ETV Bharat / bharat

ಬಡವರಿಗಾಗಿ ಯೋಜನೆ ಪ್ರಕಟಿಸುವಂತೆ ಕೇಂದ್ರವನ್ನು ಒತ್ತಾಯಿಸಿ: ಕಾಂಗ್ರೆಸ್ ಸಿಎಂಗಳಿಗೆ ಚಿದು ಮನವಿ - ಮುಖ್ಯಮಂತ್ರಿಗಳ ಬಳಿ ಮನವಿ

ಪ್ರಧಾನಿಗಳ ಜೊತೆಗಿನ ವಿಡಿಯೋ ಸಂವಾದದ ವೇಳೆ ಬಡವರ ಅಗತ್ಯಕ್ಕಾಗಿ ತುರ್ತು ಯೋಜನೆಗಳನ್ನು ಪ್ರಕಟಿಸುವಂತೆ ಒತ್ತಾಯಿಸಿ ಎಂದು ಕಾಂಗ್ರೆಸ್ ಮುಖ್ಯಮಂತ್ರಿಗಳಾದ ಕ್ಯಾ. ಅಮರೀಂದರ್ ಸಿಂಗ್, ಅಶೋಕ್ ಗೆಹ್ಲೋಟ್‌, ಉದ್ಧವ್ ಠಾಕ್ರೆ, ವಿ. ನಾರಾಯಣ ಸ್ವಾಮಿ ಅವರಲ್ಲಿ ಪಿ.ಚಿದಂಬರಂ ಮನವಿ ಮನಾಡಿದ್ದಾರೆ.

Chidambaram urges chief ministers
Chidambaram urges chief ministers
author img

By

Published : Apr 11, 2020, 11:06 AM IST

ನವದೆಹಲಿ: ಲಾಕ್​ಡೌನ್‌ ಪರಿಣಾಮ ತೀವ್ರ ತೊಂದರೆ ಅನುಭವಿಸುತ್ತಿರುವ​ ಜನಸಾಮಾನ್ಯರು, ಬಡವರ ವಿಚಾರವಾಗಿ ವಿಡಿಯೋ ಸಂವಾದದಲ್ಲಿ ಪ್ರಧಾನಿ ಬಳಿ ಬೇಡಿಕೆ ಇಡುವಂತೆ ಕಾಂಗ್ರೆಸ್ ಅಧಿಕಾರದಲ್ಲಿರುವ ಮತ್ತು ಕಾಂಗ್ರೆಸ್‌ ಬೆಂಬಲಿತ ರಾಜ್ಯಗಳ ಸಿಎಂಗಳಿಗೆ ಮಾಜಿ ಸಚಿವ ಪಿ.ಚಿದಂಬರಂ ಮನವಿ ಮಾಡಿದ್ದಾರೆ.

ಕೊರೊನಾ ವಿರುದ್ಧ ಹೋರಾಟ ನಡೆಸುವ ದೇಶದ ಎಲ್ಲಾ ನಾಗರಿಕರ ಜೊತೆ ಬಡವರ ಜೀವನವೂ ಮುಖ್ಯವಾಗಿದೆ. ಅವರ ಉದ್ಧಾರಕ್ಕಾಗಿ ಮಹತ್ವದ ಯೋಜನೆ ರೂಪಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿ ಎಂದು ಟ್ವೀಟ್​ ಮೂಲಕ ತಿಳಿಸಿದ್ದಾರೆ.

ಲಾಕ್​ಡೌನ್​ ಸಮಯದಲ್ಲಿ ತೊಂದರೆ ಅನುಭವಿಸುತ್ತಿರುವ ದೇಶದ ಬಡಜನರ ಪರವಾಗಿ ಕೇಂದ್ರ ಸರ್ಕಾರ ಯೋಜನೆ ಘೋಷಿಸಬೇಕು ಎಂದು ಈ ಹಿಂದೆಯೂ ಚಿದು ಆಗ್ರಹಿಸಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.