ETV Bharat / bharat

​ಸಿಂಧಿಯಾ ರಾಜೀನಾಮೆಯಿಂದಾಗಿ ಕಾಂಗ್ರೆಸ್​ನ ಜ್ಯೋತಿ ಆರಿಹೋಯಿತೇ? - ಜ್ಯೋತಿರಾಧಿತ್ಯ ಸಿಂಧಿಯಾ ರಾಜಿನಾಮೆಗೆ ಕಾರಣ

ಮಧ್ಯಪ್ರದೇಶದ ಕಮಲನಾಥ್​ ಸರ್ಕಾರದ ಪತನಕ್ಕೆ ಕಾರಣೀಕರ್ತ ಜ್ಯೋತಿರಾದಿತ್ಯ ಸಿಂದಿಯಾ ಎಂಬ ಮಾತುಗಳು ಕೇಳಿ ಬರುತ್ತಿರುವ ಹಿನ್ನೆಲೆ, ದೇಶವ್ಯಾಪಿ ಕಾಂಗ್ರೆಸ್​​ ನಾಯಕರುಗಳು ಸಿಂಧಿಯಾ ವಿರುದ್ಧ ಹರಿಹಾಯ್ದಿದ್ದು, ವೈಯಕ್ತಿಕ ಹಿತಾಸಕ್ತಿಗಾಗಿ ಮಾತೃ ಪಕ್ಷಕ್ಕೆ ದ್ರೋಹವೆಸಗಿದ್ದಾರೆ ಎಂದು ಕಿಡಿಕಾರಿದ್ದಾರೆ.

Scindia
​​ಸಿಂಧಿಯಾ
author img

By

Published : Mar 11, 2020, 8:55 AM IST

Updated : Mar 11, 2020, 9:33 AM IST

ನವದೆಹಲಿ: ಮಧ್ಯಪ್ರದೇಶದ ಯುವ ನಾಯಕ ಎಂದೇ ಹೆಸರು ವಾಸಿಯಾಗಿದ್ದ ಜ್ಯೋತಿರಾದಿತ್ಯ ಸಿಂಧಿಯಾ ನಿನ್ನೆ ಕಾಂಗ್ರೆಸ್​​ ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿದ್ದು, ಕಾಂಗ್ರೆಸ್​​ ಪಕ್ಷಕ್ಕೆ ಒಂದು ರೀತಿಯ ತುಂಬಲಾರದ ನಷ್ಟ ಎಂದರೆ ತಪ್ಪಾಗಲಾರದು. ಈ ಹಿನ್ನೆಲೆ ಕೆಲವು ಕಾಂಗ್ರೆಸ್​​ ನಾಯಕರುಗಳು ಸಿಂಧಿಯಾ ರಾಜೀನಾಮೆ ವಿಚಾರವಾಗಿ ಬೇಸರ ವ್ಯಕ್ತಪಡಿಸಿದರೆ, ಇನ್ನುಳಿದ ನಾಯಕರು ಸಿಂದಿಯಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ವೈಯಕ್ತಿಕ ಆಕಾಂಕ್ಷೆಗಳಿಗೋಸ್ಕರ ತತ್ವ ಸಿದ್ದಾಂತಗಳನ್ನೇ ಮರೆತಿದ್ದಾರೆ ಎಂದು ಲೇವಡಿ ಮಾಡಿದ್ದಾರೆ.

ಕಾಂಗ್ರೆಸ್​​ ಪಕ್ಷದ ಯುವ ಮುಖಂಡರಾಗಿದ್ದ ಸಿಂದಿಯಾ, ಪಕ್ಷದಲ್ಲಿ ತಮ್ಮ ಮಾತಿಗೆ ಬೆಲೆ ದೊರೆಯುತ್ತಿಲ್ಲ ಹಾಗೂ ನಮ್ಮವರನ್ನು ಕಡೆಗಣಿಸಲಾಗುತ್ತಿದೆ ಎಂದು ಪಕ್ಷಕ್ಕೆ ರಾಜೀನಾಮೆ ನೀಡಿದ್ದು, 15 ತಿಂಗಳಿನಿಂದ ಕಾರ್ಯನಿರತವಾಗಿದ್ದ ಕಮಲನಾಥ್​ ನೇತೃತ್ವದ ಸರ್ಕಾರಕ್ಕೆ ತಿಲಾಂಜಲಿ ಬಿಡುವ ಸಮಯ ಸಮೀಪಿಸಿದೆ ಎಂಬುದು ರಾಜಕೀಯ ಬಣದ ಅಭಿಪ್ರಾಯವಾಗಿದೆ.

