ETV Bharat / bharat

ಮಾನವ ಕಳ್ಳಸಾಗಣೆ ಹೆಚ್ಚಳಕ್ಕೆ ಕಾರಣವಾಗುತ್ತಿದೆ ಕೊರೊನಾ ಸೋಂಕು!

ಕೊರೊನಾ ಸಾಂಕ್ರಾಮಿಕವು ಆರ್ಥಿಕ ಕುಸಿತಕ್ಕೆ ಕಾರಣವಾಗಿದ್ದು, ಇದರಿಂದ ಗಡಿಯಾಚೆಗಿನ ಮಾನವ ಕಳ್ಳಸಾಗಣೆ ಹೆಚ್ಚಳವಾಗಲಿದೆ ಎಂದು ಯುನೈಟೆಡ್ ನೇಷನ್ಸ್ ಡ್ರಗ್ಸ್ ಆ್ಯಂಡ್ ಕ್ರೈಮ್ ಆಫೀಸ್ ಹೇಳಿದೆ.

human trafficking
ಮಾನವ ಕಳ್ಳಸಾಗಣೆ ಹೆಚ್ಚಳಕ್ಕೆ ಕಾರಣವಾಗುತ್ತಿದೆ ಕೊರೊನಾ ಸೋಂಕು
author img

By

Published : May 17, 2020, 8:25 PM IST

ಹೈದರಾಬಾದ್: ಕೊರೊನಾ ವೈರಸ್ ಸಾಂಕ್ರಾಮಿಕ ರೋಗವು ಹಲವು ಬಿಕ್ಕಟ್ಟಿಗೆ ಕಾರಣವಾಗಿದ್ದು, ವಲಸೆ ಕಾರ್ಮಿಕರ ಮೇಲೆ ಅಡ್ಡಪರಿಣಾಮ ಬೀರಿದೆ. ಪ್ರಯಾಣಕ್ಕೆ ನಿರ್ಬಂಧಗಳನ್ನು ವಿಧಿಸಲಾಗಿದ್ದರೂ ಜನರ ಸಂಚಾರ ಮಾತ್ರ ನಿಂತಿಲ್ಲ.

ಸಾಂಕ್ರಾಮಿಕ ರೋಗವು ಆರ್ಥಿಕ ಕುಸಿತಕ್ಕೆ ಕಾರಣವಾಗಿದೆ ಎಂದು ಯುನೈಟೆಡ್ ನೇಷನ್ಸ್ ಡ್ರಗ್ಸ್ ಆ್ಯಂಡ್ ಕ್ರೈಮ್ ಆಫೀಸ್ (ಯುಎನ್‌ಒಡಿಸಿ) ಹೇಳುತ್ತದೆ. ಇದು ಹೆಚ್ಚು ಸೋಂಕು ಪೀಡಿತ ದೇಶಗಳಿಂದ ಶ್ರೀಮಂತ ಸ್ಥಳಗಳಿಗೆ ವಲಸೆ ಹೋಗುವರ ಅಥವಾ ಮಾನವರ ಕಳ್ಳಸಾಗಣೆಯನ್ನು ಹೆಚ್ಚಿಸುತ್ತದೆ ಎಂದಿದೆ.

ವಲಸೆ ಕಾರ್ಮಿಕರು ಮೆಡಿಟರೇನಿಯನ್, ಆಫ್ರಿಕನ್, ಮಧ್ಯಪ್ರಾಚ್ಯ ಮತ್ತು ಉತ್ತರ ಆಫ್ರಿಕ, ಏಷ್ಯನ್ ಪ್ರದೇಶಗಳಲ್ಲಿ ಪಲಾಯನ ಮಾಡುತ್ತಿದ್ದಾರೆ. ಸಾಂಕ್ರಾಮಿಕ ಹಿನ್ನೆಲೆಯಲ್ಲಿ ಸಮುದ್ರದಲ್ಲಿ ಕಾವಲು ಕಡಿಮೆ ಇರುವುದರಿಂದ ಇಂತ ಘಟನೆ ನಡೆಯುತ್ತಿದ್ದು, ಕೊರೊನಾ ಹರಡುವ ಅಪಾಯವನ್ನು ಹೆಚ್ಚಿಸುತ್ತದೆ.

ಜಾಗತಿಕ ಆರ್ಥಿಕ ಬಿಕ್ಕಟ್ಟು, ನಿರುದ್ಯೋಗ ಪ್ರಮಾಣದ ಹೆಚ್ಚಳಕ್ಕೆ ಕಾರಣವಾಗಲಿದೆ. ಇದು ಉದ್ಯೋಗ ಸಮಸ್ಯೆಯನ್ನು ಎದುರಿಸುತ್ತಿರುವ ದೇಶಗಳಿಂದ ಗಡಿಯಾಚೆಗಿನ ಕಳ್ಳಸಾಗಣೆಗೂ ದಾರಿಮಾಡಿಕೊಡುತ್ತದೆ. ಆದಾಗ್ಯೂ, ಅಭಿವೃದ್ಧಿ ಹೊಂದಿದ ಮತ್ತು ಅಭಿವೃದ್ಧಿ ಹೊಂದುತ್ತಿರುವ ದೇಶಗಳು ಆರ್ಥಿಕತೆಯನ್ನು ಚೇತರಿಸಿಕೊಳ್ಳಲು ಹೂಡಿಕೆ ಮಾಡಿದರೆ ವಲಸಿಗರ ಕಳ್ಳಸಾಗಣೆಯನ್ನು ತಪ್ಪಿಸಬಹುದು. ನಿರಾಶ್ರಿತರು ಮತ್ತು ವಲಸಿಗರಿಗೆ ಸುರಕ್ಷಿತ ಪ್ರಯಾಣವನ್ನು ಒದಗಿಸುವ ಮೂಲಕ ದೇಶಗಳು ವಲಸೆ ಕಾರ್ಮಿಕರನ್ನು ಕಳ್ಳಸಾಗಣೆಯಿಂದ ರಕ್ಷಿಸಬಹುದಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.