣೆಯಾಗಿದೆ ಎಂಬುದನ್ನು ಜನಗಣತಿ ಹೊಸ ಒಳನೋಟವು ನೀಡುತ್ತಿದೆ-ಹಿಂದಿ ಹೃದಯಭಾಗದ ರಾಜ್ಯಗಳಲ್ಲಿನ ಜನರ ವಲಸೆಯು ಪಶ್ಚಿಮ ಕರಾವಳಿಯ ಆರ್ಥಿಕ ಕೇಂದ್ರಗಳತ್ತ ಮಾತ್ರವೇ ಹೋಗಿಲ್ಲ, ಆದರೆ ಹೊಸದಾಗಿ ಉತ್ತರದಿಂದ ದಕ್ಷಿಣಕ್ಕೆ ಕಾರಿಡಾರ್‌ಗೂ ವಲಸೆ ತನ್ನ ದಿಕ್ಕನ್ನು ಬದಲಿಸಿದೆ ಎಂಬುದು ಈ ಜನಗಣತಿ ಅಂಕಿ-ಅಂಶಗಳಿಂದ ಬೆಳಕಿಗೆ ಬಂದಿದೆ. ಉತ್ತಮ ಶೈಕ್ಷಣಿಕ ಅವಕಾಶಗಳ ಹುಡುಕಾಟದಲ್ಲಿ ಹೆಚ್ಚಿನ ಭಾರತೀಯರು ರಾಜ್ಯದಿಂದ ರಾಜ್ಯಕ್ಕೆ ಪ್ರಯಾಣಿಸುತ್ತಿದ್ದಾರೆ. ಆದರೆ ಹೊಸದಾಗಿ ಹೊರಹೊಮ್ಮುತ್ತಿರುವ ಈ ಹಾದಿಗಳ ಹೊರತಾಗಿಯೂ, ಭಾರತದ ಬಹುಪಾಲು ಜಿಲ್ಲೆಗಳಲ್ಲಿ, ಅದರಲ್ಲಿಯೂ ನಗರಗಳಲ್ಲಿ ಉದ್ಯೋಗದಲ್ಲಿರುವವರ ಪೈಕಿ 10ಕ್ಕಿಂತ ಕಡಿಮೆ (ಅಥವಾ 10% ಕ್ಕಿಂತ ಕಡಿಮೆ) ಅಂತರರಾಜ್ಯ ವಲಸಿಗರು. ಸ್ಥಳೀಯರಿಗೆ ಉದ್ಯೋಗ ಮೀಸಲಾತಿ ಬೇಕೆಂಬ ಕೂಗು ಪ್ರಬಲವಾಗಿರುವ ಮಧ್ಯಪ್ರದೇಶದಲ್ಲಿ, ಈ ಪಾಲು ಕೇವಲ ಶೇ.5ರಷ್ಟು ಎಂಬುದು ಗಣನೀಯ ಸಂಗತಿಯಾಗಿದೆ.

ಅಂತರರಾಜ್ಯ ವಲಸೆ :