ಇನ್ನು ಸಿಂಧಿಯಾ ರಾಜಿನಾಮೆ ನೀಡುತ್ತಿದ್ದಂತೆಯೇ ಕಾಂಗ್ರೆಸ್ ಪಕ್ಷದ ನಾಯಕರ, ಟೀಕೆ, ಆಕ್ರೋಶಗಳ ಕಟ್ಟೆ ಒಡೆದಿದ್ದು, 1857 ರಲ್ಲಿ ಈಸ್ಟ್ ಇಂಡಿಯಾ ಕಂಪನಿಯ ವಿರುದ್ಧದ ದಂಗೆ ಮತ್ತು ಆಗಿನ ಸಿಂಧಿಯಾ ರಾಜ ಮನೆತನದ ಪಾತ್ರವನ್ನು ನೆನಪಿಸಿದ್ದು, 1967 ರಲ್ಲಿ ವಿಜಯ್ ರಾಜೆ ಸಿಂದಿಯಾ ಅವರು ಕಾಂಗ್ರೆಸ್​ ಪಕ್ಷದಿಂದ ಬದಲಾವಣೆಗೊಂಡ ಬಗ್ಗೆಯೂ ಉಲ್ಲೇಖಿಸಿದ್ದಾರೆ.

ಪ್ರಸ್ತುತವಾಗಿ ರಾಜಸ್ಥಾನದಲ್ಲಿಯೂ ಆಡಳಿತಾರೂಢ ಕಾಂಗ್ರೆಸ್​​ ಪಕ್ಷದಲ್ಲಿ ಮುಖ್ಯಮಂತ್ರಿ ಅಶೋಕ್​ ಗೆಹ್ಲೋಟ್​​ ಹಾಗೂ ಉಪಮುಖ್ಯಂತ್ರಿ ಸಚಿನ್​ ಪೈಲಟ್​​ ನಡುವೆ ಶೀತಲ ಸಮರ ಉಂಟಾಗಿದೆ ಎಂಬ ಊಹಾಪೋಹಗಳು ಹಬ್ಬಿದ್ದು, ಮಧ್ಯಪ್ರದೇಶದ ಸ್ಥಿತಿ ಮುಂದೆ ರಾಜಸ್ಥಾನಕ್ಕೂ ಬಂದೊದಗಲಿದೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿರುವ ಹಿನ್ನೆಲೆ, ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್​ ಗೆಹ್ಲೊಟ್​, ಸಿಂಧಿಯಾ ವಿರುದ್ಧ ಹರಿಹಾಯ್ದಿದ್ದಾರೆ. ರಾಷ್ಟ್ರೀಯ ಬಿಕ್ಕಟ್ಟಿನ ಸಮಯದಲ್ಲಿ ಬಿಜೆಪಿಯೊಂದಿಗೆ ಕೈಜೋಡಿಸುವುದು ನಾಯಕನ ಸ್ವಯಂ-ಭೋಗದ ರಾಜಕೀಯ ಮಹತ್ವಾಕಾಂಕ್ಷೆಗಳ ಬಗ್ಗೆ ಹೇಳುತ್ತದೆ, ವಿಶೇಷವಾಗಿ ಬಿಜೆಪಿ ಆರ್ಥಿಕತೆ, ಪ್ರಜಾಪ್ರಭುತ್ವ ಸಂಸ್ಥೆಗಳು, ಸಾಮಾಜಿಕ ಮತ್ತು ನ್ಯಾಯಾಂಗವನ್ನು ಹಾಳು ಮಾಡುತ್ತಿರುವಾಗ, ಮಾತೃ ಪಕ್ಷವನ್ನು ತೊರೆದು ಬಿಜೆಪಿಗೆ ಸೇರ್ಪಡೆಗೊಂಡಿರುವುದು ಪ್ರಜಾಪ್ರಭುತ್ವ ಹಾಗೂ ಜನತಂತ್ರಕ್ಕೆ ಮಾಡಿದ ಮಹಾಮೋಸ ಎಂದು ಕಿಡಿಕಾರಿದ್ದಾರೆ.

ಇನ್ನು ಕಾಂಗ್ರೆಸ್​ ಲೋಕಸಭಾ ಸದಸ್ಯ ಅದಿರಂಜನ್​ ಚೌಧರಿ ಕೂಡ ಸಿಂಧಿಯಾ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದ್ದು, ಪಕ್ಷ, ರಾಜಕೀಯ ಇವೆಲ್ಲವುದಕ್ಕಿಂತ ಸಿಂದಿಯಾಗೆ ವೈಯಕ್ತಿಯ ಮಹತ್ವಾಕಾಂಕ್ಷೆಗಳೇ ಹೆಚ್ಚಾದವು. ವೈಯಕ್ತಿಕ ಹಿತಾಸಕ್ತಿಯಿಂದಾಗಿ ಪ್ರಜಾಪ್ರಭುತ್ವಕ್ಕೆ ಮಾರಕವಾಗವಂತಹ ಕೃತ್ಯ ಎಸಗಿದ್ದಾರೆ ಎಂದು ಲೇವಡಿ ಮಾಡಿದ್ದಾರೆ.

