ನವದೆಹಲಿ: ಕೊರೊನಾ ಲಸಿಕೆಗೆ ಸಂಬಂಧಿಸಿದಂತೆ ಡಿಸಿಜಿಐ ಅನುಮೋದನೆಯು ಹೊಸ ಉತ್ಪನ್ನಗಳ ಅಭಿವೃದ್ಧಿಯನ್ನು ಹೆಚ್ಚಿಸುತ್ತದೆ ಎಂದು ಭಾರತ್ ಬಯೋಟೆಕ್ ಸಿಎಂಡಿ ಕೃಷ್ಣ ಎಲ್ಲ ಸಂತಸ ವ್ಯಕ್ತಪಡಿಸಿದ್ದಾರೆ.
ಕೊವಾಕ್ಸಿನ್ ಬಳಕೆಗೆ ಡಿಸಿಜಿಐ ಅನುಮೋದನೆ ನೀಡಿರುವ ಹಿನ್ನೆಲೆಯಲ್ಲಿ ಭಾರತ್ ಬಯೋಟೆಕ್ ಸಂತೋಷ ವ್ಯಕ್ತಪಡಿಸಿದೆ.
ಕೋವಾಕ್ಸಿನ್ ಅನ್ನು ವೈರಲ್ ಪ್ರೋಟೀನ್ಗಳನ್ನು ತಡೆದುಕೊಳ್ಳುವಂತೆ ವಿನ್ಯಾಸಗೊಳಿಸಲಾಗಿದೆ. ಕೊವಾಕ್ಸಿನ್ ಬಲವಾದ ರೋಗನಿರೋಧಕ ಪ್ರತಿಕ್ರಿಯೆಗಳನ್ನು ಉಂಟುಮಾಡುತ್ತದೆ. ಈ ಕೋವಾಕ್ಸಿನ್ ಪ್ರಯೋಗವು ನಾವು ಇಲ್ಲಿಯವರೆಗೆ ಮಾಡಿದ ಎಲ್ಲಾ ಇತರೆ ಪ್ರಯೋಗಗಳಿಗಿಂತ ಮಹತ್ವದ್ದಾಗಿದೆ. ದೇಶದ ಮಾನವರ ಮೇಲಿನ ವ್ಯಾಕ್ಸಿನೇಷನ್ ಪ್ರಯೋಗಗಳಲ್ಲಿ ನಮ್ಮದು ದೊಡ್ಡ ಪ್ರಯೋಗ ಎಂದು ತಿಳಿಸಿದ್ದಾರೆ.
ಮೂರನೇ ಹಂತದ ಪ್ರಯೋಗಗಳನ್ನು ಕಳೆದ ವರ್ಷ ನವೆಂಬರ್‌ನಲ್ಲಿ ಪ್ರಾರಂಭಿಸಲಾಯಿತು. ಆ ಪ್ರಯೋಗಗಳಿಗಾಗಿ ನಾವು 23,000 ಸ್ವಯಂಸೇವಕರನ್ನು ಬಳಕೆ ಮಾಡಿಕೊಂಡಿದ್ದೆವು. ಸ್ವಯಂಸೇವಕರ ಈ ಮನೋಭಾವವು ಭಾರತ ಮತ್ತು ಜಗತ್ತಿಗೆ ದೊಡ್ಡ ನೈತಿಕ ಶಕ್ತಿಯನ್ನು ನೀಡುತ್ತದೆ. ಎಲ್ಲಾ ದೇಶಗಳಿಗೆ ಕೋವಾಕ್ಸಿನ್ ಲಸಿಕೆ ನೀಡುವುದು ನಮ್ಮ ಉದ್ದೇಶ ಎಂದಿದ್ದಾರೆ.