ಭಾರತದ ಸಂವಿಧಾನವು ಚಲನೆಯ ಸ್ವಾತಂತ್ರ್ಯವನ್ನು ಖಾತರಿಪಡಿಸುತ್ತದೆ ಮತ್ತು ಇದರ ಪರಿಣಾಮವಾಗಿ ಭಾರತದೊಳಗೆ ಹಲವಾರು ನಿಬಂಧನೆಗಳ ಮೂಲಕ ಉದ್ಯೋಗವನ್ನು ನೀಡುತ್ತದೆ. ಆರ್ಟಿಕಲ್ 19 ನಾಗರಿಕರು "ಭಾರತದ ಭೂಪ್ರದೇಶದಾದ್ಯಂತ ಮುಕ್ತವಾಗಿ ಚಲಿಸಬಹುದು" ಎಂಬುದನ್ನು ಖಚಿತಪಡಿಸುತ್ತದೆ. ಸಾರ್ವಜನಿಕ ಉದ್ಯೋಗದಲ್ಲಿ ಜನ್ಮಸ್ಥಳ ಆಧಾರಿತ ತಾರತಮ್ಯಕ್ಕೆ 16ನೇ ವಿಧಿ ಅವಕಾಶ ನೀಡುವುದಿಲ್ಲ. ಜನ್ಮ ಸ್ಥಳದ ಆಧಾರದ ಮೇಲೆ ತಾರತಮ್ಯದ ವಿರುದ್ಧ 15ನೇ ವಿಧಿ ರಕ್ಷಣೆ ಒದಗಿಸುತ್ತದೆ ಮತ್ತು ಆರ್ಟಿಕಲ್ 14 ಸ್ಥಳೀಯತೆಯ ಹೊರತಾಗಿಯೂ ಕಾನೂನಿನ ಮುಂದೆ ಸಮಾನತೆಯನ್ನು ಒದಗಿಸುತ್ತದೆ. ಈ ಕೆಲವು ಕಾಯ್ದೆಗಳು ಬೃಹತ್‌ ಸುದ್ದಿಯಾದ 2014ರ ಚಾರು ಖುರಾನಾ ವರ್ಸಸ್ ಯೂನಿಯನ್ ಆಫ್ ಇಂಡಿಯಾದ ಪ್ರಕರಣದಲ್ಲಿ ಮಹತ್ತರ ಪಾತ್ರ ವಹಿಸಿವೆ. ಈ ಪ್ರಕರಣದಲ್ಲಿ ಒಕ್ಕೂಟದ ನಿಯಮದಂತೆ ಅರ್ಜಿದಾರರು ಐದು ವರ್ಷಗಳ ಕಾಲ ಮಹಾರಾಷ್ಟ್ರದಲ್ಲಿ ವಾಸಿಸಿಲ್ಲ ಎಂಬ ಕಾರಣ ನೀಡಿ ಟ್ರೇಡ್ ಯೂನಿಯನ್ ಮೇಕಪ್ ಕಲಾವಿದೆಗೆ ಸದಸ್ಯತ್ವವನ್ನು ನಿರಾಕರಿಸುತ್ತದೆ. ಆದರೆ ಭಾರತದ ಸಂವಿಧಾನದ ವಿಧಿಗಳ ಅನ್ವಯ ಅಂತಿಮವಾಗಿ ನ್ಯಾಯಾಲಯದಲ್ಲಿ ಟ್ರೇಡ್ ಯೂನಿಯನ್ ಈ ಪ್ರಕರಣದಲ್ಲಿ ಸೋಲು ಅನುಭವಿಸುತ್ತದೆ. ಆಂಧ್ರಪ್ರದೇಶ ಸರ್ಕಾರವು ಇತ್ತೀಚೆಗೆ ಅಂಗೀಕರಿಸಿದ ಉದ್ಯೋಗ ಸಂರಕ್ಷಣಾ ಕಾನೂನನ್ನು ಮುಖ್ಯವಾಗಿ ಸಾಂವಿಧಾನಿಕ ಆಧಾರದ ಮೇಲೆ ಪ್ರಶ್ನಿಸಬಹುದು.

ಆದರೆ ಸಾಂವಿಧಾನಿಕ ನಿಬಂಧನೆಗಳನ್ನು ಬದಿಗಿಟ್ಟು ನೋಡಿದರೆ, ಅಂತರರಾಜ್ಯ ವಲಸೆಯ ಸಂಖ್ಯೆಗಳು ಸ್ಥಳೀಯರಿಗೆ ಉದ್ಯೋಗ ರಕ್ಷಣೆಯ ಕುರಿತ ಚರ್ಚೆಯ ಮೇಲೆ ಪ್ರಭಾವ ಬೀರಬೇಕು. ಜನಗಣತಿಯ ಅಂಕಿಅಂಶಗಳು ಅಂತರರಾಜ್ಯ ವಲಸೆಯ ಸಂಪೂರ್ಣ ಪರಿಮಾಣವನ್ನು ಸೆರೆ ಹಿಡಿಯುತ್ತದೆ. ಸಾಮಾನ್ಯವಾಗಿ ವಲಸೆ ಅಲ್ಪಾವಧಿ ಮತ್ತು ಚಲನಶೀಲ. ಹೀಗಾಗಿ ಜನಗಣತಿಯ ಅಂಕಿ-ಅಂಶಗಳನ್ನು ಈ ವಿಷಯದಲ್ಲಿ ಗಂಭೀರವಾಗಿ ಪರಿಗಣಿಸಲಾಗುವುದಿಲ್ಲ, ಆದರೆ ಬೆಳವಣಿಗೆಯ ದರಗಳು ಮತ್ತು ತುಲನಾತ್ಮಕ ಶೇಕಡಾವಾರುಗಳಿಂದ ಈ ನಿರ್ಣಯಗಳನ್ನು ಇನ್ನೂ ಸ್ಪಷ್ಟವಾಗಿ ಪಡೆಯಬಹುದು.

