ETV Bharat / bharat

ಭಾರತ-ಚೀನಾ ಸಂಘರ್ಷ: ಇಂದು ಕಮಾಂಡರ್ ಹಂತದ ಮಾತುಕತೆ

ಭಾರತ- ಚೀನಾ ನಡುವಿನ ಉದ್ವಿಗ್ನ ಪರಿಸ್ಥಿತಿಯನ್ನು ಕಡಿಮೆ ಮಾಡಲು ಅನೇಕ ಹಂತದ ಮಾತುಕತೆಗಳು ನಡೆದಿದ್ದು, ಇಂದು ಕಮಾಂಡರ್​ ಹಂತದ ಮಾತುಕತೆ ನಡೆಯಲಿದೆ.

author img

By

Published : Jun 30, 2020, 1:36 PM IST

indo china talks
ಭಾರತ ಚೀನಾ ಮಾತುಕತೆ

ನವದೆಹಲಿ: ಗಾಲ್ವಾನ್​ ಕಣಿವೆಯಲ್ಲಿ ಭಾರತ- ಚೀನಾ ಸಂಘರ್ಷದ ವಿಚಾರವಾಗಿ ಅನೇಕ ಬೆಳವಣಿಗೆಗಳು ನಡೆಯುತ್ತಿವೆ. ಅನೇಕ ಹಂತದ ಮಾತುಕತೆಗಳು ವಿಫಲವಾಗಿವೆ. ಕೆಲವೊಂದು ಮಾತುಕತೆಗಳು ಫಲಪ್ರದವಾದಂತೆ ಕಂಡರೂ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ಶಮನಗೊಂಡಿಲ್ಲ. ಈ ಹಿನ್ನೆಲೆಯಲ್ಲಿ ಇಂದು ಮತ್ತೆ ಭಾರತ-ಚೀನಾ ಮಾತುಕತೆ ನಡೆಯಲಿದೆ.

ಉಭಯ ದೇಶಗಳ ಕಮಾಂಡರ್​ಗಳು ಚುಶುಲ್​ ಗಡಿಯಲ್ಲಿ ಸಭೆ ನಡೆಸಲಿದ್ದು, ಲೈನ್​ ಆಫ್​ ಆಕ್ಚುವಲ್​ ಕಂಟ್ರೋಲ್​ (ಎಲ್​ಎಸಿ)ನಲ್ಲಿ ಸೇನೆಯನ್ನು ಎರಡು ದೇಶಗಳು ತೆರವುಗೊಳಿಸುವ ಬಗ್ಗೆ ಮಾತುಕತೆಗಳು ಮುಂದುವರೆಯಲಿವೆ.

16ನೇ ಕಾರ್ಪ್ಸ್​ ಕಮಾಂಡರ್​ ಲೆಫ್ಟಿನೆಂಟ್​ ಜನರಲ್​ ಹರೀಂದರ್​ ಸಿಂಗ್​ ಹಾಗೂ ದಕ್ಷಿಣ ಜಿಯಾಂಗ್​ನ ಮಿಲಿಟರಿ ವಿಭಾಗದ ಕಮಾಂಡರ್​ ಮೇಜರ್ ಜನರಲ್​ ಲಿಯು ಲಿನ್​ ನಡುವಿನ ಮೂರನೇ ಮಾತುಕತೆ ಇದಾಗಿದ್ದು, ಕೆಲವೊಂದು ನಿರೀಕ್ಷೆಗಳನ್ನು ಇಟ್ಟುಕೊಳ್ಳಲಾಗಿದೆ.

ಇದಕ್ಕೂ ಮೊದಲು ಜೂನ್​ 6 ಹಾಗೂ ಜೂನ್​ 22ರಂದು ಚೀನಾ ಭಾಗದ ಮೋಲ್ಡೋ ಎಂಬಲ್ಲಿ ಸಭೆಗಳು ನಡೆದಿದ್ದವು. ಕೊನೆಯ ಸಭೆಯಲ್ಲಿ ಉಭಯ ರಾಷ್ಟ್ರಗಳು ಗಾಲ್ವಾನ್​ ಬಳಿಯ ಗಡಿಯಲ್ಲಿ ಪರಸ್ಪರ ಸೇನೆಯನ್ನು ಹಿಂತೆಗೆದುಕೊಳ್ಳಲು ಒಮ್ಮತ ಸೂಚಿಸಿದ್ದವು. ಆದರೂ ಕೂಡಾ ಚೀನಾದಿಂದ ಗಡಿಯಲ್ಲಿ ಸೇನೆ ಜಮಾವಣೆ ನಡೆದಿತ್ತು. ಈಗ ಮಾತುಕತೆಗಳ ಮೂಲಕ ಈ ವಿವಾದವನ್ನು ಬಗೆಹರಿಸಿಕೊಳ್ಳುವುದನ್ನು ನಿರೀಕ್ಷಿಸಲಾಗಿದೆ.

ಇಂದು ಭಾರತ -ಚೀನಾ ಸಂಘರ್ಷದ ಬಗ್ಗೆ ಪ್ರಧಾನಿ ಮೋದಿ ಮಾತನಾಡಲಿದ್ದಾರೆ ಎನ್ನಲಾಗಿದ್ದು, ಚೀನಾದ ಮೊಬೈಲ್​ ಆಪ್ಲಿಕೇಷನ್​ಗಳನ್ನು ಬ್ಯಾನ್​ ಮಾಡಿದ ನಂತರ ಅವತರ ಭಾಷಣ ತೀವ್ರ ಕುತೂಹಲ ಮೂಡಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.