ETV Bharat / bharat

ಮಧ್ಯಪ್ರದೇಶ ಕಾಂಗ್ರೆಸ್​ ಬಂಡಾಯ ಶಾಸಕನ ಮಗಳು ಆತ್ಮಹತ್ಯೆ!

ಮಧ್ಯಪ್ರದೇಶದ ಸರ್ಕಾರದ ವಿರುದ್ಧ ಬಂಡಾಯವೆದ್ದು ಬಿಜೆಪಿ ಸೇರಲು ಮುಂದಾಗಿರುವ ಕಾಂಗ್ರೆಸ್​ ಶಾಸಕ ಸುರೇಶ್​ ಧಾಕಡ್ ಅವರ​ ಮಗಳು ರಾಜಸ್ಥಾನದ ಬರನ್​ ಜಿಲ್ಲೆಯ ತನ್ನ ಗಂಡನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ.

rebel Congress MLA from M.P. hangs self
ಮಧ್ಯಪ್ರದೇಶ ಕಾಂಗ್ರೆಸ್​ ಬಂಡಾಯ ಶಾಸಕನ ಮಗಳು ಆತ್ಮಹತ್ಯೆ
author img

By

Published : Mar 20, 2020, 5:19 PM IST

ಕೋಟಾ (ರಾಜಸ್ಥಾನ): ಮಧ್ಯಪ್ರದೇಶ ಕಾಂಗ್ರೆಸ್​ ಬಂಡಾಯ ಶಾಸಕ ಸುರೇಶ್​ ಧಾಕಡ್​ ಅವರು ಮಗಳು ರಾಜಸ್ಥಾನದ ಬರನ್​ ಜಿಲ್ಲೆಯ ತನ್ನ ಗಂಡನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಈ ಬಗ್ಗೆ ಕೆಲ್ವಾಡ ಪೊಲೀಸ್​ ಠಾಣೆಯ ಅಧಿಕಾರಿ ನಂದ್​ ಸಿಂಗ್ ಪ್ರತಿಕ್ರಿಯಿಸಿದ್ದು, ಮೃತ ಶಾಸಕನ ಮಗಳನ್ನು ಜ್ಯೋತಿ ಎಂದು ಗರುತಿಸಲಾಗಿದೆ. ಬರನ್​ ಜಿಲ್ಲೆಯ ಭಾಸ್ಕೇಡಾ ಗ್ರಾಮದ ಗಂಡನ ಮನೆಯಲ್ಲಿ ಮೃತದೇಹ ಪತ್ತೆಯಾಗಿದೆ. ಕುತ್ತಿಗೆಯಲ್ಲಿ ಹಗ್ಗದಿಂದ ಬಿಗಿದಿರುವ ಗುರುತುಗಳು ಕಂಡು ಬಂದಿವೆ ಎಂದು ತಿಳಿಸಿದ್ದಾರೆ.

ಮೇಲ್ನೋಟಕ್ಕೆ ಆತ್ಮಹತ್ಯೆ ಎಂದು ಕಂಡುಬಂದಿದ್ದು, ಪ್ರಕರಣ ತನಿಖೆ ನಡೆದ ನಂತರ ನಿಜವಾದ ಕಾರಣ ತಿಳಿದು ಬರಲಿದೆ. ಮಹಿಳೆಯ ಸಾವಿನ ಬಗ್ಗೆ ಹೇಳಿಕೆ ನೀಡಲು ಇದುವರೆಗೂ ಯಾರೂ ಮುಂದೆ ಬಂದಿಲ್ಲ. ಮರಣೋತ್ತರ ಪರೀಕ್ಷೆ ನಡೆಯಬೇಕಿದೆ.

ಆತ್ಮಹತ್ಯೆಗೆ ಶರಣಾಗಿರುವ ಮಹಿಳೆಯ ತಂದೆ ಸುರೇಶ್​ ಧಾಕಡ್ ಅವರು ಪೊಹರಿ ಕ್ಷೇತ್ರದ ಶಾಸಕರಾಗಿದ್ದು,​ ಮಧ್ಯಪ್ರದೇಶದ ಕಾಂಗ್ರೆಸ್​ ಸರ್ಕಾರದ ವಿರುದ್ಧ ಬಂಡಾಯವೆದ್ದು ಬಿಜೆಪಿ ಸೇರಲು ಮುಂದಾಗಿರುವವರಲ್ಲಿ ಪ್ರಮುಖರಾಗಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.