ಉತ್ತರ-ದಕ್ಷಿಣ ಕಾರಿಡಾರ್ :

ದತ್ತಾಂಶದಲ್ಲಿ ಗಮನಿಸಿದಂತೆ ಉತ್ತರದಿಂದ ದಕ್ಷಿಣಕ್ಕೆ ಒಂದು ವಿಶಿಷ್ಟವಾದ ಕಾರಿಡಾರ್‌ ಕೂಡ ಇದೆ. ಉತ್ತರ ಪ್ರದೇಶ, ಬಿಹಾರ ಮತ್ತು ಪಶ್ಚಿಮ ಬಂಗಾಳವನ್ನು ಒಂದು ಬಣವೆಂದು ಪರಿಗಣಿಸಿದರೆ ಮತ್ತು ಕರ್ನಾಟಕ, ಕೇರಳ, ತಮಿಳುನಾಡು, ಆಂಧ್ರಪ್ರದೇಶ ಮತ್ತು ತೆಲಂಗಾಣವನ್ನು ಮತ್ತೊಂದು ಬಣವಾಗಿ ಪರಿಗಣಿಸಿದರೆ, ಎರಡು ಬಣಗಳ ನಡುವಿನ ದ್ವಿಪಕ್ಷೀಯ ವಲಸೆಯಲ್ಲಿ ಶೇ.85ರಷ್ಟು ದಕ್ಷಿಣದ ಕಡೆಗೆ ನಿರ್ದೇಶಿಸಲ್ಪಡುತ್ತವೆ. 2011 ರಿಂದ, ಈ ಕಾರಿಡಾರ್ ಗಣನೀಯವಾಗಿ ಬೆಳೆದಿದೆ ಎಂದು ಕ್ಷೇತ್ರ ವರದಿಗಳು ಸೂಚಿಸುತ್ತವೆ ಮತ್ತು ಇದನ್ನು 2021ರಲ್ಲಿನ ಮುಂದಿನ ಜನಗಣತಿಯಿಂದ ದೃಢಪಡಿಸಬೇಕು.

2001 ಮತ್ತು 2011 ರ ನಡುವೆ, ಆರ್ಥಿಕ ಕಾರಣಗಳಿಗಾಗಿ ಸ್ಥಳಾಂತರಗೊಂಡ ಒಟ್ಟು ಅಂತರರಾಜ್ಯ ವಲಸಿಗರ ಸಂಖ್ಯೆ, ನಿರ್ದಿಷ್ಟವಾಗಿ, 11.6 ದಶಲಕ್ಷದಿಂದ 13 ದಶಲಕ್ಷಕ್ಕೆ ಏರಿದೆ. ಗಣನೀಯ ಪ್ರಾದೇಶಿಕ ಬದಲಾವಣೆಯೊಂದಿಗೆ, ನಗರ ಉದ್ಯೋಗಿಗಳಲ್ಲಿ ಅವರ ಪಾಲು ಕೇವಲ ಶೇ.8ರಷ್ಟಿದೆ.

2017-18ರ ನ್ಯಾಷನಲ್ ಸ್ಯಾಂಪಲ್ ಸರ್ವೆ ಆಫೀಸ್ (ಎನ್ಎಸ್ಎಸ್ಒ) ಉದ್ಯೋಗ ಸಮೀಕ್ಷೆಯ ಕರಡು ಪ್ರತಿಯಂತೆ ಭಾರತದಲ್ಲಿ ನಿರುದ್ಯೋಗ ದರ 2017-18ರಲ್ಲಿ 6.1% ಕ್ಕೆ ಏರಿದ್ದು, ಇದು 45 ವರ್ಷಗಳ ಗರಿಷ್ಠ ಮಟ್ಟ ತಲುಪಿದೆ. ಭಾರತೀಯ ರಾಜ್ಯಗಳಲ್ಲಿ ಸುಮಾರು ಮೂರನೇ ಒಂದು ಭಾಗದಷ್ಟು (11) 2017-18ರಲ್ಲಿ ರಾಷ್ಟ್ರೀಯ ಸರಾಸರಿಗಿಂತ ಹೆಚ್ಚು ನಿರುದ್ಯೋಗ ಸಮಸ್ಯೆ ಹೊಂದಿವೆ ಎಂದು ಇನ್ನೂ ಬಿಡುಗಡೆಯಾಗದ ಈ ವರದಿಯಲ್ಲಿ ತಿಳಿಸಲಾಗಿದೆ.

