ETV Bharat / bharat

ದೇಶದಲ್ಲಿ ಕೋವಿಡ್​ ಮರಣ ಪ್ರಮಾಣ ಶೇ.1.44ಕ್ಕೆ ಇಳಿಕೆ - ಆರೋಗ್ಯ ಇಲಾಖೆ ಟ್ವೀಟ್​

ದೇಶದಲ್ಲಿ ಕೊರೊನಾ ಗುಣಮುಖರ ಪ್ರಮಾಣ ಶೇ.96.83ಕ್ಕೆ ಏರಿಕೆಯಾಗಿದ್ದು, ಮರಣ ಪ್ರಮಾಣ ಶೇ.1.44ಕ್ಕೆ ಹಾಗೂ ಆ್ಯಕ್ಟಿವ್​ ಕೇಸ್​ಗಳ ಪ್ರಮಾಣ ಶೇ.1.73ಕ್ಕೆ ಇಳಿಕೆಯಾಗಿದೆ.

Covid Death rate in India decreases to 1.44%
ಭಾರತದಲ್ಲಿ ಕೋವಿಡ್​ ಮರಣ ಪ್ರಮಾಣ ಶೇ.1.44ಕ್ಕೆ ಇಳಿಕೆ
author img

By

Published : Jan 24, 2021, 10:55 AM IST

ನವದೆಹಲಿ: ಭಾರತದಲ್ಲಿ ಕೊರೊನಾ ಮೃತರ ಸಂಖ್ಯೆ 1,53,339ಕ್ಕೆ ಏರಿಕೆಯಾಗಿದೆಯಾದರೂ ಸಹ ಪ್ರತಿನಿತ್ಯ ಸೋಂಕಿ​ಗೆ ಬಲಿಯಾಗುತ್ತಿರುವವರ ಸಂಖ್ಯೆ ಕಡಿಮೆಯಾಗುತ್ತಿದೆ. ನಿನ್ನೆ 155 ಮಂದಿ ಸಾವನ್ನಪ್ಪಿದ್ದು, ದೇಶದಲ್ಲಿ ಕೋವಿಡ್​ ಮರಣ ಪ್ರಮಾಣ ಶೇ.1.44ಕ್ಕೆ ಇಳಿಕೆಯಾಗಿದೆ.

ಜನವರಿ 16ರಿಂದ ನಿನ್ನೆಯವರೆಗೆ 15,82,201 ಮಂದಿ ಆರೋಗ್ಯ ಕಾರ್ಯಕರ್ತರಿಗೆ ಕೊರೊನಾ ಲಸಿಕೆ ನೀಡಲಾಗಿದೆ. ಈ ಲಸಿಕೆಗಳು ಭಾರತದ ಕೊರೊನಾ ವಿರುದ್ಧದ ಹೋರಾಟಕ್ಕೆ ನಿರ್ಣಾಯಕ ಗೆಲುವು ತಂದುಕೊಡಲಿದೆ ಎಂದು ಆರೋಗ್ಯ ಇಲಾಖೆ ಟ್ವೀಟ್​ ಮಾಡಿದೆ.

ಕಳೆದ 24 ಗಂಟೆಗಳಲ್ಲಿ 14,849 ಸೋಂಕಿತರು ಪತ್ತೆಯಾಗಿದ್ದು, ದೇಶದಲ್ಲಿ ಪ್ರಕರಣಗಳ ಸಂಖ್ಯೆ 1,06,54,533ಕ್ಕೆ ಏರಿಕೆಯಾಗಿದೆ. ಆದರೆ ಈ ಪೈಕಿ ಶೇ.96.83 ರಷ್ಟು ಅಂದರೆ 1,03,16,786 ಮಂದಿ ಗುಣಮುಖರಾಗಿ, ಆಸ್ಪತ್ರೆಯಿಂದ ಡಿಸ್ಚಾರ್ಜ್​​ ಆಗಿದ್ದಾರೆ. ಉಳಿದಂತೆ ಶೇ.1.73 ರಷ್ಟು (1,84,408) ಕೇಸ್​​ಗಳು ಸಕ್ರಿಯವಾಗಿವೆ ಎಂದು ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

Covid Death rate in India decreases to 1.44%
ಕೋವಿಡ್​ ಟೆಸ್ಟಿಂಗ್​ ಅಪ್​ಡೇಟ್ಸ್​​

ಜನವರಿ​ 23ರ ವರೆಗೆ 19 ಕೋಟಿಗೂ ಹೆಚ್ಚು (19,17,66,871) ಜನರಿಗೆ ಕೋವಿಡ್​ ಟೆಸ್ಟ್​ ಮಾಡಲಾಗಿದ್ದು, ನಿನ್ನೆ ಒಂದೇ ದಿನ 7,81,752 ಸ್ಯಾಂಪಲ್​ಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ತಿಳಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.