ETV Bharat / bharat

ಸ್ಥಳೀಯ ವೆಂಟಿಲೇಟರ್​ ಧಮನ್ -1 ಸಾಮರ್ಥ್ಯದ ಕುರಿತು ಸ್ಪಷ್ಟನೆ ನೀಡಿದ ವೈದ್ಯಾಧಿಕಾರಿ

author img

By

Published : May 19, 2020, 3:16 PM IST

ಕೊರೊನಾ ವೈರಸ್ ರೋಗಿಗಳ ಚಿಕಿತ್ಸೆಯಲ್ಲಿ ಸ್ಥಳೀಯ ವೆಂಟಿಲೇಟರ್ ಧಮನ್ -1 ಮತ್ತು ಉನ್ನತ ಮಟ್ಟದ ಆಧುನಿಕ ವೆಂಟಿಲೇಟರ್ ಎರಡೂ ಉಪಯುಕ್ತವಾಗಿವೆ ಎಂದು ಡಾ.ಎಂ.ಎಂ.ಪ್ರಭಾಕರ್ ಸ್ಪಷ್ಟನೆ ನೀಡಿದ್ದಾರೆ.

dhaman 1
dhaman 1

ಅಹಮದಾಬಾದ್ (ಗುಜರಾತ್): ಕೊರೊನಾ ಸೋಂಕಿತರ ಚಿಕಿತ್ಸೆಗಾಗಿ ರಾಜ್‌ಕೋಟ್​ನ ಕಂಪನಿಯೊಂದು ಧಮನ್ -1 ಎಂಬ ಸ್ಥಳೀಯ ವೆಂಟಿಲೇಟರ್ ತಯಾರಿಸಿತ್ತು. ಮುಖ್ಯಮಂತ್ರಿ ವಿಜಯ್ ರೂಪಾನಿ ಮತ್ತು ಉಪಮುಖ್ಯಮಂತ್ರಿ ನಿತಿನ್ ಪಟೇಲ್ ಈ ಕುರಿತು ಮಾಹಿತಿ ನೀಡಿದ್ದರು.

ಆದರೆ, ಇತ್ತೀಚೆಗೆ ವೆಂಟಿಲೇಟರ್​ನ ಸಾಮರ್ಥ್ಯದ ಕುರಿತು ವಿವಾದವೊಂದು ಭುಗಿಲೆದ್ದಿತು. ಇದಕ್ಕೆ ಸಿವಿಲ್ ಆಸ್ಪತ್ರೆ ಅಧೀಕ್ಷಕ ಡಾ.ಎಂ.ಎಂ.ಪ್ರಭಾಕರ್ ಸ್ಪಷ್ಟನೆ ನೀಡಿದ್ದು, ಕೊರೊನಾ ವೈರಸ್ ರೋಗಿಗಳ ಚಿಕಿತ್ಸೆಯಲ್ಲಿ ಸ್ಥಳೀಯ ವೆಂಟಿಲೇಟರ್ ಧಮನ್ -1 ಮತ್ತು ಉನ್ನತ ಮಟ್ಟದ ಆಧುನಿಕ ವೆಂಟಿಲೇಟರ್ ಎರಡೂ ಉಪಯುಕ್ತವಾಗಿವೆ ಎಂದಿದ್ದಾರೆ.

ಸೋಂಕಿತರ ಚಿಕಿತ್ಸೆಯ ಆರಂಭಿಕ ಹಂತದಲ್ಲಿ ಧಮನ್ -1 ಉಪಯುಕ್ತವಾಗಿದೆ. ಆದರೆ ರೋಗಿಯ ಸ್ಥಿತಿ ನಿರ್ಣಾಯಕವಾದಾಗ ಮಾತ್ರ ಉನ್ನತ ಮಟ್ಟದ ವೆಂಟಿಲೇಟರ್ ಅಗತ್ಯವಿರುತ್ತದೆ ಎಂದು ಡಾ. ಎಂ. ಪ್ರಭಾಕರ್ ಹೇಳಿದರು.

ವೆಂಟಿಲೇಟರ್​ನ ಕೊರತೆ ಉಂಟಾಗಿದ್ದ ಸಂದರ್ಭದಲ್ಲಿ ರಾಜ್‌ಕೋಟ್‌ನ ಖಾಸಗಿ ಕಂಪನಿಯು ಕೇವಲ ಹತ್ತು ದಿನಗಳಲ್ಲಿ ಈ ಸ್ಥಳೀಯ ವೆಂಟಿಲೇಟರ್ ತಯಾರಿಸಿದ್ದು, ಅದು ತುಂಬಾ ಉಪಯುಕ್ತವಾಗಿದೆ. ಅಹಮದಾಬಾದ್ ಸಿವಿಲ್ ಆಸ್ಪತ್ರೆಯಲ್ಲಿ ಧಮನ್ -1 ವೆಂಟಿಲೇಟರ್‌ಗಳನ್ನು ಬಳಸಲಾಗುತ್ತಿದೆ ಎಂದು ಪ್ರಭಾಕರ್ ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.