2011-16ರ ಅವಧಿಯಲ್ಲಿ ರಾಜ್ಯಗಳ ನಡುವೆ ವಾರ್ಷಿಕ ಸರಾಸರಿ ಕಾರ್ಮಿಕ ವಲಸೆ 9 ಮಿಲಿಯನ್‌ಗೆ ಹತ್ತಿರವಾಗಿದೆ ಎಂದು 2017ರ ಆರ್ಥಿಕ ಸಮೀಕ್ಷೆ ಬಹಿರಂಗಪಡಿಸಿದೆ. ದೆಹಲಿ, ಮಹಾರಾಷ್ಟ್ರ, ತಮಿಳುನಾಡು, ಮತ್ತು ಗುಜರಾತ್‌ನಂತಹ ರಾಜ್ಯಗಳು ಹಿಂದಿ ಮಾತನಾಡುವ ರಾಜ್ಯಗಳಾದ ಉತ್ತರ ಪ್ರದೇಶ, ಬಿಹಾರ, ಮತ್ತು ಮಧ್ಯಪ್ರದೇಶದಿಂದ ಹೆಚ್ಚಿನ ಸಂಖ್ಯೆಯಲ್ಲಿ ವಲಸೆಗರನ್ನು ಆಕರ್ಷಿಸಿವೆ. ಜನಗಣತಿ 2011 ಸಹ 1991 ಮತ್ತು 2001 ರ ಜನಗಣತಿಯ ನಡುವೆ 30% ರಿಂದ 2001 ಮತ್ತು 2011 ರ ನಡುವೆ 58% ರಷ್ಟು ಅಂತರ ಜಿಲ್ಲಾ ವಲಸೆಯಲ್ಲಿ (ಅದೇ ರಾಜ್ಯದೊಳಗೆ) ಈ ಭಾಗದಿಂದ ವಲಸೆ ಬಂದವರ ಪ್ರಮಾಣ ಹೆಚ್ಚು ಎಂದು ವರದಿ ಮಾಡಿದೆ.

ವಿಪರ್ಯಾಸವೆಂದರೆ, 2011ರ ಜನಗಣತಿಯ ಪ್ರಕಾರ 93.91% ರಷ್ಟು ಅತಿ ಹೆಚ್ಚು ಸಾಕ್ಷರತೆ ಹೊಂದಿರುವ ಕೇರಳ ರಾಜ್ಯವು, 2017ರ ಆರ್ಥಿಕ ಸಮೀಕ್ಷೆ ಪ್ರಕಾರ ಗರಿಷ್ಠ ನಿರುದ್ಯೋಗಿಗಳನ್ನು ಹೊಂದಿರುವ ರಾಜ್ಯವೆನಿಸಿದೆ. ಇಲ್ಲಿ ನಿರುದ್ಯೋಗ ಪ್ರಮಾಣ ಶೇ. 11.4ರಷ್ಟು ಎಂದು ದಾಖಲಾಗಿದೆ ಮತ್ತು ಈ ರಾಜ್ಯದಲ್ಲಿ ಆಂತರಿಕ ವಲಸೆ ದರವೂ ಹೆಚ್ಚಳವಾಗಿದೆ. ಬಹುಶಃ ಕಡಿಮೆ ಕೌಶಲ್ಯದವರ ಪ್ರತಿಫಲನ ಉದ್ಯಮ-ಸಿದ್ಧ ಕಾರ್ಯಪಡೆಯು ಸ್ಥಳೀಯರನ್ನು ದೇಶದ ಇತರ ಪ್ರದೇಶಗಳಿಗೆ ವಲಸೆ ಹೋಗಲು ಒತ್ತಾಯಿಸುತ್ತಿದೆ.

ನಿಜವಾದ ಉದ್ಯೋಗಗಳು ಕಾನೂನಿನಿಂದ ರಚಿಸಲ್ಪಟ್ಟಿಲ್ಲ, ಆದರೆ ಈ ಪ್ರದೇಶದಲ್ಲಿ ಬರುವ ಕೈಗಾರಿಕೆಗಳನ್ನೇ ಅವಲಂಬಿತವಾಗಿದೆ. ದೀರ್ಘಾವಧಿಯಲ್ಲಿ ರಿಯಾಯಿತಿಗಳು ಮತ್ತು ಮೀಸಲಾತಿಗಳು ಸುಸ್ಥಿರ ಬೆಳವಣಿಗೆಗೆ ಪರಿಹಾರವಾಗದಿರಬಹುದು. ಸರಳ ಹೂಡಿಕೆದಾರ ಸ್ನೇಹಿ ನೀತಿಗಳು, ಕೌಶಲ್ಯ ಅಭಿವೃದ್ಧಿ ಮತ್ತು ರಾಜ್ಯದಲ್ಲಿ ವ್ಯವಹಾರವನ್ನು ಸುಲಭಗೊಳಿಸುವಂತಹ ವಾತಾವರಣವು ಅಗತ್ಯವಾಗಿದೆ.

