ನವದೆಹಲಿ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬೆಳಗ್ಗೆ 11 ಗಂಟೆಗೆ 5ನೇ ಹಂತದ ಆರ್ಥಿಕ ಪ್ಯಾಕೇಜ್ ಪ್ರಕಟಿಸಲಿದ್ದಾರೆ. ವಿತ್ತ ಸಚಿವೆ ಕಳೆದ ಐದು ದಿನಗಳಿಂದ ಪರಿಹಾರ ಕ್ರಮಗಳನ್ನು ಪ್ರಕಟಿಸುತ್ತಿದ್ದು, ಇದು ಅವರ ಕೊನೆಯ ಸುತ್ತಿನ ಘೋಷಣೆಯಾಗಿದೆ.
ಕಲ್ಲಿದ್ದಲು, ರಕ್ಷಣಾ ಉತ್ಪಾದನೆ, ವಾಯುಪ್ರದೇಶ ನಿರ್ವಹಣೆ, ವಿದ್ಯುತ್ ವಿತರಣಾ ಕಂಪನಿಗಳು, ಬಾಹ್ಯಾಕಾಶ ಕ್ಷೇತ್ರ ಮತ್ತು ಪರಮಾಣು ಶಕ್ತಿ ಸೇರಿ ಪ್ರಮುಖ ಎಂಟು ಕ್ಷೇತ್ರಗಳಲ್ಲಿನ ಸುಧಾರಣೆಗಳ ಕುರಿತು ಹಣಕಾಸು ಸಚಿವೆ ಶನಿವಾರ ತಿಳಿಸಿದ್ದರು.
ಕೇಂದ್ರದ ಆರ್ಥಿಕ ಪ್ಯಾಕೇಜ್ ಕುರಿತು ಎರಡನೇ ಮತ್ತು ಮೂರನೇ ಹಂತದ ಘೋಷಣೆಗಳನ್ನು ಗುರುವಾರ ಮತ್ತು ಶುಕ್ರವಾರ ಪ್ರಕಟಿಸಿದ್ದರು. ರೈತರ ಶಕ್ತಿಯನ್ನು ಹೆಚ್ಚಿಸುವ ಅಥವಾ ಕೃಷಿ ಆದಾಯದಲ್ಲಿ ಲಾಭದ ಪಾಲನ್ನು ಹೆಚ್ಚಿಸುವ ಗುರಿಯನ್ನು ಹೊಂದಿರುವ ಸುಧಾರಣಾ ಕ್ರಮಗಳ ಮಿಶ್ರಣವನ್ನು ಹಣಕಾಸು ಸಚಿವರು ಶುಕ್ರವಾರ ಪ್ರಕಟಿಸಿದ್ದರು.