ETV Bharat / bharat

ಕೊರೊನಾದಿಂದ ವ್ಯಕ್ತಿ ಸಾವು: ವೈದ್ಯರ ಮೇಲೆ ಹಲ್ಲೆ ಮಾಡಿದ ಸೋಂಕಿತ ಸಂಬಂಧಿಗಳು - Covid-19 patients assaulted doctors

ಮೃತ ಕೊರೊನಾ ಸೋಂಕಿತನ ಸಂಬಂಧಿಕರು ಚಿಕಿತ್ಸೆ ನೀಡಿದ ವೈದ್ಯರ ಮೇಲೆ ಹಲ್ಲೆ ಮಾಡಿರುವ ಘಟನೆ ಹೈದ್ರಾಬಾದ್​​ನಲ್ಲಿ ನಡೆದಿದೆ.

Covid-19 patients at Hyderabad hospital assault docs
ವೈದ್ಯರ ಮೇಲೆ ಹಲ್ಲೆ
author img

By

Published : Apr 2, 2020, 9:19 AM IST

ಹೈದ್ರಾಬಾದ್​​: ಕೊರೊನಾ ಸೋಂಕಿನಿಂದಾಗಿ ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿ ಮೃತಪಟ್ಟ ಹಿನ್ನೆಲೆ ಅದೇ ವಾರ್ಡ್​ನಲ್ಲಿದ್ದ ಸಂಬಂಧಿಕರು ವೈದ್ಯರ ಮೇಲೆ ಹಲ್ಲೆ ಮಾಡಿರುವ ಘಟನೆ ಹೈದ್ರಾಬಾದ್​​ನಲ್ಲಿ ನಡೆದಿದೆ.

ಇಲ್ಲಿನ ಗಾಂಧಿ ಆಸ್ಪತ್ರೆಯಲ್ಲಿ ಒಂದೇ ಕುಟುಂಬದ ಒಬ್ಬ ಮಹಿಳೆ ಸೇರಿ ನಾಲ್ವರಿಗೆ ಕೊರೊನಾ ಪಾಸಿಟಿವ್​ ದೃಢಪಟ್ಟಿತ್ತು. ಅವರೆಲ್ಲರಿಗೂ ಒಂದೇ ವಾರ್ಡ್​ನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು ಎಂದು ತಿಳಿದುಬಂದಿದ್ದು, ಈ ವೇಳೆ ಚಿಕಿತ್ಸೆ ಫಲಕಾರಿಯಾಗದೆ ಒಬ್ಬ ವ್ಯಕ್ತಿ ಮೃತಪಟ್ಟ ಹಿನ್ನಲೆ ಅವರ ಸಂಬಂಧಿಕರು ಸಾವಿಗೆ ವೈದ್ಯರನ್ನು ಹೊಣೆ ಮಾಡಿ ಹಲ್ಲೆ ಮಾಡಿದ್ದಾರೆಂದು ತಿಳಿದುಬಂದಿದೆ.

ಈ ಘಟನೆ ಆಸ್ಪತ್ರೆಯು 8ನೇ ಮಹಡಿಯಲ್ಲಿನ ಐಸೋಲೇಷನ್​ ವಾರ್ಡ್​ನಲ್ಲಿ ನಡೆದಿದೆ. ಘಟನೆಯಿಂದ ಹೆದರಿರುವ ಆಸ್ಪತ್ರೆ ಸಿಬ್ಬಂದಿ ಭದ್ರತೆ ಕಲ್ಪಿಸಿಕೊಡುವಂತೆ ಪೊಲೀಸರ ಮೊರೆ ಹೋಗಿದ್ದಾರೆ. ಪೊಲೀಸರು ಘಟನಾ ಸ್ಥಳಕ್ಕೆ ಹೋದರೂ ಯಾವುದೇ ರಕ್ಷಣಾತ್ಮಕ ಸಾಧನಗಳಿಲ್ಲದ ಕಾರಣ ವಾರ್ಡ್​ ಪ್ರವೇಶ ಮಾಡದೆ ವಾಪಸಾಗಿದ್ದಾರೆ.

ಆಸ್ಪತ್ರೆಯ ವೈದ್ಯರ ದೂರಿನನ್ವಯ ಹಲ್ಲೆ ಮಾಡಿದವರ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದು, ಆಸ್ಪತ್ರೆಗೆ ನೀಡಲಾಗಿದ್ದ ಭದ್ರತೆಯನ್ನು ಮತ್ತಷ್ಟು ಹೆಚ್ಚಿಸಲು ಪೊಲೀಸ್​ ಆಯುಕ್ತ ಅಂಜನಿ ಕುಮಾರ್ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.