ಸುಮಾರು 22 ಸಾವಿರ ಮಂದಿಯನ್ನ ಭಾಗವಾಗಿಟ್ಟುಕೊಂಡು ಆಸ್ಟ್ರೇಲಿಯಾ ಸರ್ಕಾರದ ಕಾಮನ್ವೆಲ್ತ್ ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರೀಸರ್ಚ್ ಆರ್ಗನೈಜೇಶನ್ ನಡೆಸಿದ ಅಧ್ಯಯನದಲ್ಲಿ ಉತ್ತಮ ಡಯೆಟ್ ಮಾಡಿ ಪ್ರತೀ ವಾರ 1ಕೆಜಿ ತೂಕ ಇಳಿಸಿಕೊಂಡವರ ಸಂಖ್ಯೆ ಹೆಚ್ಚಿದೆ. ಈ ಡಯೆಟ್ ಸುಮಾರು ಮೂರವರೇ ಪಟ್ಟು ತೂಕ ಇಳಿಸಲು ಸಹಕಾರಿಯಾಗಿದೆ. 12 ವಾರಗಳ ಡಯೆಟ್ ಪ್ರೋಗ್ರಾಮ್ ಮಾಡಿದವರು ಉತ್ತಮ ಡಯೆಟ್ ಮೂಲಕ ಸುಲಭವಾಗಿ ತೂಕ ಇಳಿಸಿಕೊಳ್ಳಬಹುದು ಎಂದು ಅಧ್ಯಯನದಲ್ಲಿ ತಿಳಿದು ಬಂದಿದೆ.
ಸಿಎಸ್‌ಐಆರ್‌ಒನ ಸಂಶೋಧನಾ ವಿಜ್ಞಾನಿ ಡಾ. ಗಿಲ್ಲಿ ಹೆನ್ಡ್ರಿ ಈ ಕುರಿತು ಮಾತನಾಡಿದ್ದು, ಆಸ್ಟ್ರೇಲಿಯನ್ನರು ಬೇಸಿಗೆ ಕಾಲದಲ್ಲಿ ತೂಕ ಇಳಿಸಲು ಮುಂದಾಗುತ್ತಾರೆ. ಈ ಸಂದರ್ಭದಲ್ಲಿ ರಚನೆ, ಸಿದ್ಧತೆ ಮತ್ತು ಸ್ವಯಂ-ಮೇಲ್ವಿಚಾರಣೆಯನ್ನು ಪ್ರಮುಖ ಗುಣಲಕ್ಷಣಗಳಾಗಿ ಇಟ್ಟುಕೊಂಡು ಪ್ರೋಗ್ರಾಮ್ ಮಾಡುತ್ತಾರೆ ಎಂದು ತಿಳಿದು ಬಂದಿದೆ.
ಅಧ್ಯಯನದ ಪ್ರಕಾರ, ಮೊದಲ ಮೂರು ವಾರಗಳಲ್ಲಿ ಹೆಚ್ಚಿನ ತೂಕವನ್ನು ಕಳೆದುಕೊಂಡ ಮತ್ತು ಸಿಎಸ್‌ಐಆರ್‌ಒನ ಉತ್ತಮ ಆಹಾರಕ್ರಮದಲ್ಲಿ ದೀರ್ಘಾವಧಿಯ ಫಲಿತಾಂಶಗಳನ್ನು ಸಾಧಿಸಿದ ಜನರು, ಡಯೆಟ್ ಪ್ರೋಗ್ರಾಮ್ಗಾಗಿ ಎರಡು ದಿನಗಳ ಕಾಲ ಸಿದ್ಧತೆ ಮಾಡಿಕೊಂಡಿದ್ದಾರೆ. ಅವರು ಆನ್‌ಲೈನ್ ಯೋಜನೆ ಮತ್ತು ಸ್ವಯಂ-ಮೇಲ್ವಿಚಾರಣೆಯ ಮೂಲಕ ತೂಕ ಇಳಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಡಾ. ಹೆನ್ಡ್ರಿ ಅವರು, ಉತ್ತಮ ಡಯೆಟ್ ಪ್ರೋಗ್ರಾಮ್ಗೆ ಸಿದ್ಧತೆಗಳು ಅವಶ್ಯ ಎಂದಿದ್ದಾರೆ." ಎರಡು ದಿನಗಳ ಮುಂಚಿತವಾಗಿ ಆಹಾರ ಪದ್ಧತಿ ಕ್ರಮ ಮತ್ತು ಅವುಗಳ ಖರೀದಿಯನ್ನು ಮಾಡಿ. ಆಗ ನಿಮ್ಮ ದೇಹಕ್ಕೆ ಆಹಾರ ಒಗ್ಗಿಕೊಳ್ಳಲು ಸಹಾಯ ಮಾಡುತ್ತದೆ. ಡಯೆಟ್ ಪ್ರೋಗ್ರಾಮ್ ಕೈಗೊಂಡವರ ಆಹಾರ ಪದ್ಧತಿಯು ಜವಬ್ದಾರಿಯುತವಾಗಿದ್ದು, ಅವು ಯಶಸ್ವಿಯಾಗಿ ತೂಕ ಇಳಿಸಲು ಸಹಾಯ ಮಾಡುತ್ತದೆ ಎಂದರು.
"ಸರಿಯಾದ ಚೌಕಟ್ಟು, ತಂತ್ರಗಳು ಮತ್ತು ಮನೋಭಾವದ ಮೂಲಕ ಪರಿಣಾಮಕಾರಿ ತೂಕನಷ್ಟ ಮಾಡಬಹುದು ಎಂದು ಸಾಬೀತಾಗಿದೆ. ಇದಕ್ಕೆ ಸಂಬಂಧಿಸಿದ ಪುರಾವೆಗಳು ನಮ್ಮ ಬಳಿ ಇದೆ" ಎಂದರು. "ಆಸ್ಟ್ರೇಲಿಯನ್ನರಿಗೆ ಹೆಚ್ಚಿನ ತೂಕ ನಷ್ಟವನ್ನು ಸಾಧಿಸಲು ಸಿಎಸ್ಐಆರ್ಒ ಉತ್ತಮ ಡಯೆಟ್ನ ಆಹಾರ ಪದ್ಧತಿಯನ್ನು ಪರಿಚಯಿಸಿದೆ. ಅದುವೇ ಇಂಟರಾಆಕ್ಟಿವ್ ಸ್ಟಾರ್ಟ್ ಸ್ಟ್ರಾಂಗ್ ಗೈಡ್. ಇದು ವೈಜ್ಞಾನಿಕವಾಗಿ ಸಾಬೀತಾಗಿರುವ 12 ವಾರಗಳ ಕಾರ್ಯಕ್ರಮದಲ್ಲಿ ಉತ್ತಮ ಆರಂಭವನ್ನು ಪಡೆಯಲು ಹಂತ-ಹಂತದ ಸೂಚನೆಗಳನ್ನು ನೀಡುತ್ತದೆ" ಎಂದರು.
"ನಾವು ಹೆಚ್ಚಾಗಿ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳನ್ನು ಬಳಸುತ್ತಿರುವ ಸಮಯದಲ್ಲಿ, ಸಿಎಸ್ಐಆರ್ಒ ಒದಗಿಸಿದ ಉತ್ತಮ ಡಯೆಟ್ ಆಹಾರವು ಆರಂಭಿಕ ಮತ್ತು ನಿರಂತರ ತೂಕ ನಷ್ಟವನ್ನು ಸಾಧಿಸಲು ಸಹಾಯಕವಾಗಿದೆ. ಅಷ್ಟೇ ಅಲ್ಲದೆ, ನಮ್ಮ ಹೊಸ ಸಾಮಾನ್ಯ ಅಭ್ಯಾಸಗಳಿಗೆ ಸಹ ಇದು ಹೊಂದಿಕೊಳ್ಳುತ್ತದೆ" ಎಂದು ಡಾ ಹೆನ್ಡ್ರಿ ಹೇಳಿದರು.