ETV Bharat / bharat

ಕೊರೊನಾ ಚಿಕಿತ್ಸೆ: ದೆಹಲಿಯ ಖಾಸಗಿ ಆಸ್ಪತ್ರೆಗಳ ಚಿಕಿತ್ಸಾ ವೆಚ್ಚದಲ್ಲಿಲ್ಲ ಪಾರದರ್ಶಕತೆ..!? - ಕೊರೊನಾ ಚಿಕಿತ್ಸೆ ದರ

ಸರ್ಕಾರ ಕೋವಿಡ್​ ಚಿಕಿತ್ಸಾ ದರವನ್ನು ನಿಗದಿ ಪಡಿಸಿದ್ದರೂ ಕೆಲವು ಖಾಸಗಿ ಆಸ್ಪತ್ರೆಗಳು ಚಿಕತ್ಸೆ ನೆಪದಲ್ಲಿ ಕೋವಿಡ್​ ಸೋಂಕಿತರ ಜೇಬಿಗೆ ಕತ್ತರಿ ಹಾಕುತ್ತಿವೆ ಎಂಬ ಆರೋಪ ಕೇಳಿ ಬರುತ್ತಿವೆ.

Corona Treatment in Delhi
ಕೊರೊನಾ ಚಿಕಿತ್ಸೆ
author img

By

Published : Jul 23, 2020, 12:29 AM IST

ನವದೆಹಲಿ: ಇತ್ತೀಚೆಗೆ ದೆಹಲಿಯ ಖಾಸಗಿ ಆಸ್ಪತ್ರೆಗಳಲ್ಲಿ ಕೊರೊನಾ ಚಿಕಿತ್ಸೆಯ ವೆಚ್ಚವನ್ನು ರಾಜ್ಯ ಸರ್ಕಾರ ಭರಿಸಿದೆ. ಆದರೆ ಈ ಆಸ್ಪತ್ರೆಗಳಲ್ಲಿ ಹಲವು ರೋಗಿಗಳನ್ನು ದಾಖಲಿಸುವ ಮೊದಲು ದರದ ವಿವರಗಳನ್ನು ಹಂಚಿಕೊಳ್ಳುತ್ತಿಲ್ಲ ಎಂಬ ಹಲವಾರು ದೂರುಗಳು ಬರುತ್ತಿವೆ. ಈ ಆಸ್ಪತ್ರೆಗಳು ಕೊರೊನಾ ರೋಗಿಗಳಿಂದ ಫೋನ್ ಕರೆಗಳನ್ನು ತೆಗೆದುಕೊಳ್ಳಲು ನಿರಾಕರಿಸುತ್ತವೆ ಅಥವಾ ಆರಂಭಿಕ ಠೇವಣಿ ಇಡುವ ಮೂಲಕ ಪ್ರವೇಶ ಪಡೆಯಲು ಒತ್ತಾಯಿಸುತ್ತವೆ ಎಂದು ಆರೋಪಿಸಲಾಗಿದೆ.

ದೆಹಲಿಯ ಅನೇಕ ಆಸ್ಪತ್ರೆಗಳು ಕೊರೊನಾ ಚಿಕಿತ್ಸೆಯ ದರದಲ್ಲಿ ಪಾರದರ್ಶಕತೆ ಹೊಂದಿಲ್ಲ ಎಂಬ ಆರೋಪ ಕೇಳಿಬಂದಿದೆ. ಕಳೆದ ಕೆಲವು ದಿನಗಳಲ್ಲಿ, ಈಟಿವಿ ಭಾರತ ಈ ನಿಟ್ಟಿನಲ್ಲಿ ಅನೇಕ ಆಸ್ಪತ್ರೆಗಳೊಂದಿಗೆ ಮಾತನಾಡಲು ಪ್ರಯತ್ನಿಸಿದೆ. ಆದರೆ ಹೆಚ್ಚಿನವರು ಕೊರೊನಾ ರೋಗಿಗಳಿಗೆ ವಿಧಿಸುವ ದರವನ್ನು ಬಹಿರಂಗಪಡಿಸಲು ಸಿದ್ಧರಿರಲಿಲ್ಲ.

