ಹೈದರಾಬಾದ್(ತೆಲಂಗಾಣ): ಮಲ ತಂದೆಯೊಬ್ಬ ತನ್ನ ಮಗಳ ನಗ್ನ ಚಿತ್ರಗಳನ್ನು ಲ್ಯಾಪ್ಟಾಪ್ನಲ್ಲಿ ಸಂಗ್ರಹಿಸಿ ಕುಟುಂಬಸ್ಥರ ಕೈಗೆ ಸಿಕ್ಕಿ ಬಿದ್ದಿರುವ ಘಟನೆ ಇಲ್ಲಿನ ನಾಚಾರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ತಂದೆಯ ಲ್ಯಾಪ್ಟಾಪ್ನಲ್ಲಿ ತನ್ನ ನಗ್ನ ಚಿತ್ರಗಳನ್ನು ನೋಡಿದ ಯುವತಿ ಕುಗ್ಗಿ ಹೋಗಿದ್ದಾಳೆ. ಬಳಿಕ ತನ್ನ ತಾಯಿಗೆ ಈ ವಿಷಯದ ಬಗ್ಗೆ ತಿಳಿಸಿದ್ದಾಳೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಮೊದಲ ಹೆಂಡ್ತಿ ಸಾವನ್ನಪ್ಪಿದ ಬಳಿಕ ರಾಜೇಶ್ ಮತ್ತೊಂದು ಮದುವೆ ಮಾಡಿಕೊಂಡಿದ್ದನು. ಎರಡನೇ ಹೆಂಡತಿಯ ಮಗಳ ನಗ್ನ ಫೋಟೋಗಳನ್ನು ತನ್ನ ಲ್ಯಾಪ್ಟಾಪ್ನಲ್ಲಿ ಸಂಗ್ರಹಿಸಿದ್ದಾನೆ. ಯಾವುದೋ ಕಾರಣಕ್ಕೆ ತಂದೆಯ ಲ್ಯಾಪ್ಟಾಪ್ ಬಳಸುವಾಗ ಯುವತಿ ಕಣ್ಣಿಗೆ ಅವಳದ್ದೇ ನಗ್ನ ಚಿತ್ರಗಳು ಬಿದ್ದಿವೆ. ಕೂಡಲೇ ಆಕೆ ತನ್ನ ತಾಯಿಗೆ ಮಾಹಿತಿ ಮುಟ್ಟಿಸಿದಾಗ ಮಲತಂದೆಯ ನೀಚ ಕೃತ್ಯ ಬಯಲಾಗಿದೆ.
ತಾಯಿ ಮತ್ತು ಮಗಳು ದೂರು ನೀಡಿದ್ದು, ದೂರಿನನ್ವಯ ರಾಜೇಶ್ನನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ಕಿರಣ್ ಕುಮಾರ್ ತಿಳಿಸಿದ್ದಾರೆ.