ನವದೆಹಲಿ: ಈಗ ಎಲ್ಲರ ಚಿತ್ತ ರಾಷ್ಟ್ರ ರಾಜಧಾನಿ ನವದೆಹಲಿ ವಿಧಾನಸಭಾ ಚುನಾವಣೆಯತ್ತ ಸಾಗಿದೆ. ಆಮ್ ಆದ್ಮಿ ಪಕ್ಷದ ಅಧ್ಯಕ್ಷ ಮತ್ತು ನವದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ವಿರುದ್ಧ ಬಿಜಿಪಿ ಹೊಸ ತಂತ್ರ ರಚಿಸಿದೆ.
ಹೌದು, ನವದೆಹಲಿ ವಿಧಾನಸಭಾ ಕ್ಷೇತ್ರದ ಚುನಾವಣೆ ಸಂಬಂಧ ಭಾರತೀಯ ಜನತಾ ಪಕ್ಷ ಒಂದು ಹಂತದ ನಿರ್ಣಯಕ್ಕೆ ಬಂದಿದ್ದು, ಅರವಿಂದ ಕೇಜ್ರಿವಾಲ್ ವಿರುದ್ಧ ಹೊಸಮುಖ ಸುನೀಲ್ ಯಾದವ್ ಅವರನ್ನು ಕಣಕ್ಕಿಳಿಸಲಿದೆ.
2015ರಲ್ಲಿ ನಡೆದ ವಿಧಾನಸಭಾ ಚುನವಾಣೆಯಲ್ಲಿ ಕೇಜ್ರಿವಾಲ್ ವಿರುದ್ಧ ಬಿಜೆಪಿ ನೂಪುರ್ ಶರ್ಮಾರನ್ನು ಕಣಕ್ಕಿಳಿಸಿತ್ತು. ಈ ಸಂದರ್ಭದಲ್ಲಿ ಬಿಜೆಪಿ ಅಭ್ಯರ್ಥಿ ವಿರುದ್ಧ ಕೇಜ್ರಿವಾಲ್ ಶೇ.64 ಮತಗಳಿಂದ ಗೆಲುವು ಸಾಧಿಸಿದ್ದರು.
ಸುನೀಲ್ ಯಾದವ್ ಬಗ್ಗೆ ಒಂದಿಷ್ಟು..
ಸುನೀಲ್ ಯಾದವ್ ವೃತ್ತಿಯಲ್ಲಿ ವಕೀಲರು ಮತ್ತು ಸಾಮಾಜಿಕ ಕಾರ್ಯಕರ್ತರು. ಇವರು 2014ರಲ್ಲಿ ಬಿಜೆಪಿ ಯುವ ಮೊರ್ಚಾ ‘ಮಂಡಲ ಅಧ್ಯಕ್ಷ’ರಾಗಿ ರಾಜಕೀಯಕ್ಕೆ ಎಂಟ್ರಿ ಕೊಟ್ಟರು. ಬಳಿಕ ಜಿಲ್ಲಾ ಅಧ್ಯಕ್ಷರಾದರು. ಅದಾದ ಬಳಿಕ ದೆಹಲಿಯ ಯುವ ಮೋರ್ಚಾದ ಜನರಲ್ ಕಾರ್ಯದರ್ಶಿ ಮತ್ತು ಕಾರ್ಯದರ್ಶಿಯಾದರು. ಈಗ ಯಾದವ್ ಬಿಜೆಪಿ ಯುವ ಮೋರ್ಚಾದ ರಾಜ್ಯಾಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಇನ್ನು ಸುನೀಲ್ ಯಾದವ್ಗೆ ಟ್ವಿಟ್ಟರ್ನಲ್ಲಿ 17 ಸಾವಿರಕ್ಕೂ ಹೆಚ್ಚು ಜನರು ಫಾಲೋ ಮಾಡ್ತಿದ್ದಾರೆ. ಅದರಂತೆ ಇವು ಫೇಸ್ಬುಕ್ ಪೇಜ್‌ನಲ್ಲಿ ಸುಮಾರು ಲಕ್ಷಕ್ಕೂ ಹೆಚ್ಚು ಜನ ಲೈಕ್ (ಸಬ್ಸ್ಕ್ರೈಬ್) ಮಾಡಿದ್ದಾರೆ. ಎಲೆಮರೆ ಕಾಯಿಯಾಗಿರುವ ಸುನೀಲ್ ಯಾದವ್ ಮೇಲೆ ಬಿಜೆಪಿ ಇಟ್ಟಿರುವ ನಂಬಿಕೆ ನಿಜವಾಗುತ್ತಾ ಎಂಬುದು ಚುನಾವಣೆ ಬಳಿಕವೇ ಗೊತ್ತಾಗಲಿದೆ.