ತಿರುವನಂತಪುರಂ (ಕೇರಳ): ಗರ್ಭಿಣಿ ಆನೆಯ ಸಾವಿನ ವಿಚಾರದಲ್ಲಿ ಕೇರಳದ ಪಾಲಕ್ಕಾಡ್ ಜಿಲ್ಲೆಯ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದಕ್ಕಾಗಿ ಬಿಜೆಪಿ ನಾಯಕಿ ಮನೇಕಾ ಗಾಂಧಿ ವಿರುದ್ಧ ಕೇರಳ ಪ್ರತಿಪಕ್ಷ ಮುಖಂಡ ರಮೇಶ್ ಚೆನ್ನಿಥಾಲಾ ವಾಗ್ದಾಳಿ ನಡೆಸಿದ್ದಾರೆ.
ಮನೇಕಾ ಗಾಂಧಿ ಕ್ಷಮೆಯಾಚಿಸುವಂತೆ ರಮೇಶ್ ಚೆನ್ನಿಥಾಲಾ ಒತ್ತಾಯಿಸಿದ್ದಾರೆ.
"ನಿಮ್ಮ ಬೇಜವಾಬ್ದಾರಿ ಹೇಳಿಕೆಯು ಜಿಲ್ಲೆಯನ್ನು ಮತ್ತು ಜಿಲ್ಲೆಯ ಜನರನ್ನು ನಿಂದಿಸಿದೆ. ಈ ಜಿಲ್ಲೆಯನ್ನು ಅಪರಾಧದ ಕೇಂದ್ರವೆಂದು ಬಿಂಬಿಸುವ ನಿಮ್ಮ ಹೇಳಿಕೆಯನ್ನು ಹಿಂತೆಗೆದುಕೊಂಡು ಕ್ಷಮೆಯಾಚಿಸಿ" ಎಂದು ಕಾಂಗ್ರೆಸ್ ನಾಯಕ ತಿಳಿಸಿದ್ದಾರೆ.
ಬಿಜೆಪಿ ಈ ವಿಷಯವನ್ನು ರಾಜಕೀಯಗೊಳಿಸುತ್ತಿದೆ. ಈ ರೀತಿಯ ಪ್ರಯತ್ನಗಳು ಖಂಡನೀಯ ಎಂದು ರಮೇಶ್ ಚೆನ್ನಿಥಾಲಾ ಹೇಳಿದ್ದಾರೆ.