ನವದೆಹಲಿ: ಮುಂಬರುವ ವಾರಗಳಲ್ಲಿ ಕಾಂಗ್ರೆಸ್ ಆಡಳಿತದ ರಾಜ್ಯಗಳು ಸಿಎಎ ವಿರುದ್ಧ ನಿರ್ಣಯ ಮಂಡನೆಗೆ ಸಿದ್ಧತೆ ನಡೆಸಿದ್ದು, ರಾಷ್ಟ್ರೀಯ ಜನಸಂಖ್ಯಾ ನೋಂದಣಿ ಪ್ರಕ್ರಿಯೆಯನ್ನು ನಿಲ್ಲಿಸಲಿವೆ ಎಂದು ಹೇಳಲಾಗುತ್ತಿದೆ.
ಪಕ್ಷದ ಮೂಲಗಳ ಪ್ರಕಾರ, ಕಾಂಗ್ರೆಸ್ ಆಡಳಿತ ರಾಜ್ಯಗಳು ಉದ್ದೇಶಿತ ನಿರ್ಣಯದ ಕಾನೂನುಬದ್ಧ ಬದಲಾವಣೆಗಳನ್ನು ಮೌಲ್ಯಮಾಪನ ಮಾಡುತ್ತಿವೆ. ವಿಧಾನಸಭೆ ಸದಸ್ಯರ ಮೂಲಕ ಈ ನಿರ್ಣಯ ಮಂಡಿಸಬೇಕು, ಸರ್ಕಾರದ ಸದಸ್ಯರಿಂದ ಅಲ್ಲ ಎಂದು ನಾವು ಸಲಹೆ ನೀಡಿದ್ದೇವೆ ಎಂದು ತಿಳಿಸಿದ್ದಾರೆ.
ಕಾಂಗ್ರೆಸ್ ಪಕ್ಷದ ಮುಖ್ಯಮಂತ್ರಿಗಳು ಮತ್ತು ಮೈತ್ರಿ ಪಕ್ಷಗಳಿಗೆ ಸಿಎಎ ವಿರುದ್ಧ ನಿರ್ಣಯ ಮಂಡಿಸುವಂತೆ ಪಕ್ಷ ಮಾಹಿತಿ ನೀಡಿದೆ. ಈಗಾಗಲೇ ಕೇರಳ ರಾಜ್ಯದಲ್ಲಿ ಸಿಎಎ ವಿರುದ್ಧ ನಿರ್ಣಯ ಮಂಡಿಸಿದ್ದು, ಪಶ್ಚಿಮ ಬಂಗಾಳದ ಟಿಎಂಸಿ ಪಕ್ಷ ಕೂಡ ನಾವು ಸಿಎಎ ವಿರುದ್ಧವಾಗಿದ್ದೇವೆ ಎಂದು ಪ್ರತಿಭಟನೆ ನಡೆಸುತ್ತಿದೆ.
ಈ ಬಗ್ಗೆ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯಲ್ಲಿ ಸರ್ಚೆ ನಡೆಸಲಾಗಿದ್ದು, ಎಲ್ಲಾ ಮುಖ್ಯಂತ್ರಿಗಳು ಕೂಡ ಎನ್ಆರ್ಸಿ ಕಾರ್ಯವನ್ನ ನಿಲ್ಲಿಸಬೇಕು. ಸಿಎಎ, ಎನ್ಆರ್ಸಿ, ಎನ್ಆರ್ಪಿ ಕಾಯ್ದೆಗಳು ಸಂವಿಧಾನ ವಿರೋಧಿಯಾಗಿವೆ ಎಂದು ತಿಳಿಸಲಾಗಿದೆ.