ETV Bharat / bharat

ಏನೂ ಆಗಿಲ್ಲ, ಆಗುವುದಿಲ್ಲ, ಎಲ್ಲವನ್ನೂ ಎದುರಿಸುತ್ತೇನೆ: ಡಿಕೆಶಿ ಆತ್ಮವಿಶ್ವಾಸ

ಕಾನೂನಿಗೆ ತಲೆ ಬಾಗಲಿದ್ದು, ಯಾವುದೇ ವಿಚಾರಣೆಯನ್ನು ಧೈರ್ಯದಿಂದಲೇ ಎದುರಿಸುತ್ತೇನೆ ಎಂದು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಡಿ.ಕೆ.ಶಿವಕುಮಾರ್
author img

By

Published : Aug 31, 2019, 11:33 AM IST

Updated : Aug 31, 2019, 12:03 PM IST

ನವದೆಹಲಿ: ಇಡಿ ಸಮನ್ಸ್​ಗೆ ಹೆದುರುವುದಿಲ್ಲ, ಏನೂ ಆಗಿಲ್ಲ, ಆಗುವುದಿಲ್ಲ. ಎಲ್ಲವನ್ನೂ ಎದುರಿಸುತ್ತೇನೆ ಎಂದು ಮಾಜಿ ಸಚಿವ ಡಿಕೆ ಶಿವಕುಮಾರ್ ಹೇಳಿದ್ದಾರೆ.

ಡಿ.ಕೆ.ಶಿವಕುಮಾರ್, ಮಾಜಿ ಸಚಿವ

ಅಕ್ರಮ ಹಣ ವರ್ಗಾವಣೆ ಆರೋಪ ಎದುರಿಸುತ್ತಿರುವ ಕಾಂಗ್ರೆಸ್​ ನಾಯಕ ಡಿಕೆ ಶಿವಕುಮಾರ್​, ನಿನ್ನೆಯಿಂದ ಇಡಿ ಅಧಿಕಾರಿಗಳ ವಿಚಾರಣೆ ಎದುರಿಸುತ್ತಿದ್ದಾರೆ.

ನಿನ್ನೆ 6 ಗಂಟೆಗಳ ಕಾಲ ಮಾಜಿ ಸಚಿವ ಡಿಕೆಶಿ ಅವರನ್ನ ಇಡಿ ಅಧಿಕಾರಿಗಳು ವಿಚಾರಣೆ ನಡೆಸಿದ್ದರು. ಇಂದು 11 ಗಂಟೆಗೆ ವಿಚಾರಣೆಗೆ ಹಾಜರಾಗುವಂತೆ ಮತ್ತೊಂದು ಸಮನ್ಸ್​​ ಜಾರಿ ಮಾಡಲಾಗಿತ್ತು.

ಇಡಿ ವಿಚಾರಣೆಗೆ ಹಾಜರಾಗುವ ಮುನ್ನ ಮಾತನಾಡಿದ ಅವರು, ತಾವು ಕಾನೂನಿಗೆ ತಲೆ ಬಾಗಲಿದ್ದು, ಯಾವುದೇ ವಿಚಾರಣೆಯನ್ನು ಧೈರ್ಯದಿಂದಲೇ ಎದುರಿಸುತ್ತೇನೆ. ಹೆದುರುವ ಪ್ರಶ್ನೆಯೇ ಇಲ್ಲ. ನಾನೇನು ಕಳ್ಳತನ ಮಾಡಿಲ್ಲ. ಏನೂ ನಡೆದೂ ಇಲ್ಲ ಎಂದು ತಮ್ಮ ಎಂದಿನ ಸ್ಟೈಲ್​​ನಲ್ಲೇ ಡಿಕೆಶಿ ಮಾಧ್ಯಮದವರಿಗೆ ಖಡಕ್​ ಉತ್ತರ ನೀಡಿ, ತೆರಳಿದರು.

Last Updated : Aug 31, 2019, 12:03 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.