ಜೈಪುರ(ರಾಜಸ್ಥಾನ): ಲಿವ್-ಇನ್-ರಿಲೇಷನ್ನಲ್ಲಿದ್ದ ಜೋಡಿ ಮೇಲೆ ಗುಂಡಿನ ದಾಳಿ ನಡೆಸಿ ಕೊಲೆ ಮಾಡಿರುವ ಘಟನೆ ಶುಕ್ರವಾರ ನಡೆದಿದ್ದು, ಘಟನೆಯಲ್ಲಿ ಸಾವನ್ನಪ್ಪಿರುವ ಮಹಿಳೆಯ ಮಗನಿಂದ ಈ ಕೃತ್ಯ ನಡೆದಿರುಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಶಂಕಿತ ಆರೋಪಿ ಪರಾರಿಯಾಗಿದ್ದು, ಆತನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಹಗಲು ಹೊತ್ತಿನಲ್ಲೇ ಈ ಕೃತ್ಯ ನಡೆದಿರುವುದರಿಂದ ಈ ಪ್ರದೇಶದಲ್ಲಿ ಸಾಕಷ್ಟು ಆತಂಕ ಮೂಡಿಸಿದೆ. ಜೈಪುರ ಪೊಲೀಸ್ ಠಾಣಾ ಅಧೀಕ್ಷಕ ಶಂಕರ್ ದತ್ ಶರ್ಮಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ.
ಓದಿ: ಬಂಪರ್ ಬೆಳೆಗೆ ಪಾಪರ್ ಬೆಲೆ.. ಉತ್ತು ಬಿತ್ತಿದ್ದ ಜಮೀನಿನಲ್ಲೇ ರೈತ ಆತ್ಮಹತ್ಯೆ..
ಮೃತ ಮಹಿಳೆ ಸುಮನ್ ಚೌಧರಿ ಮಗ ಪಂಕಜ್ ಈ ಸಂಬಂಧದಿಂದ ಸಂತೋಷವಾಗಿರಲಿಲ್ಲವಂತೆ. ಇದೇ ಕಾರಣಕ್ಕಾಗಿ ಕೊಲೆ ಮಾಡಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ.
ಮಹಿಳೆ ತನ್ನ ಗಂಡನಿಂದ ಬೇರಾಗಿದ್ದಳು. ನಂತರ ಪ್ರೇಮಿ ಜತೆ ತನ್ನಿಬ್ಬರು ಮಕ್ಕಳೊಂದಿಗೆ ವಾಸಿಸುತ್ತಿದ್ದಳು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಈ ಸಂಬಂಧಕ್ಕೆ ಸುಮನ್ ಮಗ ವಿರೋಧಿಸಿದ್ದ ಎನ್ನಲಾಗಿದೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಿದ ನಂತರ ಅಂತ್ಯಕ್ರಿಯೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ.