ನವದೆಹಲಿ: ಕಾಂಗ್ರೆಸ್ ಮೈತ್ರಿ ಸರ್ಕಾರದ ರಾಜ್ಯಗಳು ಮತ್ತು ಕೈ ಪಕ್ಷ ಆಡಳಿತದಲ್ಲಿರುವ ಕೇಂದ್ರಾಡಳಿತ ಪ್ರದೇಶಗಳಲ್ಲಿನ ಮುಖ್ಯಮಂತ್ರಿಗಳು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗಿಂತ ಹೆಚ್ಚು ಜನಪ್ರಿಯರಾಗಿದ್ದಾರೆ ಎಂದು ಸಮೀಕ್ಷೆಯೊಂದು ಹೇಳಿದೆ.
ಐಎಎನ್‌ಎಸ್ ಸಿವೋಟರ್ಸ್ ಪ್ರಕಾರ ಛತ್ತೀಸ್‌ಗಢದಲ್ಲಿ ಕಾಂಗ್ರೆಸ್ ಸರ್ಕಾರ, ಮಹಾರಾಷ್ಟ್ರ ಮತ್ತು ರಾಜಸ್ಥಾನದಲ್ಲಿ ಕಾಂಗ್ರೆಸ್ ಮೈತ್ರಿ ಸರ್ಕಾರಗಳಿವೆ. ಛತ್ತೀಸ್‌ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರ ಕಾರ್ಯಕ್ಷಮತೆ ತೃಪ್ತಿ ತಂದಿದೆ ಎಂದು 56.74 ರಷ್ಟು ಜನ 81.06 ರಷ್ಟು ಅಂಕಗಳನ್ನು ನೀಡಿದ್ದಾರೆ ಎಂದು ಅಂಕಿ - ಅಂಶಗಳನ್ನು ಬಿಡುಗಡೆ ಮಾಡಿದೆ.
ಮಹಾರಾಷ್ಟ್ರದಲ್ಲಿ ಮಹಾವಿಕಾಸ್ ಅಘಾಡಿ ಮೈತ್ರಿ ಸರ್ಕಾರವಿದೆ. ಇಲ್ಲಿನ ಮೈತ್ರಿ ಸರ್ಕಾರದೊಂದಿಗೆ ಕಾಂಗ್ರೆಸ್ ಕೈಜೋಡಿಸಿದೆ. ಮುಖ್ಯಮಂತ್ರಿ ಉದ್ಧವ್ ಠಾಕ್ರೆ ರಾಜ್ಯದಲ್ಲಿ ಮಹಾಮಾರಿ ಕೋವಿಡ್ ಪರಿಸ್ಥಿತಿಯನ್ನು ಉತ್ತಮವಾಗಿ ನಿರ್ವಹಿಸುತ್ತಿದ್ದು, ಇವರ ಆಡಳಿತ ತುಂಬಾ ತೃಪ್ತಿದಾಯಕವಾಗಿದೆ ಎಂದು 76.52 ರಷ್ಟು ಮಂದಿ 63.72ರಷ್ಟು ಅಂಕಗಳನ್ನು ನೀಡಿದ್ದಾರೆ. ಕೇವಲ 11.36ರಷ್ಟು ಜನ ಮಾತ್ರ ಇವರ ಆಡಳಿತ ತೃಪ್ತಿ ತಂದಿಲ್ಲ ಎಂದು ಹೇಳಿದ್ದಾರೆ.
ರಾಜಸ್ಥಾನ, ಕಾಂಗ್ರೆಸ್ ಆಡಳಿತ ಇರುವ ಮತ್ತೊಂದು ರಾಜ್ಯವಾಗಿದ್ದು, 2018ರಲ್ಲಿ ಬಿಜೆಪಿಯನ್ನು ಸೋಲಿಸಿದ ಕೈ ಪಕ್ಷ ಅಧಿಕಾರಕ್ಕೆ ಬಂದಿದೆ. ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರಿಗೆ 59.71 ರಷ್ಟು ಜನ ಇವರ ಕಾರ್ಯವೈಖರಿಗೆ ಸಂತಸ ವ್ಯಕ್ತಪಡಿಸಿದ್ದು, 65.61ರಷ್ಟು ಅಂಕಗಳನ್ನು ನೀಡಿದ್ದಾರೆ.
ಇನ್ನೂ, ಜಾರ್ಖಂಡ್‌ನಲ್ಲೂ ಕಾಂಗ್ರೆಸ್ ಮೈತ್ರಿ ಸರ್ಕಾರವಿದೆ. ಇಲ್ಲಿನ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರಿಗೆ ಶೇಕಡಾ 61.26ರಷ್ಟು ಅಂಕಗಳನ್ನು ನೀಡಿದ್ದಾರೆ.
ಕಾಂಗ್ರೆಸ್ ರಾಜ್ಯಗಳ ಮುಖ್ಯಮಂತ್ರಿಗಳ ಜನಪ್ರಿಯತೆಗೆ ಹೋಲಿಸಿದರೆ ಎಐಸಿಸಿಯ ಮಾಜಿ ಅಧ್ಯಕ್ಷ ಹಾಗೂ ನಾಯಕ ರಾಹುಲ್ ಗಾಂಧಿ ಅವರಿಗೆ ನೀಡಿರುವ ಅಂಕಗಳು ತೀರಾ ಕಡಿಮೆ ಇವೆ. ಸಿಎಂ ಭೂಪೇಶ್ ಬಘೇಲ್‌ಗೆ 81.06ರಷ್ಟು, ಸೊರೇನ್‌ಗೆ 62.26ರಷ್ಟು ಜನ ಮೆಚ್ಚಿಕೊಂಡಿದ್ರೆ ರಾಹುಲ್ ಗಾಂಧಿಗೆ ಕೇವಲ 6.2ರಷ್ಟು ಮಂದಿ ಓಕೆ ಅಂದಿದ್ದಾರೆ.
ಇನ್ನು ಪಂಜಾಬ್ನ ಸಿಎಂ ಅಮರೀಂದರ್ ಸಿಂಗ್ ಗೆ ಕೇವಲ 27.51 ರಷ್ಟು ಜನರು ಉತ್ತಮ ಎಂದಿದ್ದಾರೆ.