ಕಾನೂನನ್ನು ಮೂಲಕ ಹೋಗುವುದು ಮತ್ತು ಅದರ ಅನುಷ್ಠಾನದಲ್ಲಿ ವ್ಯತ್ಯಾಸವಿದೆ ಎಂದು ನಾವು ಗುರುತಿಸಬೇಕು. ಆಂಧ್ರಪ್ರದೇಶದ ವಿಷಯದಲ್ಲಿಯೂ ಸಹ, ಹೊಸ ಕಾನೂನು ರಸಗೊಬ್ಬರಗಳು, ಕಲ್ಲಿದ್ದಲು, ಔಷಧಗಳು, ಪೆಟ್ರೋಲಿಯಂ ಮತ್ತು ಸಿಮೆಂಟ್‌ಗಳಂತಹ ಕೈಗಾರಿಕೆಗಳಿಗೆ ನೀಡುವ ವಿನಾಯಿತಿಯು ಐಟಿ ಉದ್ಯಮಕ್ಕೆ ವಿಸ್ತರಿಸುವುದಿಲ್ಲ. ಈ ವಿನಾಯಿತಿಯಲ್ಲಿಯೇ ಅಂತರವಿದೆ!

ನಗರದಂತಹ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಾದ ದೆಹಲಿ, ಚಂಡೀಗಢ ಅಥವಾ ದಮನ್‌ನಲ್ಲಿ, ಒಟ್ಟು ಕಾರ್ಮಿಕರಲ್ಲಿ ವಲಸೆ ಕಾರ್ಮಿಕರ ಸಂಖ್ಯೆ ಶೇ.40ಕ್ಕಿಂತ ಹೆಚ್ಚಿದೆ (ಸಕ್ರಿಯ ಉದ್ಯೋಗಿಗಳ). ಮುಂಬೈಯಲ್ಲಿ ಈ ಸಂಖ್ಯೆ ಶೇ.24ರಷ್ಟಿದ್ದರೆ, ಬೆಂಗಳೂರು, ಚೆನ್ನೈ ಮತ್ತು ಹೈದರಾಬಾದ್‌ಗಳಲ್ಲಿ ಈ ಸಂಖ್ಯೆ ಶೇ.15ಕ್ಕಿಂತ ಕಡಿಮೆಯಿದೆ.

ದೇಶದ 640 ಜಿಲ್ಲೆಗಳಲ್ಲಿ 410ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ, ವಿಶೇಷವಾಗಿ ದಕ್ಷಿಣ ಭಾರತದ ಜಿಲ್ಲೆಗಳಲ್ಲಿ, ಈ ಪ್ರಮಾಣ ಶೇ.5ಕ್ಕಿಂತ ಕಡಿಮೆಯಾಗಿದೆ. ತಮಿಳುನಾಡಿನಲ್ಲಿ, ತಿರುಪ್ಪೂರಿನಂತಹ ಉತ್ಪಾದನಾ ಕೇಂದ್ರಗಳಿಗೆ ವಲಸೆ ಬಂದ ಉದ್ಯೋಗಿಗಳು ಹೆಚ್ಚಾಗಿ ತಮಿಳುನಾಡಿನ ಇತರ ಜಿಲ್ಲೆಗಳಿಂದ ಬಂದವರು. ಜನಗಣತಿಯ ಪ್ರಕಾರ, ನಗರ ಪ್ರದೇಶಗಳಿಗೆ ಕೆಲಸಕ್ಕೆ ಸಂಬಂಧಿಸಿದ ಅಂತರರಾಜ್ಯ ವಲಸೆ, ಸರಾಸರಿ, ನಗರ ಕಾರ್ಮಿಕರ ಶೇ.10ಕ್ಕಿಂತ ಕಡಿಮೆ. ಕಡಿಮೆ ಅಂದಾಜು ಎಂದು ಪರಿಗಣಿಸಿ ಈ ಅಂಕಿಅಂಶಗಳನ್ನು ದ್ವಿಗುಣಗೊಳಿಸಿದರೂ ಸಹ, ಅವು ಕೇವಲ ಶೇ.20ರಷ್ಟು ನಗರ ಉದ್ಯೋಗಿಗಳನ್ನು ಹೊಂದಿವೆ. ಈ ಅಂಕಿಅಂಶ ಅಂತರರಾಜ್ಯ ವಲಸಿಗರು ಸ್ಥಳೀಯ ಕಾರ್ಮಿಕ ಮಾರುಕಟ್ಟೆಯನ್ನು ನುಂಗುತ್ತಿದ್ದಾರೆ, ಸ್ಥಳೀಯ ಹೊಟ್ಟೆ ಮೇಲೆ ಹೊಡೆಯುತ್ತಿದ್ದಾರೆ ಎಂಬ ಅಸಹನೆಯ ಕೂಗಿನಿಂದ ತುಂಬ ದೂರವಿದೆ.

