ETV Bharat / bharat

ಜನರ ಕಷ್ಟಗಳಿಗೆ ಸ್ಪಂದಿಸುತ್ತಿವೆ ದೇಶದ ಅರೆ ಸೇನಾ ಪಡೆಗಳು: ಗೃಹ ಇಲಾಖೆ ಮೆಚ್ಚುಗೆ

author img

By

Published : May 2, 2020, 4:41 PM IST

ಕೊರೊನಾ ವೈರಸ್​ನಿಂದಾಗಿ ಉಂಟಾದ ಲಾಕ್​ಡೌನ್​ನಿಂದಾಗಿ ಕೋಟ್ಯಂತರ ಜನರು ಸಂಕಷ್ಟಕ್ಕೀಡಾಗಿದ್ದು, ಜನರ ಕಷ್ಟಕ್ಕೆ ಸ್ಪಂದಿಸುವ ನಿಟ್ಟಿನಲ್ಲಿ ಹಾಗೂ ಕೋವಿಡ್​​-19 ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಬಿಎಸ್​ಎಫ್​ ಸೇರಿದಂತೆ ದೇಶದ ಇತರ ಅರೆ ಸೈನಿಕ ಪಡೆಗಳು ಸಹ ಕಾರ್ಯ ನಿರ್ವಹಿಸುತ್ತಿವೆ.

paramilitary forces helping people
ಜನರ ಕಷ್ಟಕ್ಕೆ ಸ್ಪಂದಿಸುತ್ತಿವೆ ದೇಶದ ಸೈನಿಕ ಪಡೆಗಳು

ನವದೆಹಲಿ: ಕೊರೊನಾ ವೈರಸ್​​ ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟದಲ್ಲಿ ಸಿಆರ್​​ಪಿಎಫ್​​(ಕೇಂದ್ರ ಮೀಸಲು ಪೊಲೀಸ್​ ಪಡೆ), ಭಾಗಿಯಾಗಿದ್ದು, ಛತ್ತೀಸ್​​​​​ಗಢದ ದಂತೇವಾಡ ಜಿಲ್ಲೆಯ ಜನರಿಗೆ ಆಹಾರ ಸಾಮಗ್ರಿಗಳನ್ನು ಒದಗಿಸುವಲ್ಲಿ ತೊಡಗಿಕೊಂಡಿದೆ ಎಂದು ಗೃಹ ವ್ಯವಹಾರ ಸಚಿವಾಲಯ (ಎಂಎಚ್‌ಎ) ಇಂದು ಹೇಳಿದೆ.

ಸಿಆರ್‌ಪಿಎಫ್‌ನ ಇ ಕಾರ್ಯವನ್ನು ಶ್ಲಾಘಿಸಿದ ಸಚಿವಾಲಯ, ಮೂರು ಲಕ್ಷಕ್ಕೂ ಹೆಚ್ಚು ಸಿಬ್ಬಂದಿಗಳನ್ನು ಹೊಂದಿರುವ ಅತಿದೊಡ್ಡ ಕೇಂದ್ರ ಸಶಸ್ತ್ರ ಪೊಲೀಸ್ ಪಡೆ (ಸಿಎಪಿಎಫ್‌ಗಳು) ತನ್ನ ರಾಷ್ಟ್ರೀಯ ಸಹಾಯವಾಣಿ "ಸಿಆರ್‌ಪಿಎಫ್ ಮದದ್ಗಾರ್" ಮೂಲಕ ದೇಶಾದಾದ್ಯಂತ ಸಂಕಷ್ಟದಲ್ಲಿ ಇರುವ ಜನರಿಗೆ ಸಹಾಯ ಮಾಡುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದೆ.

ಈ ವರೆಗೆ ಸಿಆರ್‌ಪಿಎಫ್‌ನ ಒಂದು ಬೆಟಾಲಿಯನ್ ರಾಯ್‌ಪುರದಲ್ಲಿ ಒಂದು ಲಕ್ಷ ಕೆಜಿ ಅಕ್ಕಿ ಸರಬರಾಜು ಮಾಡಿದೆ ಎಂದು ಸಚಿವಾಲಯ ಇದೇ ವೇಳೆ ಉಲ್ಲೇಖಿಸಿದೆ.

ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ಎಫ್), ಗಡಿ ಭದ್ರತಾ ಪಡೆ (ಬಿಎಸ್‌ಎಫ್), ಇಂಡೋ - ಟಿಬೆಟಿಯನ್ ಬಾರ್ಡರ್ ಪೊಲೀಸ್ (ಐಟಿಬಿಪಿ), ಸಶಸ್ತ್ರ ಸೀಮಾ ಬಾಲ್ (ಎಸ್‌ಎಸ್‌ಬಿ) ಮತ್ತು ರಾಷ್ಟ್ರೀಯ ಭದ್ರತಾ ಸಿಬ್ಬಂದಿ (ಎನ್‌ಎಸ್‌ಜಿ) ಸೇರಿದಂತೆ ಇತರ ಸಿಎಪಿಎಫ್‌ ಭದ್ರತಾ ಪಡೆಗಳು ಕೊರೊನಾ ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿವೆ.

ಈ ಪಡೆಗಳು ಹಲವಾರು ಪ್ರದೇಶಗಳಲ್ಲಿನ ಸ್ಥಳೀಯ ಆಡಳಿತಕ್ಕೆ ಸಹಾಯ ಮಾಡುತ್ತಿವೆ, ಅಗತ್ಯ ವಸ್ತುಗಳ ಪೂರೈಕೆ ಮಾಡುವುದರ ಜೊತೆಗೆ ಜನರಲ್ಲಿ ಕೋವಿಡ್-19ರ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ಸಿಎಪಿಎಫ್‌ಗಳು ನಡೆಸುತ್ತಿರುವ ಒಟ್ಟು 32 ಆಸ್ಪತ್ರೆಗಳು 1,900 ರೋಗಿಗಳಿಗೆ ಚಿಕಿತ್ಸೆ ನೀಡುತ್ತಿವೆ ಎಂದು ಸಚಿವಾಲಯ ತಿಳಿಸಿದೆ.

ಎಸ್‌ಎಸ್‌ಬಿಯ ಮಹಾನಿರ್ದೇಶಕರು ಶ್ಲಾಘನೀಯ ಸೇವೆಯನ್ನು ಮಾಡುತ್ತಿದ್ದು, ಭಾರತ-ನೇಪಾಳ ಗಡಿಯಲ್ಲಿ ಸಿಲುಕಿದ್ದ ಅನೇಕ ನೇಪಾಳಿ ನಾಗರಿಕರಿಗೆ ಸಹಾಯ ಮಾಡಿದ್ದಾರೆ ಎಂದು ಸಚಿವಾಲಯ ತಿಳಿಸಿದೆ.

ವಿಮಾನ ನಿಲ್ದಾಣಗಳಲ್ಲಿ ಕೊರೊನಾ ಪ್ರಕರಣಗಳ ತಪಾಸಣೆ ನಡೆಸಲು, ಸೋಂಕಿತರನ್ನು ಪತ್ತೆಹಚ್ಚಲು ಸಿಐಎಸ್ಎಫ್ ಪ್ರಮುಖ ಪಾತ್ರ ವಹಿಸಿದೆ ಎಂದು ವಿಮಾನ ನಿಲ್ದಾಣ ಆರೋಗ್ಯ ಸಂಸ್ಥೆ ಶ್ಲಾಘನೆ ವ್ಯಕ್ತಪಡಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.