ETV Bharat / bharat

ಜುಲೈ 17-18ರಂದು ಲಡಾಖ್​ಗೆ ಭೇಟಿ ನೀಡಿ, ಭದ್ರತಾ ಪರಾಮರ್ಶೆ ಮಾಡಲಿರುವ ರಾಜನಾಥ್ - ಲಡಾಖ್​

ಪ್ರಧಾನಿ ಮೋದಿ ಭೇಟಿ ನೀಡಿದ ಎರಡು ವಾರಗಳ ಬಳಿಕ ರಾಜನಾಥ್​ ಸಿಂಗ್​ ಪ್ರವಾಸ ಕೈಗೊಂಡಿದ್ದು, ಸೈನಿಕರಿಗೆ ಮತ್ತಷ್ಟು ಧೈರ್ಯ ತುಂಬಲಿದ್ದಾರೆ.

Defence minister
Defence minister
author img

By

Published : Jul 15, 2020, 3:26 PM IST

ನವದೆಹಲಿ: ಲಡಾಖ್​ನಲ್ಲಿ ಭಾರತ-ಚೀನಾ ನಡುವೆ ಬಡಿದಾಟ ನಡೆದ ಬಳಿಕ ರಕ್ಷಣಾ ಸಚಿವರು ಅಲ್ಲಿಗೆ ಭೇಟಿ ನೀಡಲಿದ್ದಾರೆ ಎಂಬ ಸುದ್ದಿ ಹರಡಿತ್ತು. ಆದರೆ ಪ್ರಧಾನಿ ನರೇಂದ್ರ ಮೋದಿ ಅಲ್ಲಿಗೆ ತೆರಳಿ, ಸೈನಿಕರನ್ನುದ್ದೇಶಿಸಿ ಭಾಷಣ ಮಾಡಿದ್ದರು. ಇದೀಗ ರಾಜನಾಥ್​ ಸಿಂಗ್​ ಇಲ್ಲಿಗೆ ಭೇಟಿ ನೀಡಲಿದ್ದು, ಭೂಸೇನಾ ಮುಖ್ಯಸ್ಥ ಮನೋಜ್​ ಮುಕುಂದ್​ ನರವಾಣೆ​ ಸಾಥ್​ ನೀಡಲಿದ್ದಾರೆ.

ಈ ವೇಳೆ ಚೀನಾದೊಂದಿಗೆ ನಡೆದ ಹಿಂಸಾತ್ಮಕ ಘರ್ಷಣೆಯಲ್ಲಿ ಗಾಯಗೊಂಡ ಭಾರತೀಯ ಸೈನಿಕರ ಯೋಗಕ್ಷೇಮವನ್ನು ಸಚಿವರು ವಿಚಾರಿಸಲಿದ್ದಾರೆ.

ಪ್ರಧಾನಿ ಮೋದಿ ಭೇಟಿ ನೀಡಿದ ಎರಡು ವಾರಗಳ ಬಳಿಕ ರಾಜನಾಥ್​ ಸಿಂಗ್​ ಪ್ರವಾಸ ಕೈಗೊಂಡಿದ್ದು, ಸೈನಿಕರಿಗೆ ಮತ್ತಷ್ಟು ಧೈರ್ಯ ತುಂಬಲಿದ್ದಾರೆ. ಗಡಿ ವಿಷಯವಾಗಿ ಇಂದು ಕೂಡ ಉಭಯ ದೇಶದ ಮಿಲಿಟರಿ ಅಧಿಕಾರಿಗಳ ಮಧ್ಯೆ ಮಹತ್ವದ ಸಭೆ ನಡೆದಿದ್ದು, ಶಾಂತಿ ಕಾಪಾಡಲು ಹೆಚ್ಚಿನ ಆದ್ಯತೆ ನೀಡುವುದಾಗಿ ತಿಳಿಸಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.