ETV Bharat / bharat

ನಟಿ ದೀಪಿಕಾ ಹೆಸರಲ್ಲಿ ನರೇಗಾ ಜಾಬ್ ಕಾರ್ಡ್​​​​: ಪಂಚಾಯ್ತಿ ಸೆಕ್ರೆಟರಿ ಸೇರಿ ಅನೇಕರು ಸಸ್ಪೆಂಡ್​!

author img

By

Published : Oct 17, 2020, 5:49 PM IST

ಮಧ್ಯಪ್ರದೇಶ ಸರ್ಕಾರದ ನರೇಗಾ ಯೋಜನೆಯಲ್ಲಿ ನಟಿ ದೀಪಿಕಾ ಫೋಟೋ ಇರುವ ಜಾಬ್​ ಕಾರ್ಡ್​​ ಪ್ರಕಟಗೊಂಡಿದ್ದು, ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಸೆಕ್ರೆಟರಿ ಸೇರಿ ಕೆಲವರ ತಲೆದಂಡವಾಗಿದೆ.

Deepika Padukone Fake Rural Job Cards
Deepika Padukone Fake Rural Job Cards

ಕಾರ್ಗೂನ್​​(ಮಧ್ಯಪ್ರದೇಶ): ಬಾಲಿವುಡ್​​ ಸ್ಟಾರ್​ ನಟಿ ದೀಪಿಕಾ ಪಡುಕೊಣೆ ಫೋಟೋ ಬಳಕೆ ಮಾಡಿಕೊಂಡು ನರೇಗಾ ಜಾಬ್​ ಕಾರ್ಡ್​​​ ರಚನೆ ಮಾಡಲಾಗಿದ್ದು, ಇದೀಗ ಜಿಲ್ಲಾ ಪಂಚಾಯ್ತಿ ಸೆಕ್ರೆಟರಿ ಸೇರಿ ಅನೇಕರ ಅಮಾನತುಗೊಳಿಸಲಾಗಿದೆ.

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ಮನ್ರೇಗಾ) ಯೋಜನೆಯಡಿ ಮಧ್ಯಪ್ರದೇಶದ ಪಿಪಾರ್ಖೆಡಾ ನಾಕಾ ಪಂಚಾಯ್ತಿಯಲ್ಲಿ ಬಾಲಿವುಡ್ ನಟಿ ಫೋಟೋ ಬಳಕೆ ಮಾಡಿ ನಕಲಿ ಜಾಬ್​ ಕಾರ್ಡ್​ ರಚನೆ ಮಾಡಿದ್ದರು. ಈ ಅಕ್ರಮ ಹೊರಬರುತ್ತಿದ್ದಂತೆ ಇದೀಗ ಪಂಚಾಯತ್ ಅಧ್ಯಕ್ಷ ,ಕಾರ್ಯದರ್ಶಿ ಮತ್ತು ಸೆಕ್ರೆಟರಿ ಅಮಾನತು ಮಾಡಲಾಗಿದೆ.

ಗ್ರಾಮದಲ್ಲಿ 10ಕ್ಕೂ ಹೆಚ್ಚು ಜನರ ಹೆಸರಿಗೆ ದೀಪಿಕಾ ಪಡುಕೊಣೆ ಫೋಟೋ ಬಳಕೆ ಮಾಡಿಕೊಂಡು ಜಾಬ್​ ಕಾರ್ಡ್​​ ರಚನೆ ಮಾಡಿದ್ದು, ಈ ಮೂಲಕ ಹಣ ತೆಗೆದುಕೊಳ್ಳಲಾಗುತ್ತಿತ್ತು ಎಂದು ತಿಳಿದು ಬಂದಿದೆ.

ಮೋನು ದುಬೆ ಎಂಬ ವ್ಯಕ್ತಿ ಹೆಸರಿನ ಜಾಬ್​​ ಕಾರ್ಡ್​​ನಲ್ಲಿ ಬಾಲಿವುಡ್​ ನಟಿ ದೀಪಿಕಾ ಪಡುಕೋಣೆ ಅವರ ಭಾವಚಿತ್ರವಿದೆ. ಜತೆಗೆ ಮೋನು ದುಬೆ ಅಕೌಂಟ್​​ನಿಂದ 30 ಸಾವಿರೂ ಡ್ರಾ ಮಾಡಲಾಗಿದೆ. ಈ ಪ್ರಕರಣ ಹೊರಬರುತ್ತಿದ್ದಂತೆ ಜಿಲ್ಲಾಧಿಕಾರಿ ತನಿಖೆಗೆ ಆದೇಶ ಹೊರಡಿಸಿದ್ದರು. ಇದೀಗ ಮನ್ರೇಗಾದಲ್ಲಿ ಲಕ್ಷಾಂತರ ರೂ. ಅವ್ಯವಹಾರ ನಡೆದಿರುವುದು ಬೆಳಕಿಗೆ ಬಂದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.