ETV Bharat / bharat

ನಾನೇ ನೇರವಾಗಿ ಹೇಳುವವರೆಗೂ ಯಾವುದೇ ಮಾಹಿತಿ ನೀಡಬೇಡಿ: NPR ವಿರೋಧಿಸಿ ದೀದಿ ಸೂಚನೆ

author img

By

Published : Feb 4, 2020, 4:50 PM IST

Updated : Feb 4, 2020, 5:05 PM IST

ಪೌರತ್ವ (ತಿದ್ದುಪಡಿ) ಕಾಯ್ದೆ, ರಾಷ್ಟ್ರೀಯ ಜನಸಂಖ್ಯಾ ನೋಂದಣಿ ಹಾಗು ರಾಷ್ಟ್ರೀಯ ಪೌರತ್ವ ನೋಂದಣಿ ವಿರೋಧಿಸಿ ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯಲ್ಲಿ ಸಿಎಂ ಮಮತಾ ಬ್ಯಾನರ್ಜಿ ರ‌್ಯಾಲಿ ನಡೆಸುತ್ತಿದ್ದಾರೆ.

West Bengal Chief Minister Mamata Banerjee
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ: ರಾಷ್ಟ್ರೀಯ ಜನಸಂಖ್ಯಾ ನೋಂದಣಿಯನ್ನು ವಿರೋಧಿಸುತ್ತಾ ಬಂದಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ನಾನೇ ನೇರವಾಗಿ ಹೇಳುವವರೆಗೂ ಯಾರೂ ಕೂಡ ನಿಮ್ಮ ಕುಟುಂಬಕ್ಕೆ ಸಂಬಂಧಿಸಿದ ಯಾವುದೇ ಮಾಹಿತಿಗಳನ್ನು ನೀಡಬೇಡಿ ಎಂದು ರಾಜ್ಯದ ಜನತೆಗೆ ಸೂಚಿಸಿದ್ದಾರೆ.

ಸಿಎಎ, ಎನ್​ಪಿಆರ್, ಎನ್‌ಆರ್‌ಸಿವಿರೋಧಿಸಿ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ರ‌್ಯಾಲಿ

ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ), ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್​ಪಿಆರ್​) ಹಾಗೂ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ವಿರೋಧಿಸಿ ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯಲ್ಲಿ ಸಿಎಂ ಮಮತಾ ಬ್ಯಾನರ್ಜಿ ರ‌್ಯಾಲಿ ನಡೆಸುತ್ತಿದ್ದಾರೆ.

ಈ ವೇಳೆ ಮಾತನಾಡಿದ ಅವರು, ಎನ್‌ಆರ್‌ಸಿಯಿಂದಾಗಿ ಅಸ್ಸೋಂನಲ್ಲಿ 100 ಜನರು ಸಾವನ್ನಪ್ಪಿದ್ದಾರೆ, ಎನ್‌ಆರ್‌ಸಿ ಭೀತಿಯಿಂದಾಗಿ ಪಶ್ಚಿಮ ಬಂಗಾಳದಲ್ಲಿ 31-32 ಜನರು ಮೃತಪಟ್ಟಿದ್ದಾರೆ. ಯಾರೇ ಬಂದು ನಿಮ್ಮ ದಾಖಲೆಗಳನ್ನು ತೋರಿಸಿ ಎಂದರೆ ತೋರಿಸಬೇಡಿ. ಆಧಾರ್​ ಕಾರ್ಡ್​ ಸೇರಿದಂತೆ ನಿಮ್ಮ ಕುಟುಂಬಕ್ಕೆ ಸಂಬಂಧಿಸಿದ ಯಾವುದೇ ಮಾಹಿತಿಗಳನ್ನು ಕೇಳಿದರೆ ನಾನು ಹೇಳುವವರೆಗೂ ನೀಡಬೇಡಿ ಎಂದು ಜನರಿಗೆ ಸೂಚಿಸಿದ್ದಾರೆ.

Last Updated : Feb 4, 2020, 5:05 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.