ಜಿಂದ್(ಹರಿಯಾಣ): ದೇಶದಲ್ಲಿ ಕೊರೊನಾ ವೈರಸ್ ಪ್ರಕರಣಗಳು ದಿನೇ ದಿನೆ ಹೆಚ್ಚಾಗುತ್ತಿದ್ದರೂ, ಕಾಂಗ್ರೆಸ್ ಮುಖಂಡ ರಣದೀಪ್ ಸಿಂಗ್ ಸುರ್ಜೆವಾಲಾ ಇದಾವುದನ್ನು ಲೆಕ್ಕಿಸದೇ ಗುರುವಾರ ಹರಿಯಾಣದ ಜಿಂದ್ ಅನಾಜ್ ಮಂಡಿಯಲ್ಲಿ ರೈತರ ಸಭೆಯನ್ನುದ್ದೇಶಿಸಿ ಯಾವುದೇ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ರ್ಯಾಲಿ ನಡೆಸಿರುವುದು ವರದಿಯಾಗಿದೆ.
ಕೋವಿಡ್-19 ಲಾಕ್‌ಡೌನ್ ಮಧ್ಯೆಯೂ ಗೋಧಿ ಮತ್ತು ಸಾಸಿವೆ ಖರೀದಿ ಕುರಿತು ಚರ್ಚೆ ನಡೆಸಲು ಸುರ್ಜೆವಾಲಾ, ಅನಾಜ್ ಮಂಡಿಗೆ ತೆರಳಿದ್ದಾರೆ ಎಂದು ತಿಳಿದು ಬಂದಿದೆ. ವೈರಸ್ ಹರಡುವಿಕೆ ತಡೆಗಟ್ಟಲು ಲಾಕ್‌ಡೌನ್ ಮಾರ್ಗಸೂಚಿಗಳನ್ನು ಅನುಸರಿಸುವಂತೆ ರಾಜಕೀಯ ಮುಖಂಡರು ಧಾರ್ಮಿಕವಾಗಿ ಸಾರ್ವಜನಿಕರಿಗೆ ಮನವಿ ಮಾಡುತ್ತಿದ್ದರೆ, ಮತ್ತೊಂದೆಡೆ, ಸುರ್ಜೆವಾಲಾ ಜಿಂದ್‌ನಲ್ಲಿ ರೈತರ ಸಭೆಯನ್ನುದ್ದೇಶಿಸಿ ಸಾಮಾಜಿಕ ಅಂತರದ ಮಾನದಂಡಗಳನ್ನು ಉಲ್ಲಂಘಿಸಿದ್ದಾರೆ.
ಈ ರ‍್ಯಾಲಿಯ ಫೋಟೋಗಳು ಸಾಮಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಂಡಾಗ ಈ ಘಟನೆ ಬೆಳಕಿಗೆ ಬಂದಿದೆ. ರಾಜ್ಯವು ಕೋವಿಡ್-19 ಸಾಂಕ್ರಾಮಿಕ ರೋಗದೊಂದಿಗೆ ಹೋರಾಡುತ್ತಿರುವ ಸಮಯದಲ್ಲಿ ಇಂತಹ ಕಾರ್ಯಕ್ರಮವನ್ನು ಆಯೋಜಿಸಿರುವುದರಿಂದ ವೈರಸ್ ಹರಡುವ ಅಪಾಯ ಹೆಚ್ಚಲಿದೆ ಎಂದು ಸ್ಥಳೀಯ ಮುಖಂಡರುಗಳು ಹೇಳಿಕೆ ನೀಡಿದ್ದಾರೆ.