ಸ್ಥಳೀಯತೆ ಕೂಗಿಗೆ ಇಂಬು ನೀಡುವ ಬದಲಾಗಿ, ರಾಜ್ಯಗಳು ಕೆಲಸಕ್ಕಾಗಿ ಸುರಕ್ಷಿತ ಅಂತರರಾಜ್ಯ ವಲಸೆಯನ್ನು ಸುಗಮಗೊಳಿಸುವ ಚೌಕಟ್ಟನ್ನು ರಚಿಸಬೇಕಾಗಿದೆ ಮತ್ತು ಸಾಮಾಜಿಕ ಭದ್ರತೆ ಪ್ರಯೋಜನಗಳ ಪಡೆದುಕೊಳ್ಳುವಿಕೆ ಸಕ್ರಿಯಗೊಳಿಸಲು ಹಣಕಾಸಿನ ಸಮನ್ವಯವನ್ನು ಅನುಸರಿಸಲಾಗುತ್ತದೆ. ಇದನ್ನು ಮಾಡಿದರೆ, ಅಂತರರಾಜ್ಯ ವಲಸೆ ಹೆಚ್ಚಾಗುತ್ತದೆ ಮತ್ತು ಪ್ರಾದೇಶಿಕ ಅಸಮಾನತೆಗಳನ್ನು ಪರಿಹರಿಸಲು ಹೆಚ್ಚಿನ ಅವಕಾಶಗಳನ್ನು ನೀಡುತ್ತದೆ. ಭಾರತದೊಳಗಿನ ಭೌಗೋಳಿಕತೆಗಳಲ್ಲಿ ಕೌಶಲ್ಯಗಳನ್ನು ಅಭಿವೃದ್ಧಿಪಡಿಸುವುದು ವ್ಯವಹಾರವನ್ನು ಸುಲಭಗೊಳಿಸಲು ಸಹಕಾರಿಯಾಗುತ್ತದೆ, ಪ್ರಸ್ತುತ ಕೇಂದ್ರ ಸರ್ಕಾರವು ನಿರಂತರವಾಗಿ ಈ ಅಂಶವನ್ನು ಒತ್ತಿಹೇಳುತ್ತದೆ.

ಆಂಧ್ರಪ್ರದೇಶದ ಕುತೂಹಲಕಾರಿ ಪ್ರಕರಣ :

ಕೆಲಸಕ್ಕಾಗಿ ಅಂತರರಾಜ್ಯ ವಲಸೆ ಸಾಂವಿಧಾನಿಕ ಸುರಕ್ಷತೆಗಳನ್ನು ಹೊಂದಿದೆ ಮತ್ತು ಇದು ದೊಡ್ಡ ವಿದ್ಯಮಾನವಲ್ಲವಾದರೂ, ನಿವ್ವಳ ವಲಸೆಯ ಆಂಧ್ರಪ್ರದೇಶದಂತಹ ರಾಜ್ಯಗಳು ಸ್ಥಳೀಯರಿಗೆ ಉದ್ಯೋಗ ರಕ್ಷಣೆಯನ್ನು ಶಾಸನಬದ್ಧವಾಗಿ ಪರಿಗಣಿಸಬೇಕು ಎಂಬುದು ಗೊಂದಲಮಯವಾಗಿದೆ.

