ETV Bharat / bharat

ರಾಜ್ಯಸಭೆಯಲ್ಲಿ ನಡೆದಿರುವುದು ದುಃಖಕರ, ದುರದೃಷ್ಟಕರ ಮತ್ತು ನಾಚಿಕೆಗೇಡಿನ ಸಂಗತಿ- ರಾಜನಾಥ್ ಸಿಂಗ್‌

author img

By

Published : Sep 20, 2020, 8:10 PM IST

ನನಗೆ ತಿಳಿದ ಮಟ್ಟಿಗೆ ಇದು ಲೋಕಸಭೆ ಅಥವಾ ರಾಜ್ಯಸಭೆಯ ಇತಿಹಾಸದಲ್ಲಿ ಈ ರೀತಿಯ ಘಟನೆ ಎಂದಿಗೂ ಸಂಭವಿಸಿಲ್ಲ. ವದಂತಿಗಳ ಆಧಾರದ ಮೇಲೆ ರೈತರನ್ನು ದಾರಿ ತಪ್ಪಿಸುವ ಪ್ರಯತ್ನ ನಡೆಯುತ್ತಿವೆ..

rajnath singh
ರಾಜನಾಥ್ ಸಿಂಗ್

ನವದೆಹಲಿ : ರಾಜ್ಯಸಭೆಯಲ್ಲಿ ಕೃಷಿ ಸಂಬಂಧಿ ಮಸೂದೆಗಳ ಮಂಡನೆ ವೇಳೆ ನಡೆದಿರುವ ಘಟನೆ ದುಃಖಕರ, ದುರದೃಷ್ಟಕರ ಮತ್ತು ನಾಚಿಕೆಗೇಡಿನ ಸಂಗತಿ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕೃಷಿ ಸಂಬಂಧಿ ಮಸೂದೆಗೆ ಕುರಿತು ಆರು ಮಂದಿ ಕೇಂದ್ರ ಸಚಿವರು ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸದನದಲ್ಲಿ ಚರ್ಚೆ ಮಾಡುವುದು ಆಡಳಿತ ಪಕ್ಷದ ಜವಾಬ್ದಾರಿಯಾಗಿದೆ. ಇದರಲ್ಲಿ ಪ್ರತಿಪಕ್ಷಗಳು ತಮ್ಮ ಜವಾಬ್ದಾರಿ ನಿರ್ವಹಿಸಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.

ಇದರ ಜೊತೆಗೆ ನನಗೆ ತಿಳಿದ ಮಟ್ಟಿಗೆ ಇದು ಲೋಕಸಭೆ ಅಥವಾ ರಾಜ್ಯಸಭೆಯ ಇತಿಹಾಸದಲ್ಲಿ ಈ ರೀತಿಯ ಘಟನೆ ಎಂದಿಗೂ ಸಂಭವಿಸಿಲ್ಲ. ವದಂತಿಗಳ ಆಧಾರದ ಮೇಲೆ ರೈತರನ್ನು ದಾರಿ ತಪ್ಪಿಸುವ ಪ್ರಯತ್ನ ನಡೆಯುತ್ತಿವೆ ಎಂದು ರಾಜನಾಥ್ ಸಿಂಗ್ ಅಸಮಾಧಾನ ಹೊರ ಹಾಕಿದ್ದಾರೆ.

ಈಗಾಗಲೇ ಅಧ್ಯಕ್ಷರಿಗೆ ನೋಟಿಸ್ ಜಾರಿ ಮಾಡಲಾಗಿದ್ದು, ಅವರು ಕ್ರಮ ಕೈಗೊಳ್ಳುತ್ತಾರೆ ಎಂದಿರುವ ರಾಜನಾಥ್ ಸಿಂಗ್, ಈಗ ಮಂಡಿಸಿರುವ ಕಾಯ್ದೆಗಳಿಂದ ರೈತರಿಗೆ ಒಳ್ಳೆಯದಾಗುತ್ತದೆ ಎಂದು ಸ್ಪಷ್ಟನೆ ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.