ETV Bharat / bharat

ಕೋವಿಡ್​ ಸೋಂಕಿತನಿಂದ ವೈದ್ಯನ ಮೇಲೆ ಹಲ್ಲೆ: ಸಿಸಿಟಿವಿಯಲ್ಲಿ ವಿಡಿಯೋ ಸೆರೆ!

ಚಿಕಿತ್ಸೆಗೋಸ್ಕರ ಆಸ್ಪತ್ರೆಗೆ ದಾಖಲಾಗಿದ್ದ ಕೋವಿಡ್​ ಸೋಂಕಿತ ವ್ಯಕ್ತಿಯೊಬ್ಬ ಕರ್ತವ್ಯ ನಿರತ ವೈದ್ಯನ ಮೇಲೆ ಹಲ್ಲೆ ನಡೆಸಿರುವ ಘಟನೆ ನಡೆದಿದೆ.

Corona patient attacked on doctor
Corona patient attacked on doctor
author img

By

Published : Sep 24, 2020, 3:57 PM IST

ಲಖನೌ: ಉತ್ತರ ಪ್ರದೇಶದ ರಾಜಧಾನಿ ಲಖನೌದಲ್ಲಿನ ಕಿಂಗ್​ ಜಾರ್ಜ್​ ಮೆಡಿಕಲ್​ ಕಾಲೇಜ್​​ನಲ್ಲಿ ಕೊರೊನಾ ಸೋಂಕಿತ ವ್ಯಕ್ತಿಯೊಬ್ಬ ಕರ್ತವ್ಯ ನಿರತ ವೈದ್ಯನ ಮೇಲೆ ಹಲ್ಲೆ ನಡೆಸಿರುವ ಘಟನೆ ನಡೆದಿದ್ದು, ಇದರ ವಿಡಿಯೋ ಇದೀಗ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಕೋವಿಡ್​ ಸೋಂಕಿತನಿಂದ ವೈದ್ಯನ ಮೇಲೆ ಹಲ್ಲೆ

ಕೋವಿಡ್​ ಚಿಕಿತ್ಸೆಗೋಸ್ಕರ ಆಸ್ಪತ್ರೆಗೆ ದಾಖಲಾಗಿದ್ದ ರೋಗಿ ಈ ದಾಳಿ ನಡೆಸಿದ್ದು, ಇದರಿಂದ ವೈದ್ಯರು ಗಾಯಗೊಂಡಿದ್ದಾರೆ. ಇದರ ಜೊತೆಗೆ ರೋಗಿ ಆಸ್ಪತ್ರೆ ಬಾಗಿಲಿನ ಗಾಜು ಒಡೆದು ಹಾಕಿದ್ದಾನೆ. ರೋಗಿಯ ಈ ವರ್ತನೆಯಿಂದ ಇತರ ರೋಗಿಗಳು ಭಯಭೀತರಾಗಿ ಕಿರುಚಾಡಿದ್ದಾರೆ. ಇದರ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿವೆ.

ರೋಗಿಯ ವರ್ತನೆಯಿಂದ ಅನೇಕ ವೈದ್ಯರು ತಾವು ಕರ್ತವ್ಯ ನಿರ್ವಹಿಸುತ್ತಿದ್ದ ಬಾಗಿಲು ಮುಚ್ಚಿಕೊಳ್ಳುವ ಮೂಲಕ ಪ್ರಾಣ ರಕ್ಷಣೆ ಮಾಡಿಕೊಳ್ಳುವ ಕೆಲಸ ಮಾಡಿದ್ದಾರೆ. ಅನೇಕ ಗಂಟೆಗಳ ಬಳಿಕ ಆಸ್ಪತ್ರೆ ಸೆಕ್ಯುರಿಟಿಗಳು ಈತನನ್ನು ಹಿಡಿದಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ವೈದ್ಯಕೀಯ ಕಾಲೇಜಿನ ವಕ್ತಾರ ಡಾ. ಸುಧೀರ್​ ಸಿಂಗ್​​, ವೈದ್ಯರ ಮೇಲೆ ಹಲ್ಲೆ ಮಾಡಿರುವ ರೋಗಿ ಮಾನಸಿಕ ಅಸ್ವಸ್ಥನಾಗಿದ್ದು, ಕೋವಿಡ್​ ತಗುಲಿರುವ ಕಾರಣ ಚಿಕಿತ್ಸೆ ನೀಡಲಾಗುತ್ತಿದೆ ಎಂದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.