ತೆಲಂಗಾಣವು ಇದೇ ರೀತಿಯ ಶಾಸನದೊಂದಿಗೆ ಪರಸ್ಪರ ವಿನಿಮಯ ಮಾಡಿಕೊಳ್ಳುತ್ತಿರುವಾಗ, ಆಂಧ್ರಪ್ರದೇಶವೇ ಹೆಚ್ಚು ತೊಂದರೆ ಅನುಭವಿಸುತ್ತದೆ (ಏಕೆಂದರೆ ಹೈದರಾಬಾದ್‌ನ ಆರ್ಥಿಕ ಉತ್ಕರ್ಷಕ್ಕೆ ಪ್ರವೇಶ ಕಡಿಮೆಯಾಗಿದೆ). ಹೊಸದಾಗಿ ನಿರ್ಮಾಣಗೊಂಡ ಆಂಧ್ರಪ್ರದೇಶವನ್ನು ಒಳಗೊಂಡಿರುವ ಜಿಲ್ಲೆಗಳ ನಗರ ಪ್ರದೇಶಗಳಲ್ಲಿನ ಆರ್ಥಿಕ ವಲಸಿಗರು ಹೆಚ್ಚಾಗಿ ಅದೇ ಜಿಲ್ಲೆಗಳಿಂದ ಬಂದವರು (ಹತ್ತಿರದ ಪಟ್ಟಣ ಅಥವಾ ಹಳ್ಳಿಯಿಂದ ಹುಟ್ಟಿಕೊಂಡಿದ್ದಾರೆ) ಮತ್ತು ನಗರ ಕಾರ್ಮಿಕರ ಒಂದು ಸಣ್ಣ ಪ್ರಮಾಣವು ಹೊರಗಿನಿಂದ ಬಂದಿದೆ ಎಂದು ಜನಗಣತಿಯ ಅಂಕಿ ಅಂಶಗಳು ಸ್ಪಷ್ಟವಾಗಿ ತೋರಿಸುತ್ತವೆ.

ಅಂತಹ ಸನ್ನಿವೇಶದಲ್ಲಿ, ಸ್ಥಳೀಯತೆಯ ಶಾಸನವು ವಲಸೆಗೆ ನಿರ್ಬಂಧವಾಗುವುದು ಅಸಂಭವ. ಆದರೆ ಅದು ಅದರ ಅವಶ್ಯಕತೆಯ ಪ್ರಶ್ನೆಯನ್ನು ಮೊದಲಿಗೆ ಕೇಳುತ್ತದೆ. ಆಂಧ್ರಪ್ರದೇಶವು ಅಪಾಯಕಾರಿ ಪೂರ್ವನಿದರ್ಶನವನ್ನು ರೂಪಿಸಿದೆ, ಅದನ್ನು ಇತರ ರಾಜ್ಯಗಳನ್ನು ಅನುಸರಿಸಿದರೆ, ಈ ಸಾಮೂಹಿಕ ನಡೆ ಸಮಾಜದ ಮೇಲೆ ದುಷ್ಪರಿಣಾಮ ಬೀರುತ್ತದೆ.

ಆದ್ದರಿಂದ, ಸ್ಥಳೀಯ ರಕ್ಷಣೆ ಕರೆಗಳು ಮತ್ತು ಅದಕ್ಕೆ ಸಂಬಂಧಿತ ಟೀಕೆಗಳು ಭಾರತದಲ್ಲಿ ಹೊಸತಲ್ಲ ಮತ್ತು ಆರ್ಥಿಕ ಮಂದಗತಿಯ ಅವಧಿಯಲ್ಲಿ ಅವು ಸಹಜವಾಗಿ ಸಂಭವಿಸುತ್ತವೆ. ಆರ್ಥಿಕ ಕುಸಿತದ ಹಿನ್ನೆಲೆಯಲ್ಲಿ ಈ ಸ್ಥಳೀಯ ಹೋರಾಟದ ಕರೆಗಳನ್ನು ಸಹ ನೋಡಬೇಕು. ಸ್ಥಳೀಯರ ನಿರುದ್ಯೋಗ ಸಮಸ್ಯೆಯಿಂದ ಹೊರಬರಲು ಉತ್ತಮ ಮಾರ್ಗವೆಂದರೆ ಆರ್ಥಿಕತೆಯು ಶೀಘ್ರವಾಗಿ ಮತ್ತೆ ಚೇತರಿಕೆ ಹಾದಿಯಲ್ಲಿದೆ ಎಂದು ಖಚಿತಪಡಿಸಿಕೊಳ್ಳುವುದು.