ಹರಿಯಾಣದ ಕಾಂಗ್ರೆಸ್​​ ನಾಯಕ ಹಾಗೂ ಶಾಸಕರಾಗಿರುವ ಕುಲ್​ದೀಪ್​ ಬಿಶೋನಿ, ಸಿಂಧಿಯಾ ರಾಜಿನಾಮೆ ಬಗ್ಗೆ ಪ್ರತಿಕ್ರಿಯಿಸಿದ್ದು, ಜ್ಯೋತಿರಾದಿತ್ಯ ಸಿಂಧಿಯಾ ರಾಜಿನಾಮೆಯಿಂದಾಗಿ ಕಾಂಗ್ರೆಸ್​​ಗೆ ತುಂಬಲಾರದ ನಷ್ಟವಾಗಿದೆ. ಮಧ್ಯಪ್ರದೇಶದಲ್ಲಿ ಜ್ಯೋತಿರಾದಿತ್ಯ ಉತ್ತಮ ನಾಯಕತ್ವವನ್ನು ವಹಿಸಿದ್ದು, ನಮ್ಮ ಪಕ್ಷದ ಮುಖ್ಯ ಸ್ತಂಭ ಎಂದರೆ ತಪ್ಪಾಗಲಾರದು ಹಾಗೂ ಬೆಳೆಯುತ್ತಿರುವ ಯುವ ನಾಯಕರಿಗೆ ಪಕ್ಷದಲ್ಲಿ ಬೆಲೆ ಕೊಡದಿರುವುದು ಈ ಅನಾಹುತಕ್ಕೆ ಕಾರಣವಾದುದು ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಅಷ್ಟೇ ಅಲ್ಲದೆ, ಸಿಂಧಿಯಾ ಅಂತಹ ಅದೆಷ್ಟೋ ನಾಯಕರು ಪಕ್ಷದಲ್ಲಿ ಮೂಲೆ ಗುಂಪಾಗುತ್ತಿರುವುದು ತುಂಬಾ ಬೇಸರದ ಸಂಗತಿ. ಪಕ್ಷದಲ್ಲಿ ಚಾಪು ಮೂಡಿಸಿರುವ ಹಾಗೂ ಪಕ್ಷದ ವರ್ಚಸನ್ನು ರಾಜ್ಯದಲ್ಲಿ ಹೆಚ್ಚಿಸುತ್ತಿರುವ ಯುವ ನಾಯಕನಿಗೆ ಬೆಲೆ ಸಿಗದಿರುವುದು ವಿಷಾದದ ವಿಚಾರ ಎಂದು ಬಿಶೋನಿ ಬೇಸರ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್​​ನ ಹಿರಿಯ ನಾಯಕ ಜಯರಾಮ್ ರಮೇಶ್​ ಕೂಡ ಈ ಬಗ್ಗೆ ಸಿಟ್ಟಿಗೆದ್ದಿದ್ದು, ಸಿಂಧಿಯಾ ತಂದೆ ಹಿಂದೊಮ್ಮೆ ಬಿಜೆಪಿ ಪಕ್ಷವನ್ನು ದೇಶದ್ರೊಹಿ ಪಕ್ಷ ಎಂದು ಕರೆದಿದ್ದರು, ಆದರೆ ಅವರ ಸುಪತ್ರನೇ ಈ ದೇಶದ್ರೋಹಿಗಳ ಪಕ್ಷಕ್ಕೆ ಸೇರ್ಪಡೆಗೊಳ್ಳುತ್ತಾನೆ ಎಂದು ಅವರಿಗೆ ತಿಳಿದಿರಲಿಲ್ಲ ಎಂದು ಅಪಹಾಸ್ಯ ಮಾಡಿದ್ದಾರೆ

ಇನ್ನು ಕರ್ನಾಟಕದ ಕೆಪಿಸಿಸಿ ಅಧ್ಯಕ್ಷ ದಿನೇಶ್​ ಗುಂಡೂರಾವ್​ ಸಹ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಸ್ವತಃ ರಾಹುಲ್​​ ಗಾಂಧಿಯವರೇ ಮುಂದೆ ನಿಂತು ಇನ್ನು ಮುಂದೆ ಪಕ್ಷವನ್ನು ನಡೆಸಬೇಕಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಒಟ್ಟರೆಯಾಗಿ ಸಿಂಧಿಯಾ ರಾಜಿನಾಮೆಯಿಂದಾಗಿ ಕಾಂಗ್ರಸ್​​ಗೆ ನುಂಗಲಾರದ ತುತ್ತಾಗಿದ್ದು, ರಾಜ್ಯದಲ್ಲಿ ಕಾಂಗ್ರೆಸ್​ಗೆ ಸಿಕ್ಕ ಪಟ್ಟವನ್ನು ಬಿಜೆಪಿಗೆ ಬಿಟ್ಟು ಕೊಡುವ ಪರಿಸ್ಥಿತಿ ಸಮೀಪಿಸಿದೆ ಎಂಬುದು ಕಾಂಗ್ರೆಸ್​​ಗೆ ದೊಡ್ಡ ತಲೆನೊವಾಗಿ ಪರಿಣಮಿಸಿದೆ.

Last Updated : Mar 11, 2020, 9:33 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.