ದೆಹಲಿ ಸರ್ಕಾರದ ಅಂಕಿಅಂಶಗಳ ಪ್ರಕಾರ, ರಾಷ್ಟ್ರ ರಾಜಧಾನಿಯಲ್ಲಿ ಕೊರೊನಾ ಸ್ಥಿತಿ ಸುಧಾರಿಸುತ್ತಿದೆ. ದೆಹಲಿಯಲ್ಲಿ 1,22,793 ಪ್ರಕರಣಗಳಿದ್ದು, 3,628 ಜನರು ಈವರೆಗೆ ಬಲಿಯಾಗಿದ್ದಾರೆ. ದೆಹಲಿಯಲ್ಲಿ 16031 ಸಕ್ರಿಯ ಪ್ರಕರಣಗಳಿವೆ. ದೆಹಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ಕೋವಿಡ್​ ರೋಗಿಗಳಿಗೆ ಮೀಸಲಾಗಿರುವ 12,000 ಹಾಸಿಗೆಗಳು ಖಾಲಿಯಾಗಿವೆ ಎಂಬುದು ಗಮನಿಸಬೇಕಾದ ಸಂಗತಿ.

ಖಾಸಗಿ ಆಸ್ಪತ್ರೆಗಳು ಕೋವಿಡ್ ರೋಗಿಗಳಿಗೆ ಅತಿಯಾದ ಶುಲ್ಕ ವಿಧಿಸುತ್ತಿದ್ದವು. ಇದರಿಂದಾಗಿ ಚಿಕಿತ್ಸಾ ವೆಚ್ಚವನ್ನು ಸರ್ಕಾರವು ವಿಭಿನ್ನ ವರ್ಗಗಳನ್ನಾಗಿ ಮಾಡಿತು. ಆಸ್ಪತ್ರೆಗಳಿಗೆ ಅಧಿಸೂಚನೆ ದರಕ್ಕಿಂತ ಹೆಚ್ಚಿನ ಶುಲ್ಕ ವಿಧಿಸದಂತೆ ನಿರ್ದೇಶಿಸಲಾಯಿತು.

ಖಾಸಗಿ ಆಸ್ಪತ್ರೆಯಲ್ಲಿ ಒಂದು ದಿನಕ್ಕೆ ಕೊರೊನಾ ಚಿಕಿತ್ಸೆಯ ದರ...

ಐಸೋಲೇಷನ್​ ಬೆಡ್ - 8,000 ದಿಂದ 10,000 ರೂ.

ವೆಂಟಿಲೇಟರ್‌ ಇಲ್ಲದ ಐಸಿಯು - 13,000 ರಿಂದ 15,000 ರೂ.

ವೆಂಟಿಲೇಟರ್‌ನೊಂದಿಗೆ - 15,000 ರಿಂದ 18,000 ರೂ. (ದರವು ಪಿಪಿಇ ಕಿಟ್‌ಗಳ ವೆಚ್ಚವನ್ನೂ ಒಳಗೊಂಡಿದೆ)

ಗಂಗಾರಾಂ ಆಸ್ಪತ್ರೆ ಬಿಟ್ಟರೆ ಉಳಿದೆಲ್ಲವುಗಳು ದರವನ್ನು ಹೇಳಲು ನಿರಾಕರಿಸಿದರು. ಇನ್ನೂ ಬಿಎಲ್​ ಕಪೂರ್​ ಮತ್ತು ವೆಂಕಟೇಶ್ವರ್ ಆಸ್ಪತ್ರೆಗಳು ಮೊದಲು ಕೊರೊನಾ ಸೋಂಕಿತನನ್ನು ಕರೆತನ್ನಿ, ಅಡ್ಮಿಟ್​ ಮಾಡಿಕೊಂಡ ಬಳಿಕ ದರವನ್ನು ತಿಳಿಸಲಾಗುವುದು ಎಂದರು.

ಹೀಗೆ ಸರ್ಕಾರ ಕೋವಿಡ್​ ಚಿಕಿತ್ಸಾ ದರವನ್ನು ನಿಗದಿ ಪಡಿಸಿದ್ದರೂ ಕೆಲವು ಖಾಸಗಿ ಆಸ್ಪತ್ರೆಗಳು ಚಿಕತ್ಸೆ ನೆಪದಲ್ಲಿ ಕೋವಿಡ್​ ಸೋಂಕಿತರ ಜೇಬಿಗೆ ಕತ್ತರಿ ಹಾಕುತ್ತಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.