2017ರ ಆರ್ಥಿಕ ಸಮೀಕ್ಷೆಯು ಭಾರತದಲ್ಲಿ ಅಂತರರಾಜ್ಯ ವಲಸೆ ದರಗಳು ವೇಗವಾಗಿ ಹೆಚ್ಚುತ್ತಿವೆ ಎಂದು ಉತ್ಸಾಹದಿಂದ ವಾದಿಸಲು ಪ್ರಯತ್ನಿಸಿದ್ದವು. ಹಾಗಿದ್ದರೂ, (ಆಯಿನಪ್ಪಟಿಕಿ,) ಭಾರತವು ಸಮಗ್ರ ಕಾರ್ಮಿಕ ಮಾರುಕಟ್ಟೆಯಿಂದ ದೂರವಿದೆ, ಮತ್ತು ಮಧ್ಯಪ್ರದೇಶ, ಗುಜರಾತ್‌ನ ಮುಖ್ಯಮಂತ್ರಿಗಳು ಮತ್ತು ಶಿವಸೇನೆ ನಾಯಕರಂತಹ ರಾಜಕಾರಣಿಗಳು ಸ್ಥಳೀಯರ-ಉದ್ಯೋಗದ ಸಮಸ್ಯೆಯನ್ನು ವಲಸಿಗರಿಗೆ ಬ್ರೇಕ್‌ ಹಾಕುವುದರೊಂದಿಗೆ ಬಗೆಹರಿಸುವ ಭರವಸೆಯನ್ನು ಚುನಾವಣಾ ಪ್ರಚಾರದ ಅಸ್ತ್ರವನ್ನಾಗಿ ಬಳಸಿಕೊಳ್ಳುತ್ತಾರೆ. ಆದರೆ ವಾಸ್ತವವೆಂದರೆ, ಆಂತರಿಕ ವಲಸೆಯಿಂದ ಭಾರತವು ಹೆಚ್ಚಿನ ಲಾಭವನ್ನು ಪಡೆಯುತ್ತದೆ.

ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿನ ನಿರ್ಮಾಣ ಕಾಮಗಾರಿಗಳು ಮಧ್ಯಪ್ರದೇಶದವರನ್ನು ಒಳಗೊಂಡಂತೆ ವಲಸೆ ಕಾರ್ಮಿಕರನ್ನು ಆಕರ್ಷಿಸುತ್ತದೆ, ಏಕೆಂದರೆ ಸ್ಥಳೀಯರು ಈ ಉದ್ಯೋಗಗಳನ್ನು ಬಯಸುವುದಿಲ್ಲ. ಪಂಜಾಬ್ ಮತ್ತು ಹರಿಯಾಣದಲ್ಲಿ ಕೃಷಿ ಕ್ಷೇತ್ರ ವಲಸೆ ಕಾರ್ಮಿಕರನ್ನು ಆಕರ್ಷಿಸುತ್ತದೆ. ಎಲ್ಲಾ ಪ್ರಮುಖ ನಗರ ಕೇಂದ್ರಗಳಲ್ಲಿನ ದೇಶೀಯ ಸೇವೆಗಳು ವಲಸೆ ಕಾರ್ಮಿಕರಿಲ್ಲದಿದ್ದರೆ ತೀವ್ರವಾಗಿ ಪರಿಣಾಮ ಎದುರಿಸುತ್ತವೆ.

ಯಾವುದೇ ಪ್ರಮುಖ ದೇಶದಲ್ಲಿನ ಯಾವುದೇ ಯಶಸ್ವಿ ಅಭಿವೃದ್ಧಿ ಮತ್ತು ಬೆಳವಣಿಗೆಯ ಪ್ರಸಂಗದ ತ್ವರಿತ ಅಧ್ಯಯನವು ಈ ಸಕಾರಾತ್ಮಕ ಆರ್ಥಿಕ ಅನುಭವಗಳ ಜೊತೆಗೆ ಹೆಚ್ಚಿನ ಆಂತರಿಕ ವಲಸೆಯನ್ನು ತೋರಿಸುತ್ತದೆ. ಕಾರಣಗಳು ಸರಳವಾಗಿದೆ. ಹೆಚ್ಚಿನ ವಲಸೆ ದರಗಳು ಎಂದರೆ ಕಾರ್ಮಿಕ ಮಾರುಕಟ್ಟೆಯು ಕಾರ್ಮಿಕರನ್ನು ಉದ್ಯೋಗಗಳಿಗೆ ಸಮರ್ಥವಾಗಿ ಉದ್ಯೋಗ ಒದಗಿಸುತ್ತಿದೆ ಎಂಬುದು.

---------- Forwarded message ---------
From: vinayaka kodsara <inchara1987@gmail.com>
Date: Tue, Dec 17, 2019, 08:14
Subject: Re: Please Translate ASAP
To: Ravi S <ravi.s@etvbharat.com>, <englishdesk@etvbharat.com>

On Mon, Dec 16, 2019 at 7:53 PM Ravi S <ravi.s@etvbharat.com> wrote:
Dear Vinayak,
Please translate this copy ASAP. send one copy to me & oneCC to englishdesk@etvbharat     

--
-vinayaka kodsara
9964071322
www.aksharavihaara.wordpress.com
Last Updated : Dec 17, 2019, 7:17 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.