ETV Bharat / bharat

ಲಾಕ್​ಡೌನ್​ ಹಿನ್ನೆಲೆ: 3 ತಿಂಗಳ ಶುಲ್ಕ ಮನ್ನಾ ಮಾಡಿದ ಶಾಲೆ - 3 ತಿಂಗಳ ಶುಲ್ಕ ಮನ್ನಾ ಮಾಡಿದ ಶಾಲೆ

ರಾಜಪುರ ಗ್ರಾಮದ ಶಾಲೆಯೊಂದು ಪೋಷಕರನ್ನು ಆರ್ಥಿಕವಾಗಿ ಬೆಂಬಲಿಸಲು ಮೂರು ತಿಂಗಳ ವಿದ್ಯಾರ್ಥಿಗಳ ಶುಲ್ಕವನ್ನು ಮನ್ನಾ ಮಾಡಿದೆ.

COVID-19: School waives off fee of three months in Jhansi
3 ತಿಂಗಳ ಶುಲ್ಕ ಮನ್ನಾ ಮಾಡಿದ ಶಾಲೆ
author img

By

Published : Apr 11, 2020, 9:16 PM IST

Updated : Apr 11, 2020, 10:04 PM IST

ಝಾನ್ಸಿ (ಉತ್ತರ ಪ್ರದೇಶ) : ರಾಷ್ಟ್ರವ್ಯಾಪಿ ಲಾಕ್‌ಡೌನ್ ಮಧ್ಯೆ ಪೋಷಕರನ್ನು ಆರ್ಥಿಕವಾಗಿ ಬೆಂಬಲಿಸಲು ರಾಜಪುರ ಗ್ರಾಮದ ವ್ಯಾನ್ಶ್ ಅಕಾಡೆಮಿ ಶಾಲೆಯು ಮೂರು ತಿಂಗಳ ಶುಲ್ಕವನ್ನು ಮನ್ನಾ ಮಾಡಿದೆ. ಏಪ್ರಿಲ್, ಮೇ ಮತ್ತು ಜೂನ್ ತಿಂಗಳಿಗೆ 227 ವಿದ್ಯಾರ್ಥಿಗಳ ಶುಲ್ಕವನ್ನು ಮನ್ನಾ ಮಾಡಲಾಗಿದೆ ಎಂದು ಶಾಲೆಯ ಮಾಲೀಕ ಸಂಜೀವ್ ಯಾದವ್ ತಿಳಿಸಿದ್ದಾರೆ.

ಈಟಿವಿ ಭಾರತದೊಂದಿಗೆ ಮಾತನಾಡಿದ ಸಜೀವ್ ಯಾದವ್, ಕೊರೊನಾ ವೈರಸ್ ಸಾಂಕ್ರಾಮಿಕ, ಲಾಕ್​ಡೌನ್​ನಿಂದಾಘಿ ರೈತರು ಸೇರಿದಂತೆ ಹಲವರ ಮೇಲೆ ಆರ್ಥಿಕ ಸ್ಥಿತಿಯ ಮೇಲೆ ಪರಿಣಾಮ ಬೀರಿದೆ. ಎಲ್ಲರೂ ಸಮಾಜಕ್ಕೆ ಕೊಡುಗೆ ನೀಡುತ್ತಿದ್ದಾರೆ. ಐದನೇ ತರಗತಿಯವರೆಗೆ ಈ ಶಾಲೆಯಲ್ಲಿ ಕಲಿಯುವ ವಿದ್ಯಾರ್ಥಿಗಳು ಮೂಲತಃ ರೈತರು ಮತ್ತು ಕಾರ್ಮಿಕರ ಕುಟುಂಬಕ್ಕೆ ಸೇರಿದವರು. ಹಾಗಾಗಿ ನಾವು ಸಹ ಮೂರು ತಿಂಗಳ ಶುಲ್ಕವನ್ನು ತ್ಯಜಿಸಲು ನಿರ್ಧರಿಸಿದೆವು ಎಂದು ತಿಳಿಸಿದರು.

ಸಂಜೀವ್ ಕೈಗೊಂಡ ಈ ನಿರ್ಧಾರಕ್ಕೆ ಸ್ಥಳೀಯರು ಶ್ಲಾಘಿಸಿದ್ದಾರೆ. ಇತರ ಶಾಲೆಗಳು ಸಹ ಮುಂದೆ ಬಂದು ಅಂತಹ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.

ಗಿರಣಿ ಮಾಲೀಕರಾದ ರಾಮ್ ಯಾದವ್ ನಿರ್ಗತಿಕ ಮತ್ತು ಬಡವರಿಗೆ ಉಚಿತವಾಗಿ ಕಾಳು ಬೀಸುವ ಕಾರ್ಯವನ್ನು ಮಾಡುತ್ತಿದ್ದಾರೆ. ಕಲ್ಪನಾ ನಾಮದೇವ್ ಎಂಬ ವಿದ್ಯಾರ್ಥಿನಿಯು ಮಾಸ್ಕ್​ಗಳನ್ನು ತಯಾರಿಸಿ ಗ್ರಾಮಸ್ಥರಿಗೆ ಉಚಿತವಾಗಿ ವಿತರಿಸುತ್ತಿದ್ದಾಳೆ. ರಾಮ್ ನರೇಶ್ ತನ್ನ ಟ್ರ್ಯಾಕ್ಟರ್‌ನಿಂದ ಬಡ ರೈತರ ಬೆಳೆಗಳನ್ನು ಉಚಿತವಾಗಿ ಕೊಂಡೊಯ್ಯುವ ಕಾರ್ಯನಿರ್ವಹಿಸುತ್ತಿದ್ದಾರೆ.

Last Updated : Apr 11, 2020, 10:04 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.