ETV Bharat / bharat

ಸೂಕ್ಷ್ಮ ಪ್ರದೇಶಗಳಲ್ಲಿ ಸ್ಮಾರ್ಟ್ ‌ಫೋನ್‌ಗಳ ಬಳಕೆ ನಿಷೇಧ: ಸಿಆರ್​ಪಿಎಫ್​ ಮಾರ್ಗಸೂಚಿ - ಮೊಬೈಲ್​ ಬಳಕೆಗೆ ಸಿಆರ್​ಪಿಎಫ್​ ಮಾರ್ಗಸೂಚಿ

ಸಿಆರ್‌ಪಿಎಫ್ ಸ್ಮಾರ್ಟ್‌ ಫೋನ್‌ಗಳು ಮತ್ತು ಮೊಬೈಲ್ ಫೋನ್‌ ಬಳಕೆ ಸಂಬಂಧ ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದೆ. ವರ್ಗೀಕೃತ ಮಾಹಿತಿಯ ಪ್ರಕ್ರಿಯೆ, ನಿರ್ವಹಣೆ, ಮಾನ್ಯತೆ ಪಡೆದ ಸ್ಥಳಗಳು ಸೇರಿದಂತೆ ಹೆಚ್ಚಿನ ಸೂಕ್ಷ್ಮ ಪ್ರದೇಶಗಳಲ್ಲಿ ಡೇಟಾವನ್ನು ಸಂಗ್ರಹಿಸುವ ಮತ್ತು ದಾಖಲಿಸುವ ಸ್ಮಾರ್ಟ್ ‌ಫೋನ್‌ಗಳನ್ನು ನಿಷೇಧಿಸಲಾಗಿದೆ ಎಂದು ತಿಳಿಸಿದೆ.

ಸಿಆರ್​ಪಿಎಫ್​ ಮಾರ್ಗಸೂಚಿ
ಸಿಆರ್​ಪಿಎಫ್​ ಮಾರ್ಗಸೂಚಿ
author img

By

Published : Sep 3, 2020, 12:29 PM IST

ನವದೆಹಲಿ: ಕೇಂದ್ರೀಯ ರಿಸರ್ವ್ ಪೊಲೀಸ್ ಪಡೆ (ಸಿಆರ್‌ಪಿಎಫ್) ಸ್ಮಾರ್ಟ್‌ ಫೋನ್‌ಗಳು ಮತ್ತು ಮೊಬೈಲ್ ಫೋನ್‌ ಬಳಕೆ ಸಂಬಂಧ ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದೆ. ವರ್ಗೀಕೃತ ಮಾಹಿತಿಯ ಪ್ರಕ್ರಿಯೆ, ನಿರ್ವಹಣೆ, ಮಾನ್ಯತೆ ಪಡೆದ ಸ್ಥಳಗಳು ಸೇರಿದಂತೆ ಹೆಚ್ಚಿನ ಸೂಕ್ಷ್ಮ ಪ್ರದೇಶಗಳಲ್ಲಿ ಡೇಟಾವನ್ನು ಸಂಗ್ರಹಿಸುವ ಮತ್ತು ದಾಖಲಿಸುವ ಸ್ಮಾರ್ಟ್ ‌ಫೋನ್‌ಗಳನ್ನು ನಿಷೇಧಿಸಲಾಗಿದೆ ಎಂದು ತಿಳಿಸಿದೆ.

ಸಿಆರ್‌ಪಿಎಫ್‌ನ ಹೊಸ ಮಾರ್ಗಸೂಚಿಯ ಪ್ರಕಾರ, ಕ್ಲರ್ಕ್​ ಮತ್ತು ನಾಗರಿಕ ಸಿಬ್ಬಂದಿ ಸೇರಿದಂತೆ ಎಲ್ಲಾ ಸಿಬ್ಬಂದಿಗೆ ಈ ಮಾರ್ಗಸೂಚಿ ಅನ್ವಯವಾಗಲಿದೆ. ಫೋರ್ಸ್‌ನೊಳಗಿನ ಮಾಹಿತಿಯ ಸುರಕ್ಷತೆಗಾಗಿ ಮಾರ್ಗಸೂಚಿಗಳನ್ನು ಜಾರಿಗೆ ತರಲಾಗಿದೆ.

ಮಾಹಿತಿ ಸುರಕ್ಷತೆಯ ಮೂಲಭೂತ ತತ್ವಗಳು ಗೌಪ್ಯತೆ, ಸಮಗ್ರತೆ ಮತ್ತು ಲಭ್ಯತೆಯನ್ನು ಅವಶ್ಯಕವಾಗಿ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಈ ಮಾರ್ಗಸೂಚಿಗಳನ್ನು ಜಾರಿಗೆ ತರಲಾಗಿದೆ ಎಂದು ಸಿಆರ್‌ಪಿಎಫ್ ಹೇಳಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.