ನವದೆಹಲಿ: ಕೊರೊನಾ ವೈರಸ್ ಸಾಂಕ್ರಾಮಿಕ ರೋಗದಿಂದಾಗಿ ನ್ಯಾಯಾಲಯಗಳಲ್ಲಿ ಕೆಲಸ ಸ್ಥಗಿತಗೊಳಿಸುವುದನ್ನು ಗಮನಿಸಿದ ದೆಹಲಿ ನ್ಯಾಯಾಲಯ, ಪೌರತ್ವ ಕಾಯ್ದೆ ವಿರುದ್ಧ ಈಶಾನ್ಯ ದೆಹಲಿಯಲ್ಲಿ ಇತ್ತೀಚೆಗೆ ನಡೆದ ಕೋಮು ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಬಾಲಾಪರಾಧಿಗೆ ಜಾಮೀನು ನೀಡಿದೆ.
ಮೆಟ್ರೋಪಾಲಿಟನ್ ನ್ಯಾಯಾಧೀಶ ರಾಕೇಶ್ ಕುಮಾರ್ ರಾಂಪುರಿ ಅವರು, ಬಾಲಾಪರಾಧಿಗಳಿಗೆ ಜಾಮೀನು ನೀಡಿದ್ದಾರೆ. 10,000 ರೂಪಾಯಿ ಬಾಂಡ್ ನೀಡುವಂತೆ ತಿಳಿಸಿ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
ಆರೋಪಿ ಪರವಾಗಿ ಹಾಜರಾದ ವಕೀಲ ಅಬ್ದುಲ್ ಗಫರ್, ಬಂಧನದ ಸಮಯದಲ್ಲಿ ಆತನಿಗೆ 14 ವರ್ಷ ವಯಸ್ಸಾಗಿತ್ತು ಮತ್ತು ಈ ಪ್ರಕರಣದಲ್ಲಿ ಸುಳ್ಳು ಆರೋಪ ಹೊರಿಸಲಾಗಿದೆ ಎಂದು ವಾದಿಸಿದ್ದರು.
ಫೆಬ್ರವರಿ 24 ರಂದು ಈಶಾನ್ಯ ದೆಹಲಿಯಲ್ಲಿ ಕೋಮು ಸಂಘರ್ಷ ಭುಗಿಲೆದ್ದಿತ್ತು. ಪೌರತ್ವ ತಿದ್ದುಪಡಿ ಕಾನೂನು ಬೆಂಬಲಿಗರು ಮತ್ತು ಪ್ರತಿಭಟನಾಕಾರರ ನಡುವೆ ನಡೆದ ಹಿಂಸಾಚಾರದಲ್ಲಿ 44 ಜನರು ಸಾವನ್ನಪ್ಪಿದರು ಮತ್ತು ಸುಮಾರು 200 ಜನರು ಗಾಯಗೊಂಡಿದ್ದರು.