ನವದೆಹಲಿ: ಪೌರತ್ವ (ತಿದ್ದುಪಡಿ) ಕಾಯ್ದೆ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಬಂಧಿತರಾಗಿದ್ದ ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ಇದೀಗ ಜಾಮೀನಿನ ಮೇಲೆ ರಿಲೀಸ್ ಆಗಿದ್ದಾರೆ.
ಕಳೆದ ತಿಂಗಳು ದೆಹಲಿಯ ಜಾಮಾ ಮಸೀದಿ ಆವರಣದಲ್ಲಿ ನಡೆದ ಪ್ರತಿಭಟನೆಯಲ್ಲಿ ಚಂದ್ರಶೇಖರ್ ಆಜಾದ್ ಅವರನ್ನು ದೆಹಲಿ ಪೊಲೀಸರು ಬಂಧಿಸಿದ್ದರು. ಇದಾದ ಬಳಿಕ ಅವರನ್ನು ದೆಹಲಿ ತೀಸ್ ಹಜಾರಿ ಕೋರ್ಟ್ಗೆ ಹಾಜರು ಪಡಿಸಲಾಗಿತ್ತು. ಇದೀಗ ಬಿಡುಗಡೆ ಮಾಡಿರುವ ಕೋರ್ಟ್ ಫೆಬ್ರವರಿ 16ರವರೆಗೆ ಯಾವುದೇ ರೀತಿಯ ಪ್ರತಿಭಟನೆಯಲ್ಲೂ ಭಾಗಿಯಾಗದಂತೆ ಸೂಚನೆ ನೀಡಿದೆ.
![Daryaganj violence case](https://etvbharatimages.akamaized.net/etvbharat/prod-images/dl-ndl-chandrashekharcourt-01-dl10008_15012020153557_1501f_1579082757_41.jpg)
ಕೋರ್ಟ್ನಿಂದ ಪೊಲೀಸರಿಗೆ ತೀವ್ರ ತರಾಟೆ:
ಪೊಲೀಸರಿಂದ ಬಂಧಿತರಾಗಿದ್ದ ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ಅವರ ವಿರುದ್ಧ ಯಾವುದೇ ಸಾಕ್ಷ್ಯಗಳನ್ನು ನೀಡಲು ವಿಫಲವಾದ ದೆಹಲಿ ಪೊಲೀಸರನ್ನು ಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡಿದೆ. ಧಾರ್ಮಿಕ ಕೇಂದ್ರಗಳ ಹೊರಗಡೆ ಸೇರಿದಂತೆ ಜನ ಎಲ್ಲಿಬೇಕಾದರೂ ಶಾಂತಿಯೂತ ಪ್ರತಿಭಟನೆ ಮಾಡಬಹುದು ಎಂದು ಹೇಳಿದೆ.
ಡಿಸೆಂಬರ್ 21ರಂದು ರಾಷ್ಟ್ರೀಯ ಪೌರತ್ವ ಕಾಯ್ದೆ ವಿರುದ್ಧ ನಡೆದ ಪ್ರತಿಭಟನೆಯ ವೇಳೆ ಮಧ್ಯ ದೆಹಲಿಯ ದರಿಯಾಗಂಜ್ ಪ್ರಾಂತ್ಯದಲ್ಲಿ ನಡೆದ ಹಿಂಸಾಚಾರ ಪ್ರಕರಣದಲ್ಲಿ ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ಮತ್ತು ಇತರರನ್ನು ದೆಹಲಿ ಪೊಲೀಸರು ಬಂಧಿಸಿದ್ದರು.